ಕುಷ್ಠ ರೋಗಿಗಳನ್ನು ಕೀಳಾಗಿ ನೋಡಬೇಡಿ

ಮದ್ದೂರು: ಕುಷ್ಠರೋಗವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ರೋಗ ಗುಣವಾಗುತ್ತದೆ ಎಂದು ಕುಷ್ಟರೋಗ ಕಚೇರಿ ಮೇಲ್ವಿಚಾರಕ ಚಿಕ್ಕರಸೇಗೌಡ ಎಂದರು.

ತಾಲೂಕಿನ ಕದಲೂರು ಗ್ರಾಮದ ಶ್ರೀ ಭೈರವೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕುಷ್ಠ ರೋಗದ ಕುರಿತು ಗುರುವಾರ ವಿಶೇಷ ಉಪನ್ಯಾಸ ನೀಡಿದರು. ಸಮಾಜದಲ್ಲಿ ಕುಷ್ಟ ರೋಗಿಗಳನ್ನು ಕೀಳಾಗಿ ನೋಡಬಾರದು ಮತ್ತು ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು. ಕುಷ್ಠ ರೋಗ ಹೇಗೆ ಹರಡುತ್ತದೆ? ಹರಡಲು ಕಾರಣಗಳೇನು? ಹಾಗೂ ಮುಂಜಾಗ್ರತವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ರಸಪ್ರಶ್ನೆ ಸ್ಪರ್ಧೆ ವಿಜೇತರು: ಕುಷ್ಠ ರೋಗದ ಬಗ್ಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 8ನೇ ತರಗತಿ ದಿವ್ಯಾ ಪ್ರಥಮ, 10ನೇ ತರಗತಿ ಅಂಕಿತಾ ದ್ವಿತೀಯ ಹಾಗೂ 10ನೇ ತರಗತಿ ದೀಪ್ತಿ ತೃತೀಯ ಬಹುಮಾನ ಪಡೆದರು.

ಮುಖ್ಯಶಿಕ್ಷಕಿ ನಾಗರತ್ನಮ್ಮ, ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಸಹಾಯಕ ಅಧಿಕಾರಿ ಚಿಕ್ಕರಾಯಪ್ಪ, ಮಹಿಳಾ ಆರೋಗ್ಯ ಸಹಾಯಕಿ ಭವ್ಯರಾಣಿ, ಮಹಮದ್ ಕುಟ್ಟಿ ಇದ್ದರು.

Leave a Reply

Your email address will not be published. Required fields are marked *