Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಬಿಜೆಪಿ ಮಂಡಿಸಿದ್ದ ಬಜೆಟ್ ಜತೆ ಹೋಲಿಕೆ ಏಕೆ?

Wednesday, 21.02.2018, 3:03 AM       No Comments

ಬೆಂಗಳೂರು: ಬಜೆಟ್​ನಲ್ಲಿ ಬಿಜೆಪಿ ಸರ್ಕಾರದ ಆಯವ್ಯಯದ ಲೆಕ್ಕಾಚಾರ ಪ್ರಸ್ತಾಪ ಮಾಡಿರುವುದಕ್ಕೆ ಬಿಜೆಪಿ ಆಕ್ಷೇಪಿಸಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಜೆಟ್ ಕುರಿತು ಮಾತನಾಡುವಾಗ ಅಸಮಾಧಾನ ಹೊರಹಾಕಿದರು.

13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಚುನಾವಣೆ ಉದ್ದೇಶಕ್ಕಾಗಿಯೇ ಈ ರೀತಿ ತುಲನೆ ಮಾಡಿದ್ದಾರೆ. ಬಜೆಟ್ ಗಾತ್ರದ ಆಧಾರದ ಮೇಲೆ ಇಲಾಖೆಗಳಿಗೆ ಹಣ ಹಂಚಿಕೆಯಾಗುತ್ತದೆ ಎಂಬ ಪರಿಜ್ಞಾನವಿಲ್ಲದೆ ಈಗ ನಾವು ಹೆಚ್ಚು ಹಣ ಕೊಟ್ಟಿದ್ದು ಎಂದು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಬಂದಾಗ ಬಜೆಟ್ ಗಾತ್ರ 35 ಸಾವಿರ ಕೋಟಿ ರೂ. ಇತ್ತು. ನಂತರ ಅದು 1 ಲಕ್ಷ ಕೋಟಿ ರೂ. ದಾಟಿತು. ಈಗ ಎರಡು ಲಕ್ಷ ಕೋಟಿ ರೂ. ಮುಟ್ಟಿದೆ. ಈ ಸಂಗತಿ ತಿಳಿದಿದ್ದರೂ ಬಜೆಟ್​ನಲ್ಲಿ ನಮ್ಮ ಸರ್ಕಾರವನ್ನು ಟೀಕಿಸುವ ಕೆಲಸ ಮಾಡಲಾಗಿದೆ ಎಂದರು.

ಯಾವುದರಲ್ಲಿ ನಂ.1?: ಈ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 3,593 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡೇ ಸ್ಥಾನದಲ್ಲಿದೆ ಎಂದು ಶೆಟ್ಟರ್ ಹೇಳಿದರು. ಪ್ರಧಾನಿ ಬಂದಾಗ ಕರ್ನಾಟಕ ನಂ.1 ಎಂದು ಫಲಕ ಹಾಕಿಕೊಳ್ಳುವ ಸರ್ಕಾರ ಯಾವುದರಲ್ಲಿ ನಂಬರ್ ಒನ್ ಇದ್ದೇವೆಂಬುದನ್ನು ಸ್ಪಷ್ಟಪಡಿಸಲಿ ಎಂದರು. ಐಟಿ, ಬಿಟಿ ಎಲ್ಲವೂ ಆಯಾ ಕ್ಷೇತ್ರದ ಪ್ರಯತ್ನ. ಈ ಸರ್ಕಾರ ಬರುವ ಮುನ್ನವೂ ನಂಬರ್ ಒನ್ ಸ್ಥಾನದಲ್ಲಿಯೇ ಇದೆ. ಇದರಲ್ಲಿ ಈ ಸರ್ಕಾರ ಪಾತ್ರ ಏನಿದೆ ಎಂದು ವ್ಯಂಗ್ಯವಾಡಿದರು. ಅಪರಾಧ ಪ್ರಕರಣ, ಅತ್ಯಾಚಾರ ಪ್ರಕರಣ, ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರದಲ್ಲಿ ಈ ರಾಜ್ಯ ನಂಬರ್ ಒನ್ ಆಗಿದೆ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.


ಸರ್ವ ಪಕ್ಷ ಸಭೆ ಕರೆಯಿರಿ

ಬೆಂಗಳೂರು: ನಗರದಲ್ಲಿ ಮಾದಕವಸ್ತು ಮಾರಾಟ ದಂಧೆ ಮಿತಿಮೀರಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಸಮಸ್ಯೆ ಸರಿಪಡಿಸಲು ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಬಿಜೆಪಿಯ ಲೆಹರ್​ಸಿಂಗ್ ಪರಿಷತ್​ನಲ್ಲಿ ಆಗ್ರಹಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮಾತನಾಡುತ್ತ, ಬೌರಿಂಗ್ ಆಸ್ಪತ್ರೆ, ವಿಠಲ್ ಮಲ್ಯ ರಸ್ತೆ ಸೇರಿ 8 ಕಂಡೆ ಮಾದಕವಸ್ತು ಮಾರಾಟದಲ್ಲಿ ಸಾವಿರಕ್ಕೂ ಹೆಚ್ಚು ಯುವಕರು ತೊಡಗಿಕೊಂಡಿದ್ದಾರೆ ಎಂದರು. ಬಿಜೆಪಿಯ ರಾಮಚಂದ್ರಗೌಡ ಮಾತನಾಡಿ, ಗೂಂಡಾಗಳು ಹಲ್ಲೆ ನಡೆಸಿದರೂ ಉತ್ತರ ಕೊಡದ ಸ್ಥಿತಿಯಲ್ಲಿ ಪೊಲೀಸರಿದ್ದಾರೆ ಎಂದರು.

