Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸಿನಿಮಾದಿಂದ ಸಿಎಂ ಪಟ್ಟಕ್ಕೆ!

Wednesday, 08.08.2018, 3:04 AM       No Comments

ತಮಿಳುನಾಡಿನ ರಾಜಕಾರಣದಲ್ಲಿ ಮುತ್ತುವೇಲು ಕರುಣಾನಿಧಿ ಆರಾಧ್ಯದೈವ. ಮೂಲ ಹೆಸರು ದಕ್ಷಿಣಾಮೂರ್ತಿ. ತಮಿಳುನಾಡಿನ ದೇವಾಲಯಗಳಲ್ಲಿ ನಾದಸ್ವರ ಬಾರಿಸುವ ಕೆಳವರ್ಗದಲ್ಲಿ 1924ರ ಜೂನ್ 3ರಂದು ಜನನ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯದಿಂದ ಬಂದ ಕರುಣಾನಿಧಿ ರಾಜಕೀಯ ಪ್ರವೇಶ ಮಾಡಿದ್ದು 14ನೇ ವಯಸ್ಸಿನಲ್ಲಿ. ಆಗ ತಮಿಳುನಾಡು ಪ್ರದೇಶದಲ್ಲಿ ಜಮೀನ್ದಾರರು ಹಾಗೂ ವಕೀಲರೇ ತುಂಬಿದ್ದರು. ಈ ಹಿನ್ನೆಲೆಯಲ್ಲಿ ಹಿಂದುಳಿದ ಸಮುದಾಯವರು ರಾಜಕೀಯ ಪ್ರವೇಶ ಮಾಡುವುದು ಕನಸಿನ ಮಾತಾಗಿತ್ತು. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಡಿಎಂಕೆ ತನ್ನ ಧ್ಯೇಯವಾಗಿ ಮಾಡಿಕೊಂಡಿತ್ತು. ಆದರೆ ಭಾರತೀಯ ಸಂಸ್ಕೃತಿಯ ಆಳ-ಅಗಲ-ವೈಶಾಲ್ಯ ಅದಕ್ಕೆ ಅರ್ಥವಾಗಲಿಲ್ಲ. ಇಂಥ ಪಕ್ಷಕ್ಕೆ ಕರುಣಾನಿಧಿ ಸೇರಿದರು. ಮುಂದೆ ಅದರ ಮುಖವಾಣಿಯಾದರು. ನಂತರ ಪಕ್ಷ ಅವರ ಮುಖವಾಣಿಯಾಯಿತು. ತಮಿಳುನಾಡಿನಲ್ಲಿ ಕುಟುಂಬ ರಾಜಕಾರಣ ಬೆಳೆಸುವುದರಲ್ಲಿ ಕರುಣಾನಿಧಿ ಅವರದು ದೊಡ್ಡ ಪಾತ್ರ.

ಕರುಣಾನಿಧಿಯವರು ಅಬ್ರಾಹ್ಮಣ ಚಳವಳಿಯ ಕೂಸಾದ ಡಿಎಂಕೆಯ ನಾಯಕ. ಹೀಗಾಗಿ ಅವರು ನಾಸ್ತಿಕ, ವೈಚಾರಿಕ, ತಥಾಕಥಿತ ಪ್ರಗತಿಪರ ಚಳವಳಿಗಳಲ್ಲಿ ಭಾಗವಹಿಸಿದರು. ಅಣ್ಣಾ ಅವರ ಕಾಲದಲ್ಲಿ ಪುರೋಹಿತರ ಪಾತ್ರವಿರದ ಸ್ವಾಭಿಮಾನಿ ಮದುವೆಗಳು ನಡೆದವು. ಕರುಣಾನಿಧಿ ಅವುಗಳಿಗೆ ಬೆಂಬಲ ನೀಡಿದರು. ತಮ್ಮ 14ನೇ ವಯಸ್ಸಿನಲ್ಲಿ ಅಳಿಗಿರಿಸ್ವಾಮಿಯವರ ಉಗ್ರ ಭಾಷಣ ಕೇಳಿ ಕರುಣಾನಿಧಿ ಜಸ್ಟಿಸ್ ಪಾರ್ಟಿ ಸೇರಿದರು. ಯಾವ ಕಾರಣಕ್ಕೂ ಹಿಂದಿಯನ್ನು ಒಪ್ಪಬಾರದು ಎಂದು ನಡೆದ ಹಿಂದಿ ವಿರೋಧಿ ಚಳವಳಿ ಇದು. ತಮಿಳುನಾಡಿನಲ್ಲಿ ಹಲವು ದಶಕಗಳು ಹಿಂದಿಯನ್ನು ಒಳಗೆ ಬಿಟ್ಟುಕೊಳ್ಳದಿರುವುದರಲ್ಲಿ ಕರುಣಾನಿಧಿಯವರ ಪಾತ್ರ ಪ್ರಮುಖ.

