ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ಪೇಜಾವರ ಶ್ರೀ

ಚಿತ್ರದುರ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ವಿಳಂಬವಾಗುವುದನ್ನು ಒಪ್ಪುವುದಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿ, ಆರ್​ಎಸ್​ಎಸ್​ ಮುಖಂಡ ಭಯ್ಯಾಜಿ ಜೋಷಿ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆದರೆ ಮಂದಿರ ನಿರ್ಮಾಣ ವಿಳಂಬವಾಗಬಾರದು. ಮಂದಿರದ ಕುರಿತು ಅರ್ಧಕುಂಭ ಮೇಳದಲ್ಲಿ ಜ.30ರಂದು ತೀರ್ಮಾನವಾಗಲಿದೆ ಎಂದರು.

ರಾಜ್ಯರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶ್ರೀಗಳು, ನಾನು ರಾಜಕೀಯದ ಬಗ್ಗೆ ಯಾವುದೇ ಮಾತುಗಳನ್ನೂ ಆಡಲಾರೆ ಎಂದು ತಿಳಿಸಿದರು.