ಹೆಣ್ಣು ಮಕ್ಕಳ ಜೀವ ತಿನ್ನಬೇಡಿ

ಹೆಣ್ಣು ಮಕ್ಕಳ ಜೀವ ತಿನ್ನೋ ವಿಚಾರವಾಗಿ ವಿಧಾನ ಪರಿಷತ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಬಿಜೆಪಿಯ ತಾರಾ ಅನುರಾಧ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಸಿಎಂ ಸದನಕ್ಕೆ ಆಗಮಿಸಿದಾಗ ತಾರಾ ಅನುರಾಧ ಮಾತನಾಡುತ್ತಿದ್ದರು.ಈ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಮುಖ್ಯಮಂತ್ರಿಯನ್ನು ಮಾತನಾಡಿಸಲು ಮುಗಿಬಿದ್ದಾಗ ತಾರಾ ಮಾತು ನಿಲ್ಲಿಸಿದರು. ‘ಯಾಕಮ್ಮ ಮಾತು ನಿಲ್ಲಿಸಿಬಿಟ್ಟೆೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಎಲ್ಲರೂ ನಿಮ್ಮನ್ನು ಮಾತನಾಡಿಸುತ್ತಿದ್ದಾರೆ. ನನ್ನ ಮಾತನ್ನು ಯಾರು ಕೇಳಿಸಿಕೊಳ್ಳಬೇಕು’ ಎಂದು ತಾರಾ ಕೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಈಶ್ವರಪ್ಪ, ಒಬ್ಬ ಹೆಣ್ಣು ಮಗಳು ಮಾತಾಡುವಾಗ ಇಷ್ಟು ಜನ ಜೀವ ತಿಂದರೆ ಹೇಗೆ ಎಂದು ಆಡಳಿತ ಪಕ್ಷದ ಸದಸ್ಯರ ಕಾಲೆಳೆದರು.

ಏಕರೂಪದ ಶಿಶುಪಾಲನಾ ರಜೆ

ಮಹಿಳಾ ಉದ್ಯೋಗಿಗಳಿಗೆ ಶಿಶುಪಾಲನಾ ರಜೆ ನೀಡುವ ವಿಚಾರದಲ್ಲಿ ರಾಜ್ಯದಲ್ಲಿ ಏಕರೂಪದ ನೀತಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್​ನಲ್ಲಿ ತಿಳಿಸಿದ್ದಾರೆ. ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಮರನಾಥ ಪಾಟೀಲ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ರಜೆಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಅನ್ವಯ ಆಗುವ ರೀತಿಯಲ್ಲಿ ಏಕರೂಪದ ನೀತಿ ಜಾರಿಗೆ ತರಲಾಗುವುದು ಎಂದರು.

ರೈತರಿಗಾಗಿ ನೀರಾ ನೀತಿ: ರಾಜ್ಯದ ತೆಂಗು ಬೆಳೆಗಾರರ ಸಂಕಷ್ಟಗಳಿಗೆ ನೆರವಾಗಲು ರಾಜ್ಯ ನೀರಾ ನೀತಿ ರೂಪಿಸಲಾಗಿದ್ದು, ನೀರಾ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯಬೇಕು ಎಂದು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮೇಲ್ಮನೆಗೆ ತಿಳಿಸಿದ್ದಾರೆ.

ಕೃಷಿ ವಿವಿ ನೇಮಕ ಹಗರಣ ತನಿಖೆಗೆ ಸಮಿತಿ ರಚನೆ

ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕರ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತ ತನಿಖೆ ನಡೆಸಲು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಮುಂದಿನ ವಾರ ತನಿಖಾ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್​ನಲ್ಲಿ ಭರವಸೆ ನೀಡಿದರು. ಜೆಡಿಎಸ್​ನ ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸಿ, ಅನರ್ಹರಿಗೆ ಹುದ್ದೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಕ್ಕೆ ಆಯ್ಕೆಪ್ರಕ್ರಿಯೆ ರದ್ದುಪಡಿಸುವ ಅಧಿಕಾರ ಇದ್ದರೆ ತಕ್ಷಣ ಆ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.


