ಹುನಗುಂದ: ಯುವ ಜನಾಂಗ ತೋರಿಕೆಯ ಮೋಹದ ಬಲೆಯಲ್ಲಿ ಸಿಲುಕಿದೆ ಎಂದು ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಕರು ನೈತಿಕ ಮತ್ತು ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದಾರೆ. ಇದು ತುಂಬಾ ಆತಂಕಕಾರಿ ಬೆಳವಣಿಗೆ ಎಂದರು.
ಸಿಡಿಸಿ ಉಪಾಧ್ಯಕ್ಷ ಮಹಾಂತೇಶ ಪರೂತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯೆ ರೇಖಾ ಬ್ಯಾಳಿ, ಚಂದ್ರಶೇಖರ ಚಟ್ನಿಹಾಳ, ಹುಚ್ಚೇಶ ಕಾಳಹಸ್ತಿಮಠ ಮತ್ತು ರವಿ ಹಳಪೇಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿ ವಾಹಿದ್ ಕಡಿವಾಲ, ವಿಜಯಲಕ್ಷ್ಮಿ ಉಪನಾಳ ಮತ್ತು ಉಪನ್ಯಾಸಕಿ ಛಾಯಾ ಪುರಂದರೆ ಅನಿಸಿಕೆ ಹೇಳಿದರು. ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಶ್ರೀಧರ ಕಾವಲಿ ವಂದಿಸಿದರು. ಎಚ್.ಟಿ.ಅಗಸಿಮುಂದಿನ ವಾರ್ಷಿಕ ವರದಿ ಓದಿದರು. ಐ.ಎಚ್. ನಾಯಿಕ ಮತ್ತು ವಿದ್ಯಾ ಬೀಳಗಿ ನಿರೂಪಿಸಿದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಕಾರ್ಯಕ್ರಮ ಮುನ್ನ ಸರಸ್ವತಿ ಪೂಜೆ ನಡೆಯಿತು.