ನವದೆಹಲಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ‘ಸನಾತನ ಧರ್ಮ’ ಕುರಿತ ಹೇಳಿಕೆ ನ್ಯಾಯಾಲಯ ಸೇರಿ ದೇಶಾದ್ಯಂತ ಸಾರ್ವಜನಿಕರ ಟೀಕೆಗೆ ಗುರಿಯಾದದ್ದು ತಿಳಿದ ಸಂಗತಿಯೇ. ಆದರೆ ಇದರಿಂದ ಪಾಠ ಕಲಿಯದ ಡಿಎಂಕೆ ನಾಯಕರು ಮತ್ತೆ ಮತ್ತೆ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಹೇಳಿ ಮತ್ತೊಂದು ರೀತಿಯಲ್ಲಿ ವಿವಾದ ಹುಟ್ಟುಹಾಕಿದ್ದಾರೆ.
ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ತೆಲಂಗಾಣ ನೂತನ ಸಿಎಂ ಅಧಿಕೃತ ಘೋಷಣೆ – ಡಿ.7ರ ಬೆಳಗ್ಗೆ 11 ಗಂಟೆಗೆ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ?
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಡಿ.ಎನ್.ವಿ.ಸೆಂಥಿಲ್‌ಕುಮಾರ್ ಮಂಗಳವಾರ ಲೋಕಸಭೆಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಹೇಳಿಕೆಯ ಮೂಲಕ ವಿವಾದಕ್ಕೆ ಕಾರಣರಾದರು.
ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿದ್ದನ್ನು ಲೇವಡಿ ಮಾಡಿದ ತಮಿಳುನಾಡು ನಾಯಕ ಹಿಂದಿ ಭಾಷೆ ಮಾತನಾಡುವ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು.
ಬಿಜೆಪಿಗೆ ಶಕ್ತಿ ಇರುವುದು ಹಿಂದಿ ಕೇಂದ್ರಿತ ರಾಜ್ಯಗಳಲ್ಲಿ ಮಾತ್ರ. ನೀವು ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈ ಹೇಳಿಕೆ ಗದ್ದಲಕ್ಕೆ ಕಾರಣವಾಗಿದ್ದು, ಬಳಿಕ ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕಲಾಯಿತು.
ಸೆಂಥಿಲ್ ಹೇಳಿಕೆಗಳನ್ನು ಎಂಡಿಎಂಕೆ (ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ) ಸಂಸದ ವೈಕೋ ಬೆಂಬಲಿಸಿದರು, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ‘ಸನಾತನ ಧರ್ಮ’ ಕುರಿತು ಟೀಕೆ ಮಾಡಿದ ತಿಂಗಳ ನಂತರ ಸೆಂಥಿಲ್‌ಕುಮಾರ್ ಅವರ ಹೇಳಿಕೆಗಳು ಹೊರ ಬಂದಿವೆ. ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವಲ್ಲ, ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು.
ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಅನ್ನಪೂರ್ಣ ದೇವಿ, “ತಮಿಳುನಾಡು ಜನರು ಬಿಜೆಪಿಗೆ ಮತ ಹಾಕಿದ್ದಾರೆ ಮತ್ತು ಅವರಿಗೆ ಪ್ರಧಾನಿ ಮೋದಿ ಮೇಲೆ ವಿಶ್ವಾಸವಿದೆ, ಇಂತಹ ಹೇಳಿಕೆಗಳನ್ನು ನೀಡುವ ಜನರು ಆಳವಿಲ್ಲದ ಮನಸ್ಥಿತಿಯನ್ನು ಹೊಂದಿಲ್ಲ. ಪ್ರಧಾನಿ ಮೋದಿಯವರ ಜನಪ್ರಿಯತೆಯ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದರು. ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಕೂಡ ಸೆಂಥಿಲ್‌ಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, “ಬಿಜೆಪಿಯನ್ನು ದೇಶಾದ್ಯಂತ ಒಪ್ಪಿಕೊಳ್ಳಲಾಗಿದೆ, ಯಾರಿಗೆ ಇವರು ಈ ರೀತಿ ಹೇಳುತ್ತಿದ್ದಾರೆ? ಇವರಿಗೆ ಯಾವುದೇ ಜ್ಞಾನವಿಲ್ಲ” ಸೆಂಥಿಲ್‌ಕುಮಾರ್ ಗೆ ಭಾರತದ ಸಂಸ್ಕೃತಿಯ ಅರಿವಿಲ್ಲ ಎಂದು ಸರ್ಕಾರ್ ಟೀಕಿಸಿದರು.
ಕಿಂಚಿತ್ತು ಮಾನ-ಮರ್ಯಾದೆ ಇದ್ರೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಲಿ: ತೇಜಸ್ವಿ ಸೂರ್ಯ ವಿರುದ್ಧ ಸಿಎಂ ಸಿದ್ದು ಕಿಡಿ