ಸಿಬಿಎಸ್​ಇ, ಐಸಿಎಸ್​ಇ ಶಾಲೆಗಳೇ ಸಮಸ್ಯೆ

ಬೆಂಗಳೂರು: ಪ್ರಾಥಮಿಕ ಹಂತದಿಂದಲೇ ಕಡ್ಡಾಯವಾಗಿ ಕನ್ನಡ ಬೋಧಿಸಲು ಸಿಬಿಎಸ್​ಇ, ಐಸಿಎಸ್​ಇ ಹಾಗೂ ಅಂತಾರಾಷ್ಟ್ರೀಯ ಸಂಯೋಜಿತ ಶಾಲೆಗಳೇ ಸಮಸ್ಯೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನ ಪರಿಷತ್​ನಲ್ಲಿ ಮಂಗಳವಾರ ತಿಳಿಸಿದ್ದಾರೆ. ಕನ್ನಡ ಬೋಧಿಸುವ ಶಾಲೆಗಳಿಗೆ ಕೇವಲ 500 ರೂ. ದಂಡ ವಿಧಿಸುತ್ತಿರುವುದು ಸಮಂಜಸವಲ್ಲ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್​ನ ಕೆ.ಟಿ. ಶ್ರೀಕಂಠೇಗೌಡ ಒತ್ತಾಯಿಸಿದರು. ದಂಡವನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಎರಡನೇ ಬಾರಿ ತಪ್ಪಿದರೆ 2 ಲಕ್ಷ ರೂ., ಮೂರನೇ ಬಾರಿ ತಪ್ಪಿಗೆ ಮಾನ್ಯತೆ ರದ್ದುಪಡಿಸಬೇಕು. ಆಗ ನ್ಯಾಯಾಲಯಗಳಲ್ಲೂ ಕ್ರಮ ಊರ್ಜಿತವಾಗುತ್ತದೆ ಎಂದು ಕಾಂಗ್ರೆಸ್​ನ ಶರಣಪ್ಪ ಮಟ್ಟೂರು ಅಭಿಪ್ರಾಯಪಟ್ಟರು. ಕನ್ನಡದ ಬಗ್ಗೆ ಆಸಕ್ತಿಯಿರುವ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಬೇಕು ಎಂದು ಶ್ರೀಕಂಠೇಗೌಡ ಸಲಹೆ ನೀಡಿದರು. ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ ರೂಪಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಕನ್ನಡ ಬೋಧನೆ ಕಡ್ಡಾಯಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತನ್ವೀರ್ ಹೇಳಿದರು.

ನೈಸ್ ಹಗರಣ ಮಾಹಿತಿಗೆ ಒತ್ತಾಯ

ನೈಸ್ ರಸ್ತೆ ನಿರ್ಮಾಣ ಈ ಶತಮಾನದ ದೊಡ್ಡ ಹಗರಣವಾಗಿದ್ದು, ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೂಡಲೇ ಒದಗಿಸಬೇಕೆಂದು ವಿಧಾನ ಪರಿಷತ್​ಲ್ಲಿ ಮಂಗಳವಾರ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಮಹದೇವಪ್ಪ, ಈ ವಿಚಾರ ಸುಪ್ರೀಂಕೋರ್ಟ್​ನಲ್ಲಿ ಇರುವ ಹಿನ್ನೆಲೆಯಲ್ಲಿ ಉತ್ತರಿಸಲು ಕಾಲಾವಕಾಶ ಬೇಕೆಂದು ಮನವಿ ಮಾಡಿದರು.

ಟ್ರಕ್ ಟರ್ವಿುನಲ್ಸ್ ನಿರ್ವಣಕ್ಕೆ ಶಿಫಾರಸು

ಬೆಂಗಳೂರು: ಡಿ.ದೇವರಾಜ್ ಅರಸ್ ಟ್ರಕ್ ಟರ್ವಿುನಲ್ಸ್ ಲಿಮಿಟೆಡ್​ನ ಕಾರ್ಯಾಚರಣೆ ಯಲ್ಲಿ ಗಮನಿಸಲಾದ ನ್ಯೂನತೆಗಳ ವರದಿ ಯನ್ನು ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು. ಬೆಂಗಳೂರಿನ 4 ದಿಕ್ಕುಗಳಲ್ಲಿ ಬೃಹತ್ ಟ್ರಕ್ ಟರ್ವಿುನಲ್ ನಿರ್ಮಾಣ ಮಾಡಬೇಕು. ಟ್ರಕ್ ಟರ್ವಿುನಲ್​ಗಳಲ್ಲಿ ಗುಣಮಟ್ಟದ ರಸ್ತೆ, ಕುಡಿವ ನೀರು, ಪೆಟ್ರೋಲ್ ಬಂಕ್, ವಾಹನ ತಂಗುದಾಣ, ತೂಕದ ಸೇತುವೆ ನಿರ್ಮಾಣ ಸೇರಿ ಅನೇಕ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಡಾ. ಎ.ಬಿ. ಮಾಲಕರಡ್ಡಿ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.

Leave a Reply

Your email address will not be published. Required fields are marked *

Back To Top