ರಾಜಕೀಯದಲ್ಲಿ ಗಟ್ಟಿಗ: ಕರುಣಾನಿಧಿ ಅವರು ಪಕ್ಷದೊಳಗೆ ಬೇರೆಯವರಿಗೆ ಅಧಿಕಾರವನ್ನು ಬಿಟ್ಟುಕೊಟ್ಟಿದ್ದು ಬಹಳ ಕಮ್ಮಿ. 1969ರಿಂದ 2016ರ ಕೊನೆವರೆಗೂ ಅವರೇ ಡಿಎಂಕೆ ಪಕ್ಷದ ನಾಯಕರಾಗಿದ್ದರು. ಸುಮಾರು 38 ವರ್ಷ ಪಕ್ಷದ ಚುಕ್ಕಾಣಿ ಹಿಡಿದವರು ಕರುಣಾನಿಧಿ. ಪಕ್ಷದಲ್ಲಿ ಈ ಅಧಿಕಾರ ಅವರ ಮನೆತನದಿಂದ ಹೊರಗಿನವರಿಗೆ ಹೋಗಲಿಲ್ಲ. 2016ರಲ್ಲಿ ತಮಿಳುನಾಡಿನ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದವರು ಅವರ ಮಗ ಸ್ಟಾಲಿನ್.

ತಮಿಳು ವಿದ್ಯಾರ್ಥಿ ಸಂಘಟನೆ: ಚಿಕ್ಕವಯಸ್ಸಿನಿಂದಲೂ ಹಲವು ವಿದ್ಯಾರ್ಥಿ ಆಂದೋಲನಗಳಲ್ಲಿ ಭಾಗವಹಿಸಿದ್ದ ಕರುಣಾನಿಧಿ ‘ತಮಿಳ್ ಮಣವರ್ ಮಂದ್ರಮ್ ಎಂಬ ವಿದ್ಯಾರ್ಥಿ ಸಂಘಟನೆ ಆರಂಭಿಸಿದರು. ಇದೇ ದ್ರಾವಿಡ ಚಳವಳಿಯ ಮೊತ್ತಮೊದಲ ವಿದ್ಯಾರ್ಥಿ ಸಂಘಟನೆ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಈ ಚಳವಳಿಯ ಇತರ ಸದಸ್ಯರ ಜತೆ ಸೇರಿ ಸಮುದಾಯ ಅಭಿವೃದಿಟಛಿಯ ಕೆಲಸಗಳಲ್ಲಿ ತೊಡಗಿದ ಅವರು ಈ ಉದ್ದೇಶಕ್ಕೆಂದು ‘ಮುರಸೋಳಿ’ ಎಂಬ ತಮಿಳು ಪತ್ರಿಕೆ ಆರಂಭಿಸಿದರು. ಇದು ನಂತರದ ದಿನಗಳಲ್ಲಿ ಡಿಎಂಕೆ ಪಕ್ಷದ ಮುಖವಾಣಿ ಪತ್ರಿಕೆಯಾಯಿತು.

ಕಲ್ಲಕುಡಿ ಹೋರಾಟ

ತಿರುಚನಾಪಳ್ಳಿ ಬಳಿ ಇರುವ ಕಲ್ಲಕುಡಿಯಲ್ಲಿ ದಾಲ್ಮಿಯಾ ಸಿಮೆಂಟ್ ಕಂಪನಿಯ ಒಡೆಯರು ಕಂಪನಿ ತೆರೆದರು. ಅಲ್ಲಿನ ಹೆಸರನ್ನು ದಾಲ್ಮಿಯಾಪುರಂ ಎಂದು ಬದಲಾಯಿಸಲು ನೋಡಿದರು. ಇದನ್ನು ಡಿಎಂಕೆ ಉಗ್ರವಾಗಿ ವಿರೋಧಿಸಿತು. ಅದರ ನೇತಾರರಾಗಿ ಕರುಣಾನಿಧಿ ಹೋರಾಟಕ್ಕಿಳಿದರು. ಇದು ‘ಕಲ್ಲಕುಡಿ ಹೋರಾಟ’ವೆಂದೇ ಹೆಸರಾಯಿತು. ಈ ಹೋರಾಟದಿಂದ ಕರುಣಾನಿಧಿಯವರ ನಾಯಕತ್ವದ ಗುಣಗಳು ಬೆಳಕಿಗೆ ಬಂದವು. ಪಕ್ಷದ ಕಾರ್ಯಕರ್ತರು ಅಲ್ಲಿನ ರೈಲ್ವೇ ನಿಲ್ದಾಣದಲ್ಲಿದ್ದ ದಾಲ್ಮಿಯಾಪುರಂ ಬೋರ್ಡ್ ಅಳಿಸಿದರು. ರೈಲುಗಳನ್ನು ತಡೆದು ರೈಲ್ವೇ ಹಳಿಗೆ ಅಡ್ಡಲಾಗಿ ಮಲಗಿದರು. ಈ ವೇಳೆ ಇಬ್ಬರು ಮೃತಪಟ್ಟರು. ಬಂಧನಕ್ಕೊಳಗಾದ ಕರುಣಾನಿಧಿ ಜನನಾಯಕರಾದರು.

