Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ವರ್ಗಕ್ಕೆ ಹಣ ಪಡೆದಿಲ್ಲ

Tuesday, 07.08.2018, 3:04 AM       No Comments

ಬೆಂಗಳೂರು: ನನ್ನ ಇಲಾಖೆಯಲ್ಲಿ ಹಣ ಪಡೆದು ವರ್ಗಾವಣೆ ಮಾಡಿಲ್ಲ. ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಕಾನೂನು ಬದ್ಧವಾಗಿ ವರ್ಗಾವಣೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಳಿ ವರ್ಗಾವಣೆ ದಂಧೆ ಬಗ್ಗೆ ದಾಖಲೆ ಇದ್ದರೆ ಕೊಡಲಿ ಕ್ರಮ ಕೈಗೊಳ್ಳುವೆ ಎಂದು ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದರು. ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇವತ್ತಿನವರೆಗೂ ನಾನು ಕೈ ಆಡಿಸಿಲ್ಲ, ಕಾಲೂ ಆಡಿಸಿಲ್ಲ. ಬೇಕಿದ್ದರೆ ಉಪಮುಖ್ಯಮಂತ್ರಿ ಕೇಳಿ ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿ ಯನ್ನು ವರ್ಗಾವಣೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನೇಮಕವಾದ ಅಧಿಕಾರಿಗಳೇ ಇದ್ದಾರೆ ಎಂದು ತಿಳಿಸಿದರು. ರೇವಣ್ಣ ಸೂಪರ್ ಸಿಎಂ ಎಂಬ ಬಿಜೆಪಿ ಟ್ವೀಟ್ ಕುರಿತ ಪ್ರಶ್ನೆಗೆ, ಬಿಜೆಪಿಯವರಿಗೆ ಪ್ರಧಾನಿ ಮುಂದೆ ನಿಂತು ಮಾತನಾಡುವ ಶಕ್ತಿಯಿಲ್ಲ. ರೈತರ ಸಾಲಮನ್ನಾ ಬಗ್ಗೆ ಅವರ ಬಳಿ ಚಕಾರವೆತ್ತಲ್ಲ ಎಂದು ವ್ಯಂಗ್ಯವಾಡಿದರು.

ಉತ್ತರ-ದಕ್ಷಿಣ ಭೇದಭಾವವಿಲ್ಲ: ಕೋಲಾರ ಹಾಲು ಒಕ್ಕೂಟಕ್ಕೆ ಸೇರಿದ್ದ ಕೆಲವೊಂದು ಟೆಂಡರ್​ಗಳನ್ನು ಹಾಸನಕ್ಕೆ ಒತ್ತಾಯದಿಂದ ವರ್ಗಾಯಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ನಿರಾಧಾರ. ಇದರಲ್ಲಿ ನಾನು ಒತ್ತಡ ತರುತ್ತಿಲ್ಲ. ಮಾಜಿ ಸಿಎಂ ವೀರಪ್ಪ ಮೊಯ್ಲಿ ನನ್ನ ಜತೆ ಮಾತನಾಡಿದ್ದಾರೆ. ರಕ್ಷಣಾ ಇಲಾಖೆಗೆ ಹಾಲು ವಿತರಿಸಲು ಒಕ್ಕೂಟಗಳ ನಡುವೆ ಟೆಂಡರ್ ಕರೆಯಲಾಗುತ್ತದೆ. ಹಾಸನ ಹಾಲು ಒಕ್ಕೂಟದಲ್ಲಿ 10 ಲಕ್ಷ ಲೀ.ಗೂ ಅಧಿಕ ಹಾಲು ಉತ್ಪಾದನೆಯಿದೆ. 10 ಲಕ್ಷ ಲೀ. ಹಾಲು ಉತ್ಪಾದಿಸುವ ಒಕ್ಕೂಟಗಳು ಟೆಂಡರ್​ನಲ್ಲಿ ಭಾಗವಹಿಸುತ್ತವೆ. ಅದರಂತೆ ನಮ್ಮ ಹಾಸನ ಹಾಲು ಒಕ್ಕೂಟವೂ ಭಾಗವಹಿಸುತ್ತದೆ. ಅದನ್ನೇ ರೇವಣ್ಣ ಒತ್ತಡ ಹೇರಿ ಟೆಂಡರ್ ತಗೆದುಕೊಳ್ಳುತ್ತಾರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಕೋಲಾರ ಹಾಲು ಒಕ್ಕೂಟ ಮಂಜೂರಾಗಿತ್ತು. ನಮಗೆ ಬೆಂಗಳೂರು, ಕೋಲಾರ, ಹಾಸನ ಬೇರೆ ಎಂಬ ಭಾವನೆಯಿಲ್ಲ ಎಂದರು.

