ವಿಜಯಪುರ: ನನಗೆ ವಯಸ್ಸಾಯಿತು ಎಂದು ಭಾವಿಸಬೇಡಿ, ನಾನು ಇನ್ನೂ ಗಟ್ಟಿಯಾಗಿಯೇ ಇದ್ದೇನೆ. ಪಕ್ಷದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ, ಮುಂದೆಯೂ ಪಕ್ಷದ ಕಾರ್ಯದಲ್ಲಿ ಭಾಗಿಯಾಗಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಪಕ್ಷಕ್ಕಾಗಿ ಕೆಲಸ ಮಾಡಲು ನಾನು ಸದಾ ಉತ್ಸುಕನಾಗಿರುತ್ತೇನೆ. ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದು ಹೇಳಿದರು.
ಯಡಿಯೂರಪ್ಪನವರಿಗೆ 79, 80 ವಯಸ್ಸಾಯಿತು ಅಂತ ಯೋಚನೆ ಮಾಡಬೇಡಿ, 90 ವರ್ಷ ದಾಟುವವರೆಗೂ ಇದೇ ರೀತಿ ಚಟುವಟಿಕೆಯಿಂದ ಕೆಲಸ ಮಾಡುತ್ತೇನೆ ಎಂದ ಬಿಎಸ್ವೈ ಮಾತಿಗೆ ಕಾರ್ಯಕರ್ತರು ಸಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. (ದಿಗ್ವಿಜಯ ನ್ಯೂಸ್)
ಖತಾರ್ ಏರ್ವೇಸ್ ನಿರ್ಬಂಧಿಸಿ ಟ್ವಿಟ್ಟರ್ ಅಭಿಯಾನ: ಕಾರಣವೇನು ಗೊತ್ತಾ?