ಕ್ಲಿಷ್ಟ ಸನ್ನಿವೇಶದಲ್ಲಿ ವರ್ತನೆ ಬದಲಾಗದಿರಲಿ: ಬ್ರಹ್ಮಕುಮಾರಿ ಶಿವಾನಿ ಪ್ರವಚನ, ಬೆಂಗಳೂರು ಮಹಾ ಉತ್ಸವದಲ್ಲಿ ಗುರುವಂದನೆ

ಬೆಂಗಳೂರು: ಕ್ಲಿಷ್ಟ ಸನ್ನಿವೇಶ ಮತ್ತು ಇತರರ ನಡವಳಿಕೆಯಿಂದ ನಮ್ಮ ವರ್ತನೆಯಲ್ಲಿ ಬದಲಾವಣೆಯಾಗಬಾರದು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿ ಶಿವಾನಿ ಸಲಹೆ ನೀಡಿದ್ದಾರೆ.

ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಶ್ರೀ ಶಂಕರವಾಹಿನಿ ಮತ್ತು ಆಯುಷ್ ಟಿ.ವಿ. ಸ್ವಾತಂತ್ರ್ಯ ಉದ್ಯಾನದಲ್ಲಿ ಏರ್ಪಡಿಸಿರುವ 21 ದಿನಗಳ ‘ಬೆಂಗಳೂರು ಮಹಾ ಉತ್ಸವ’ದ 5ನೇ ದಿನವಾದ ಸೋಮವಾರ ಸಂಜೆ ನಡೆದ ‘ಗುರುವಂದನೆ’ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ನಮ್ಮ ವರ್ತನೆ ಇತರಿಂದ ಬದಲಾಗಬಾರದು. ಸ್ವಂತಿಕೆ ಸಾಧಿಸಿದರೆ ಸ್ವತಂತ್ರ ಚಿಂತನೆಗಳು ಬೆಳೆಯುತ್ತವೆ. ಇದರಿಂದ ಶಾಂತಿ, ಪ್ರೀತಿ, ಆರೋಗ್ಯ ಎಲ್ಲವೂ ಲಭಿಸುತ್ತದೆ. ಸ್ವಸ್ತಿಕ್​ನ ನಾಲ್ಕು ಗೆರೆಗಳು ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗವನ್ನು ಸೂಚಿಸುತ್ತವೆ. ಕಲಿಯುಗ ಮನುಷ್ಯನ ಮನೋ ಧರ್ಮವನ್ನೇ ಕುಗ್ಗಿಸಿದೆ. ಹೀಗಾಗಿ ಸತ್ಯಯುಗದ ಆಶೀರ್ವಾದ ಮುನ್ನೆಲೆಗೆ ಬರಬೇಕೆಂದರು.

ಸಹೋದರಿ ಪದ್ಮಾ ಮಾತನಾಡಿ, ಒತ್ತಡದಿಂದ ಮುಕ್ತರಾಗಿ ಕಳೆದುಕೊಂಡಿ ರುವ ನೆಮ್ಮದಿ, ಶಾಂತಿಗೆ ಆಧ್ಯಾತ್ಮ ಸಹಕಾರಿ. ಹಣ ಗಳಿಸುವುದೇ ಜೀವನದ ಗುರಿ ಮಾಡಿಕೊಂಡಿರುವ ಮನುಷ್ಯನ ಸುಖಿ ಜೀವನಕ್ಕೆ ಗುರು ಕೃಪೆ ಮುಖ್ಯ ಎಂದು ಹೇಳಿದರು.

ಬ್ರಹ್ಮಕುಮಾರಿ ಸಮಾಜದ ಕರುಣಾಜೀ, ಕೋಕಿಲ, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಶ್ರೀ ಶಂಕರ ಟಿ.ವಿ ಹಾಗೂ ಆಯುಷ್ ವಾಹಿನಿಯ ಎಂಡಿ ಎಂ. ಹರಿಕೃಷ್ಣ, ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಈಶ್ವರೀಯ ವಿವಿ ನನ್ನಲ್ಲಿ ಆಧ್ಯಾತ್ಮಿಕ ಚಿಂತನೆ ಬೆಳೆಸಿ ಕೋಪ, ಅಹಂ ಭಾವ ಹೊರದಬ್ಬಿದೆ. ಬದಲಾದ ಆಲೋಚನೆಗಳು ಪರಮಾತ್ಮನೊಂದಿಗೆ ಸಂವಹನ ನಡೆಸಿದಷ್ಟು ಖುಷಿ ನೀಡಿದೆ.

|ಸುರೇಶ್ ಒಬೆರಾಯ್ ಬಾಲಿವುಡ್ ಚಲನಚಿತ್ರನಟ

Leave a Reply

Your email address will not be published. Required fields are marked *