ತಾರತಮ್ಯ ಆರೋಪ

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿರೋಧ ಪಕ್ಷದವರು ಉತ್ತರ, ದಕ್ಷಿಣ ಕರ್ನಾಟಕಗಳ ನಡುವೆ ತಾರತಮ್ಯದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ತಾರತಮ್ಯವಾಗಿದೆ ಎಂದು ಹೇಳಿಲಿ. ಮುಖ್ಯಮಂತ್ರಿ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಲಾಗುವುದು. ಆದರೆ, ಅದನ್ನು ಬಿಟ್ಟು ಉತ್ತರ ಕರ್ನಾಟಕ ಕಡೆಗಣಿಸಲಾಗುತ್ತಿದೆ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ ರೇವಣ್ಣ, ನಾನು ಕೇವಲ ಜೆಡಿಎಸ್, ಕಾಂಗ್ರೆಸ್ ಸಚಿವನಲ್ಲ. ಎಲ್ಲ ಪಕ್ಷಗಳ ಮಂತ್ರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸಾಲಮನ್ನಾ ಆತಂಕ ಬೇಡ

ಬೆಂಗಳೂರು: ಕೃಷಿ ಸಾಲಮನ್ನಾ ಬಗ್ಗೆ ರೈತರ್ಯಾರೂ ಆತಂಕಪಡುವ ಅಗತ್ಯವಿಲ್ಲ. ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಸಾಲಮನ್ನಾ ಸಂಬಂಧ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಈ ಕಾರಣಕ್ಕೆ ಕೊಂಚ ವಿಳಂಬವಾಗಿದೆ. ಒಮ್ಮೆ ಅಧಿಕೃತ ಆದೇಶ ಹೊರಬಿದ್ದರೆ ಗೊಂದಲಗಳು ಪರಿಹಾರವಾಗಲಿದೆ ಎಂದು ಹೇಳಿದರು. ಒಂದು ವೇಳೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕುಗಳು ನೋಟಿಸ್ ನೀಡಿದರೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದರು.


ಪರಿವಾರ ಒಗ್ಗೂಡಿಸುವೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಧ್ರುವೀಕರಣದ ಸುಳಿವು ನೀಡಿರುವ ಜೆಡಿಎಸ್ ನೂತನ ಅಧ್ಯಕ್ಷ ಎಚ್. ವಿಶ್ವನಾಥ್, ಜನತಾ ಪರಿವಾರದಿಂದ ದೂರ ಹೋಗಿರುವ ನಾಯಕರನ್ನು ಮತ್ತೆ ಒಂದುಗೂಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅತ್ಯಂತ ಸಮರ್ಥ ಪಕ್ಷವಾಗಿ ಹೊರಹೊಮ್ಮಬೇಕೆಂಬುದು ನನ್ನ ಕನಸು. ನಾನಾ ಕಾರಣಗಳಿಂದ ಜನತಾ ಪರಿವಾರದಿಂದ ಸರಿದು ಹೋಗಿರುವ ಮುಖಂಡರು ಹಾಗೂ ಕಾರ್ಯಕರ್ತರನ್ನು ವಾಪಸ್ ಕರೆತರುವುದು ನನ್ನ ಮೊದಲ ಪ್ರಯತ್ನವಾಗಿದೆ. ಮುಂಬರುವ ನಗರ ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು. ಆ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕರ ಸಲಹೆಗಳನ್ನು ಪಡೆದು, ಯುವ ಸಮೂಹವನ್ನು ಮುಂದಿಟ್ಟುಕೊಂಡು ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದರು.

ನಂತರ ಜೆಡಿಎಸ್ ರಾಜ್ಯ ಕಚೇರಿ ಜಯಪ್ರಕಾಶ ನಾರಾಯಣ ಭವನಕ್ಕೆ ತೆರಳಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಕಚೇರಿ ಪ್ರವೇಶ ಮಾಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿ ಹಲವರು ಜತೆಗಿದ್ದರು. ಮುಖಂಡರು ಹಾಗೂ ಕಾರ್ಯಕರ್ತರ ಜತೆ ಔಪಚಾರಿಕ ಚರ್ಚೆ ನಡೆಸಿದರು.

Leave a Reply

Your email address will not be published. Required fields are marked *

Back To Top