ಕುಟುಂಬ ರಾಜಕಾರಣ

ಕರುಣಾನಿಧಿ ಅವರ ಮೂವರು ಪತ್ನಿಯರಿಗೆ ಒಟ್ಟು ಆರು ಮಕ್ಕಳು. ಇದರಲ್ಲಿ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಎಂ.ಕೆ.ಮುತ್ತು, ಎಂ.ಕೆ.ಆಳಗಿರಿ, ಎಂ.ಕೆ. ಸ್ಟಾಲಿನ್, ಎಂ.ಕೆ.ತಮಿಳರಸು ಗಂಡು ಮಕ್ಕಳು. ಸೆಲ್ವಿ ಮತ್ತು ಕನಿಮೊಳಿ ಹೆಣ್ಣು ಮಕ್ಕಳು. ಕರುಣಾನಿಧಿಯವರು ಎಂಥ ದೊಡ್ಡ ಆದರ್ಶ ಹೇಳಿದರೂ ಅವರು ವಂಶಪಾರಂಪರ್ಯ ರಾಜಕಾರಣ ಮಾಡಿದರು. ಅದನ್ನು ತಮಿಳುನಾಡಿನಲ್ಲಿ ಬೆಳೆಸಿದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮುರುಸೊಳಿ ಮಾರನ್ ಕೂಡ ಕರುಣಾನಿಧಿಗೆ ಹತ್ತಿರದ ಸಂಬಂಧಿಕರು.

 ಹಿಂದುಧರ್ಮ – ಕರುಣಾನಿಧಿ

ಹಿಂದುಧರ್ಮ ಕಂಡರೆ ಡಿಎಂಕೆ ಪಕ್ಷಕ್ಕೆ ಆಗುವುದಿಲ್ಲವಲ್ಲ ಎಂದು ಕೇಳಿದರೆ ಕರುಣಾನಿಧಿ ಸಿದಟಛಿ ಉತ್ತರ ಕೊಡುತ್ತಿದ್ದರು. ಎಲ್ಲ ಧರ್ಮಗಳೂ ತಮ್ಮ ಪಕ್ಷದ ಪಾಲಿಗೆ ಒಂದೇ, ಸಕಲ ಧರ್ಮಗಳಗೂ ಗೌರವ ಕೊಡುತ್ತೇವೆ ಎನ್ನುತ್ತಿದ್ದರು. ಅಲ್ಲದೆ ತಮ್ಮ ಪಕ್ಷದಲ್ಲಿ ಇರುವ ಕಾರ್ಯಕರ್ತರಲ್ಲಿ ಶೇ.90 ಮಂದಿ ಹಿಂದು ಧರ್ಮದವರು. ತಮ್ಮ ವಿರೋಧವೇನಿದ್ದರೂ ಧರ್ಮದ ಹೆಸರಿನಲ್ಲಿ ಮಾಡುವ ಮೂಲಭೂತವಾದದ ವಿರುದಟಛಿ ಎಂಬುದು ಅವರ ವಾದ.

