ಎಂ.ಕರುಣಾನಿಧಿ ಆರೋಗ್ಯ ಮತ್ತಷ್ಟು ಗಂಭೀರ

ಚೆನ್ನೈ: ಡಿಎಂಕೆ ಹಿರಿಯ ಮುಖಂಡ ಎಂ. ಕರುಣಾನಿಧಿ ಆರೋಗ್ಯ ಮತ್ತೆ ಗಂಭೀರವಾಗಿದೆ. ಆರೋಗ್ಯ ಸ್ಥಿತಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕರುಣಾನಿಧಿಯವರು ವಯೋಸಹಜ ಅಸ್ವಸ್ಥತೆಯಿಂದ ಕೂಡಿದ್ದು, ಅವರ ಪ್ರಮುಖ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಚಿಕಿತ್ಸೆ ಕೊಡುವುದೇ ಸವಾಲಾಗಿದೆ. ಅವರು ನಾವು ಕೊಡುವ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಆರೋಗ್ಯ ಸುಧಾರಣೆ ನಿರ್ಧರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

94 ವರ್ಷದ ಕರುಣಾನಿಧಿಯವರು ಜು.28ರಂದು ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.