ಮೋದಿ ಪಾಲಕರನ್ನು ಅವಮಾನಿಸುವುದಿಲ್ಲ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ: ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ಛತ್ತೀಸಗಢ್, ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ‘ಪ್ರೀತಿ’ಯಿಂದಲೇ ಜಯಗಳಿಸಿದೆ. ಲೋಕಸಭೆಯ ಚುನಾವಣೆಯಲ್ಲೂ ಮುಂದುವರಿಸಲಿದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ತಂದೆಯನ್ನು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ತಂದೆ- ತಾಯಿ ಬಗ್ಗೆ ನಾನೆಂದೂ ಕೆಟ್ಟದ್ದನ್ನೂ ಮಾತನಾಡುವುದಿಲ್ಲ. ಏಕೆಂದರೆ ನಾನು ಆರ್​ಎಸ್​ಎಸ್ ಅಥವಾ ಬಿಜೆಪಿಗೆ ಸೇರಿದವನಲ್ಲ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಉಜ್ಜೆ ೖನ್ ಜಿಲ್ಲೆಯ ತರಾನಾದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ನಾನು ಸತ್ತರೂ ಕೂಡ ಅವರ ಪಾಲಕರನ್ನು ಅವಮಾನಿಸುವುದಿಲ್ಲ. ಪ್ರಧಾನಿಯ ದ್ವೇಷ ಮತ್ತು ಕೋಪವನ್ನು ಪ್ರೀತಿಯಿಂದಲೇ ಎದುರಿಸುವುದಾಗಿ ಹೇಳಿದರು.

ಶಬ್ದಕೋಶಕ್ಕೆ ಮೋದಿಲೈ: ಪ್ರಧಾನಿ ನರೇಂದ್ರ ಮೋದಿಯನ್ನು ಟ್ವೀಟರ್​ನಲ್ಲಿ ಕಾಲೆಳೆದಿರುವ ರಾಹುಲ್ ಗಾಂಧಿ, ಶಬ್ದಕೋಶಕ್ಕೆ ‘ಮೋದಿಲೈ’ ಎನ್ನುವ ಶಬ್ದ ಸೇರಿಕೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಸತ್ಯವನ್ನು ಪದೇಪದೇ ಬದಲಾಯಿಸುವುದು ಇದರ ಅರ್ಥವಾಗಿದೆ.

ಭಗತ್ ಸಿಂಗ್ ಪ್ರತಿಮೆ ಶುದ್ಧೀಕರಣ

ಇಂದೋರ್: ಹುತಾತ್ಮ ಭಗತ್ ಸಿಂಗ್ ಪ್ರತಿಮೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾಲಾರ್ಪಣೆ ಮಾಡಿದ ಬಳಿಕ ಆ ಸ್ಥಳವನ್ನು ಸಿಖ್ ಯುವಕರ ಗುಂಪೊಂದು ಹಾಲು ಹಾಗೂ ಪವಿತ್ರ ಜಲದಿಂದ ಶುದ್ಧೀಕರಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಸಿಖ್ ಹತ್ಯಾಕಾಂಡವನ್ನು ಆಗಿದ್ದು ಆಗಿ ಹೋಯ್ತು ಎಂದು ವಿಶ್ಲೇಷಿಸಿದ್ದನ್ನು ಖಂಡಿಸಿ ಪ್ರತಿಮೆ ಶುದ್ಧಗೊಳಿಸಲಾಗಿದೆ ಎಂದು ಯುವಕರು ಹೇಳಿದ್ದಾರೆ.

ದೇಶದ್ರೋಹದ ಹೇಳಿಕೆಯಲ್ಲ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ದೇಶದ್ರೋಹ ಆರೋಪ ಪ್ರಕರಣದಲ್ಲಿ ಹುರುಳಿಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 2016ರ ಸರ್ಜಿಕಲ್ ಸ್ಟ್ರೈಕ್ ಕುರಿತಾದ ಪ್ರಧಾನಿ ಮೋದಿ ಹೇಳಿಕೆ ಖಂಡಿಸಿದ್ದ ರಾಹುಲ್ ನೀಡಿದ ಹೇಳಿಕೆ ದೇಶದ್ರೋಹ ಎಂದು ದೂರು ದಾಖಲಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿರುವ ಪೊಲೀಸರು, ರಾಹುಲ್ ಹೇಳಿಕೆಯನ್ನು ದೇಶದ್ರೋಹದ ಆರೋಪ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ. ಈ ಪ್ರಕರಣದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಯೋಧರ ರೈತರ ರಕ್ತದ ಹಿಂದೆ ಅಡಗುತ್ತಿದ್ದಾರೆ. ಅವರ ತ್ಯಾಗವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಟೀಕಿಸಿದ್ದರು.

Leave a Reply

Your email address will not be published. Required fields are marked *