ಮೂರು ಮದುವೆ

ಕರುಣಾನಿಧಿ ಮೂರು ಮದುವೆಯಾಗಿದ್ದರು. ಪದ್ಮಾವತಿ, ದಯಾಳು ಅಮ್ಮಾಳ್ ಮತ್ತು ರಜಥಿ ಅಮ್ಮಾಳ್ ಕರುಣಾನಿಧಿಯ ಪತ್ನಿಯರು. ಕರುಣಾನಿಧಿಯವರ ಮೊದಲ ಪತ್ನಿಯ ಹೆಸರು ಪದ್ಮಾವತಿ, ಕರುಣಾನಿಧಿಗೆ ಎಂ.ಕೆ.ಮುತ್ತು ಎಂಬ ಮಗ ಜನಿಸಿದ್ದರು. ಮುಂದೆ ಅರವತ್ತರ ದಶಕದಲ್ಲಿ ಕರುಣಾನಿಧಿಯವರು ಒಂದು ಚುನಾವಣಾ ರ್ಯಾಲಿಯಲ್ಲಿ ರಜಥಿ ಅಮ್ಮಾಳ್ ಅವರನ್ನು ಭೇಟಿಯಾದರು, ಅವರ ನಡುವೆ ಪ್ರೇಮ ಚಿಗುರಿ ವಿವಾಹವಾದರು. ಅದು ಡಿಎಂಕೆ ಆರಂಭಿಸಿದ್ದ ಸ್ವಯಂ ಮರ್ಯಾದಾ ಕಲ್ಯಾಣ (ಸ್ವಾಭಿಮಾನಿ ಮದುವೆ) ಪ್ರಕಾರ ಜರುಗಿದ್ದು ಒಂದು ವಿಶೇಷ. ಕೋರ್ಟು ಅಥವಾ ಪುರೋಹಿತರ ಸಮ್ಮುಖ ಜರುಗದೆ ಪಾರ್ಟಿಯ ಹಿರಿಯ ನಾಯಕರ ಎದುರು ಈ ಮದುವೆ ಜರುಗಿತು. ಪಕ್ಷದ ಆಪ್ತರ ಪ್ರಕಾರ, ದಯಾಳು ಅಮ್ಮಾಳ್ ಅವರನ್ನು ಕರುಣಾನಿಧಿ ಮನೈವಿ (ಪತ್ನಿ), ರಜಥಿ ಅಮ್ಮಾಳ್ ಅವರನ್ನು ತುನೈವಿ (ಸಂಗಾತಿ) ಎಂದು ಕರೆಯುತ್ತಿದ್ದರು. ಮಗಳು ಕನಿಮೊಳಿ ಜನಿಸಿದ್ದು 1968ರಲ್ಲಿ, ಆಗ ಕರುಣಾನಿಧಿ ಅಧಿಕೃತವಾಗಿ, ಬಹಿರಂಗವಾಗಿ ರಾಜ್ಯ ವಿಧಾನಸಭೆಯಲ್ಲಿ ‘ರಜಥಿ ನನ್ನ ಮಗಳ ತಾಯಿ’ ಎಂದು ಹೆಸರಿಸಿದ್ದರು. ಹೆಂಡತಿ, ಸಖಿ ಎಂದು ಹೆಣ್ಣನ್ನು ತೋರಿಸುವ ಕ್ರಮ ಸಿನಿಮಾಗಳಲ್ಲಿ ಇದ್ದು ಸಖಿಯ ಮನೆಗೆ ಹೋಗುವುದಕ್ಕೆ ಚಿನ್ನವೀಡು ಎಂದು ಹೆಸರಿದೆ. ಈ ಸಿನಿಮಾ ದೃಶ್ಯಾವಳಿ ಒಂದು ಕಾಲಕ್ಕೆ ಸಿನಿಮಾಗಳಿಗೆ ಚಿತ್ರಕಥೆ ಬರೆಯುತ್ತಿದ್ದ ಕರುಣಾನಿಧಿಯವರ ಜೀವನದಲ್ಲೂ ಜರುಗಿತು.

ರಾಮಸೇತು ಆಪತ್ತು

ಶ್ರೀರಾಮ ಲಂಕೆಗೆ ವಾನರ ಸೈನ್ಯದ ಸಹಾಯದಿಂದ ಕಟ್ಟಿದ ಸೇತುವೆ ಎಂದೇ ಗುರುತಿಸಿಕೊಂಡಿರುವ ರಾಮಸೇತುವನ್ನು ಸೇತುಸಮುದ್ರಂ ಯೋಜನೆ ಅಡಿ ಅಭಿವೃದಿಟಛಿಪಡಿಸಲು ಕೇಂದ್ರ ಮುಂದಾದಾಗ ಕರುಣಾನಿಧಿ ‘ಯಾರು ಈ ರಾಮನ್? ಅವನು ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಮತ್ತು ಸಿವಿಲ್ ಇಂಜಿನಿಯರ್ ಆಗಿದ್ದ? ಅವನು ಯಾವಾಗ ಈ ಸೇತುವೆ ಕಟ್ಟಿದ್ದ? ಇದಕ್ಕೆಲ್ಲ ಏನಾದರೂ ಸಾಕ್ಷಿ ಇದೆಯಾ?’ ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆರ್ಯರು ಮತ್ತು ದ್ರಾವಿಡರ ನಡುವಿನ ಸಂಘರ್ಷವನ್ನು ಪ್ರತಿನಿಧಿಸುವ ಒಂದು ಕಾಲ್ಪನಿಕ ಕತೆ ಎಂದು ರಾಮಾಯಣ ಕುರಿತು ನೀಡಿದ್ದ ಅವರ ಹೇಳಿಕೆಯೂ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಅಭಿವೃದಿಯ ಹರಿಕಾರ

ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವೈರುಧ್ಯ ಹೊಂದಿದ್ದರೂ ತಮಿಳುನಾಡು ಅಭಿವೃದಿಟಛಿಗೆ ಬುನಾದಿ ಹಾಕಿದ ಶ್ರೇಯ ಕರುಣಾನಿಧಿಗೆ ಸಲ್ಲುತ್ತದೆ. ಪೂರ್ಣಾವಧಿಗೆ 1996ರಿಂದ 2001ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ದಕ್ಷಿಣ ಭಾರತದ ಆರ್ಥಿಕ ವಲಯ ಎಂಬ ಮಟ್ಟಿಗೆ ಕೈಗಾರಿಕೆಗಳ ಸ್ಥಾಪನೆಗೆ ಕರುಣಾನಿಧಿ ಶ್ರಮಿಸಿದರು. ಬೃಹತ್ ಹೆದ್ದಾರಿ ಯೋಜನೆ, ಮೂಲಸೌಕರ್ಯ ಅಭಿವೃದಿಟಛಿ, ಚೆನ್ನೈ ಮೇಲು ಸೇತುವೆ, ಐಟಿ ಪಾರ್ಕ್ ಇನ್ನಷ್ಟು ಯೋಜನೆಗಳು ತಮಿಳುನಾಡಿಗೆ ಹರಿದುಬರುವಂತೆ ಮಾಡಿದರು. ಇದಲ್ಲದೇ ಕಾಲಮಿತಿಯಲ್ಲಿ ಈ ಯೋಜನೆಗಳು ಪೂರ್ಣಗೊಳ್ಳಲು ಉಸ್ತುವಾರಿ ಕೂಡ ವಹಿಸಿದರು. ಆದರೆ ನಂತರದ ಚುನಾವಣೆಯಲ್ಲಿ ಜಯಲಲಿತಾ ಜತೆ ಸ್ಪರ್ಧೆಗಾಗಿ ಜನಪ್ರಿಯ ಉಚಿತ ಯೋಜನೆಗಳತ್ತ ಕರುಣಾನಿಧಿ ವಾಲಿದರು.

ಹೋರಾಟದ ಹಾದಿ

ತಮಿಳುನಾಡಿನ ಶಿಕ್ಷಣ ಹಾಗೂ ಉದ್ಯೋಗ ವಲಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಿತ್ತು. ಇದರ ವಿರುದಟಛಿ ಪೆರಿಯಾರ್ ರಾಮಸ್ವಾಮಿ ಅಭಿಯಾನ ಆರಂಭಿಸಿದ್ದರು. ಇದರಿಂದ ಆಕರ್ಷಿತಗೊಂಡ ಕರುಣಾನಿಧಿ, ಬ್ರಾಹ್ಮಣರ ದಬ್ಬಾಳಿಕೆ ಹಾಗೂ ಹಿಂದು ಧರ್ಮದಲ್ಲಿನ ಮೂಢನಂಬಿಕೆಗಳ ವಿರುದಟಛಿ ತಿರುಗಿಬಿದ್ದರು. ದೇವರ ಆರಾಧನೆಯನ್ನೇ ವಿರೋಧಿಸಿದ ಕರುಣಾನಿಧಿ, ಚಲನಚಿತ್ರ ಹಾಗೂ ರಾಜಕೀಯ ಜೀವನದಲ್ಲಿ ಇದನ್ನು ಪಾಲಿಸಿಕೊಂಡು ಬಂದರು. ದ್ರಾವಿಡ ಚಳವಳಿಯ ಮೂಲ ಆಶಯಗಳನ್ನೇ ಇರಿಸಿಕೊಂಡು ಡಿಎಂಕೆಯ ಪ್ರಶ್ನಾತೀತ ನಾಯಕರಾಗಿ 4 ದಶಕಗಳ ಕಾಲ ಆಡಳಿತ ನಡೆಸಿದರು.

ಐದು ಬಾರಿ ಸಿಎಂ ಆಗಿದ್ದ ಕರುಣಾನಿಧಿ

ತಮಿಳುನಾಡು, ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿಯಿಂದ ತಮಿಳುನಾಡು ಶಾಸನಸಭೆಯಾದ ನಂತರ ಮೊದಲ ಮುಖ್ಯಮಂತ್ರಿಯಾದವರು ಕರುಣಾನಿಧಿಯವರ ಗುರು ಅಣ್ಣಾದುರೈ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 1967-69ರವರೆಗೆ ಕಾರ್ಯನಿರ್ವಹಿಸಿದರು. ಅವರ ಅಕಾಲಿಕ ನಿಧನದ ಬಳಿಕ ಕೆಲ ದಿನ ನೆಡುಂಚೆಳಿಯನ್ ಹಂಗಾಮಿ ಮುಖ್ಯಮಂತ್ರಿಯಾಗಿದ್ದರು. ಬಳಿಕ ಕರುಣಾನಿಧಿ ಮುಖ್ಯಮಂತ್ರಿಯಾದರು. ಸ್ವಾತಂತ್ರ್ಯ ಬಂದ ಕಾಲದಿಂದಲೂ ಈ ಪಕ್ಷ ತಮಿಳು ಅಸ್ಮಿತೆಯ ಕನಸನ್ನು ಜನರಲ್ಲಿ ಬಿತ್ತಿತ್ತು. ಅದು ಮುಖ್ಯವಾಗಿ ಕಾಂಗ್ರೆಸ್ ವಿರುದಟಛಿ ಸೆಣಸಿ ಶಾಸನಸಭೆಗೆ ಆರಿಸಿಬಂದಿತು. ಅಣ್ಣಾ-ಕರುಣಾ ಕಾಂಬಿನೇಷನ್ ಸೇರಿ ಶಾಶ್ವತವಾಗಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಆಳ್ವಿಕೆಗೆ ಇತಿಶ್ರೀ ಹಾಡಿದವು. ಮುಂದೆ ಡಿಎಂಕೆ ಅಥವಾ ಎಂ.ಜಿ.ರಾಮಚಂದ್ರನ್, ಜಯಲಲಿತಾ ನೇತೃತ್ವದ ಎಡಿಎಂಕೆ ಪಕ್ಷಗಳು ಒಂದರ ನಂತರ ಒಂದು ತಮಿಳುನಾಡಿನಲ್ಲಿ ಆಡಳಿತ ಮಾಡಿದವು. ದ್ರಾವಿಡ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ತಮಿಳುನಾಡಿನ ಒಳಗೆ ಆಡಳಿತ ಮಾಡದಿರುವಂತೆ ತಡೆಯುವಲ್ಲಿ ಕರುಣಾನಿಧಿ ಪಾತ್ರ ಬಹಳ ಮಹತ್ವದ್ದು.

ಬಿಳಿ ಶರಟು, ಹಳದಿ ಶಲ್ಯ

ಸದಾ ಕಪ್ಪು ಕನ್ನಡಕ, ಬಿಳಿಯ ಶರಟು, ಪಂಚೆ, ಹೆಗಲಿನ ಮೇಲೊಂದು ಹಳದಿ ಶಲ್ಯ… ಇದು ಕರುಣಾನಿಧಿಯವರ ಉಡುಪಿನ ಶೈಲಿ.

ಕನ್ನಡಕದ ಗುಟ್ಟು

ಕರುಣಾನಿಧಿ ಕಪ್ಪು ಕನ್ನಡಕಕ್ಕೆ ದಶಕಗಳ ನಂಟಿದೆ. 1960ರಲ್ಲಿ ಕರುಣಾನಿಧಿ ಚೆನ್ನೈ ಸಮೀಪ ಅಪಘಾತಕ್ಕೀಡಾಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದು ಶಸಣಉಚಿಕಿತ್ಸೆಗೆ ಒಳಗಾದರು. ಬಳಿಕ ಶಸಣಉಚಿಕಿತ್ಸೆಯ ಗುರುತು ಹಾಗೆಯೇ ಉಳಿಯಿತು. ಹೀಗಾಗಿ ಕಪ್ಪು ಕನ್ನಡಕ ಧರಿಸುವಂತೆ ವೈದ್ಯರು ಸಲಹೆ ನೀಡಿದ್ದರಂತೆ. ಅದರಂತೆ ಅವರಿಗೆ ಕಪ್ಪು ಕನ್ನಡಕ ಕಾಯಂ ಆಯಿತು.

ಜಯಾ ವೈರತ್ವದ ಹಾದಿ…

ಜಯಲಲಿತಾ ಜತೆಗಿನ ವೈರತ್ವ ಪ್ರಸ್ತಾಪಿಸದೇ ಇದ್ದರೆ ಕರುಣಾನಿಧಿ ಅವರ ಬದುಕಿನ ಹಾದಿ ಪೂರ್ಣಗೊಳ್ಳುವುದೇ ಇಲ್ಲ. ದಶಕಗಳ ಕಾಲ ಇವರಿಬ್ಬರ ನಡುವಿನ ರಾಜಕೀಯ ಹಗೆತನ, ವಿಧಾನಸಭೆಯಲ್ಲಿ ನಡೆದ ಪ್ರಹಸನಗಳು ತಮಿಳುನಾಡಿನ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ನೆನಪುಗಳು. ಕರುಣಾನಿಧಿ ಮಾತೆಂದರೆ ಅದು ಹಾಸ್ಯ, ವ್ಯಂಗ್ಯ, ಚಿಂತನೆ, ಸಮರ್ಥನೆಗಳ ಸರಮಾಲೆ. 1996ರ ಚುನಾವಣೆ ಸಮಯ. ಚಿದಂಬರಂ ಕ್ಷೇತ್ರದ ಬಳಿ ಒಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಜಯಲಲಿತಾ ಪ್ರಸ್ತಾಪ ಮಾಡಿದರು. ಆಕೆ ಆಗ ತಮಿಳುನಾಡಿನ ಸಿಎಂ ಆಗಿದ್ದ ಸಮಯ. ಜಯಲಲಿತಾ ‘ಕರುಣಾನಿಧಿಗೆ ಮಹಿಳೆಯರನ್ನು ಕಂಡರೆ ಆಗುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕರುಣಾನಿಧಿ ‘ಮುಖ್ಯಮಂತ್ರಿ ಜಯಲಲಿತಾ ಅವರು ಹೇಳುತ್ತಾರೆ, ಕರುಣಾನಿಧಿಗೆ ಮಹಿಳೆಯರನ್ನು ಕಂಡರೆ ಆಗುವುದಿಲ್ಲ ಅಂತ. ಆದರೆ ನನಗೆ ಮಹಿಳೆಯರನ್ನು ಕಂಡರೆ ಇಷ್ಟ, ಆದರೆ ದೆವ್ವಗಳನ್ನು ಕಂಡರೆ ಇಷ್ಟವಿಲ್ಲ’ ಎಂದಾಗ ಅಭಿಮಾನಿಗಳ ಚಪ್ಪಾಳೆ ಸುರಿಮಳೆ!

 ಕರುಣಾ ಸಾಹಿತ್ಯ ನಿಧಿ

 ತಮಿಳುನಾಡು ರಾಜಕೀಯ ಕ್ಷೇತ್ರದಲ್ಲಿನ ಅತಿದೊಡ್ಡ ನಾಯಕರಾಗಿದ್ದ ಕರುಣಾನಿಧಿ ರಾಜಕಾರಣ ಮಾತ್ರ ಮಾಡಿಕೊಂಡಿದ್ದವರಲ್ಲ. ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ಕರುಣಾನಿಧಿ ಚಿತ್ರ ಬದುಕನ್ನು ಆರಂಭಿಸಿದ್ದು ಚಿತ್ರಕಥೆಗಾರನಾಗಿ. ಆದರೆ ಅದ್ಭುತ ವಾಕ್ಚಾತುರ್ಯ ಮತ್ತು ಚಾಣಾಕ್ಷತೆ ಅತಿ ಕಡಿಮೆ ಸಮಯದಲ್ಲಿಯೇ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆದೊಯ್ದಿತು. ಭಾಷಣ ಮಾಡಲು ಮೈಕ್ ಮುಂದೆ ನಿಂತರೂ ಪೆನ್ನು ಹಿಡಿಯುವುದನ್ನು ಮಾತ್ರ ಮರೆಯಲಿಲ್ಲ.

ದ್ರಾವಿಡ ಚಳವಳಿಯನ್ನು ಉತ್ತೇಜಿಸಲು ಕರುಣಾನಿಧಿ ಲೇಖನಿಯನ್ನು ಬಳಸಿಕೊಂಡರು. 20ನೇ ವಯಸ್ಸಿನಲ್ಲಿ ಸಿನಿಮಾ ರಂಗದೊಂದಿಗೆ ನಂಟು ಬೆಳೆಸಿಕೊಂಡ ಕರುಣಾನಿಧಿ ಜ್ಯುಪಿಟರ್ ಪಿಕ್ಚರ್ಸ್ ಜತೆಗೂಡಿದರು. ರಾಜಕುಮಾರಿ ಚಿತ್ರದ ಮೂಲಕ ಕರುಣಾ ಸಿನಿಮಾ ಪಯಣ ಆರಂಭವಾಯಿತು. ತಮ್ಮಲ್ಲಿರುವ ಆಶಯ ನಿರೀಕ್ಷೆಗಳನ್ನೆಲ್ಲ ಒಂದು ಸಿನಿಮಾದ ಮೂಲಕ ಬಹಿರಂಗಪಡಿಸಿದರು. ಶಿವಾಜಿ ಗಣೇಶನ್ ನಟಿಸಿದ್ದ ‘ಪರಾಶಕ್ತಿ’ ಚಿತ್ರ ದ್ರಾವಿಡ ಸಿದಾಟಛಿಂತಗಳನ್ನು ಬೆಳ್ಳಿ ಪರದೆಯ ಮೇಲೆ ಮೂಡಿಸಿತು. ಈ ಚಿತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿ ನಿಷೇಧವೂ ಆಗಿತ್ತು. ಆದರೆ 1952ರಲ್ಲಿ ಈ ಚಿತ್ರ ಕೊನೆಗೂ ಬಿಡುಗಡೆಯಾಗಿ ಬಾಕ್ಸ್ ಆ?ೕಸಿನಲ್ಲೂ ಹಿಟ್ ಆಯಿತು. ಚಿತ್ರಗೀತೆ ರಚನೆಯಲ್ಲೂ ಕರುಣಾ ಎತ್ತಿದ ಕೈ ಎಂಬುದು ಅದಾಗಲೇ ಸಾಬೀತಾಗಿತ್ತು.

ನಂತರ ಕೆಲವು ವರ್ಷಗಳ ಕಾಲ ಸಿನಿಮಾದಲ್ಲಿ ಕೈಚಳಕ ತೋರಿದ್ದ ಕರುಣಾನಿಧಿ ಪತ್ರಿಕೋದ್ಯಮದಲ್ಲೂ ಕೃಷಿ ಆರಂಭಿಸಿದರು. ಹಿಂದುಳಿದ ವರ್ಗದ ಮೇಲಿನ ದಬ್ಬಾಳಿಕೆ, ಅಸ್ಪೃಶ್ಯತೆ, ಜಮೀನ್ದಾರಿ ಪದಟಛಿತಿ, ಧಾರ್ವಿುಕ ಆಷಾಢಭೂತಿತನದ ವಿರುದಟಛಿ ಪುಟಗಟ್ಟಲೆ ಲೇಖನ ಬರೆದರು. ‘ಮುರಸೋಳಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು ಕರುಣಾನಿಧಿ.

ಇವರ ಲೇಖನಿಯಿಂದ ಮೂಡಿರುವ ಕವನಗಳು, ಕಥೆಗಳು, ಆತ್ಮಚರಿತ್ರೆಗಳು, ಐತಿಹಾಸಿಕ ಕಾದಂಬರಿಗಳು, ಸಂಭಾಷಣೆಗಳು, ಪ್ರಬಂಧಗಳು, ನಾಟಕಗಳ ಸಂಖ್ಯೆಯೂ ಸಾಕಷ್ಟಿದೆ. ತಮಿಳು ಭಾಷೆಯ ಅಭಿವೃದಿಟಛಿಗೂ ಕರುಣಾ ಕೊಡುಗೆ ಸಾಕಷ್ಟಿದೆ. ಕನ್ಯಾಕುಮಾರಿಯಲ್ಲಿ ಖ್ಯಾತ ಕವಿ, ಪಂಡಿತ, ವಿದ್ಯಾಂಸ ತಿರುವಳ್ಳುವರ್ ಅವರ 133 ಅಡಿಯ ಪ್ರತಿಮೆ ಸ್ಥಾಪನೆ ಇವರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದು.

ಜೀವ ಹಿಂಡಿದ ಕಾಯಿಲೆ

ಕರುಣಾನಿಧಿ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದರು. 2016ರ ಕೊನೆಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕಾಕತಾಳೀಯವೆಂದರೆ, ಅವರ ಆಜನ್ಮಶತ್ರು ಮತ್ತು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ ಕೂಡ ಆಸ್ಪತ್ರೆ ಸೇರಿದ್ದರು. ಎರಡೂ ಪಕ್ಷಗಳ (ಡಿಎಂಕೆ, ಎಡಿಎಂಕೆ) ಮಹಾನಾಯಕರು ಒಟ್ಟಿಗೇ ಆಸ್ಪತ್ರೆ ಸೇರಿದ್ದು ತಮಿಳುನಾಡಿನ ರಾಜಕೀಯ ಚರಿತ್ರೆಯಲ್ಲಿ ಒಂದು ಮಹತ್ವದ ವಿದ್ಯಮಾನ. ಗಂಟಲು ಮತ್ತು ಶ್ವಾಸಕೋಶದ ಅಲರ್ಜಿಯಿಂದ ಅವರು ಬಳಲುತ್ತಿದ್ದರು. ಉಸಿರಾಟ ಉತ್ತಮಪಡಿಸುವ ದೃಷ್ಟಿಯಿಂದ ಅವರಿಗೆ ಈ ಸಂದರ್ಭದಲ್ಲಿ ಟ್ರಕೆಸ್ಟೊಮಿ ಶಸಣಉಚಿಕಿತ್ಸೆ ಮಾಡಲಾಗಿತ್ತು. ಅವರ ಕ್ಷೀಣಿಸುತ್ತಿರುವ ಅನಾರೋಗ್ಯ ಗಮನ ದಲ್ಲಿರಿಸಿಕೊಂಡು ಡಿಎಂಕೆ ಪಕ್ಷದ ಕೋಶಾಧ್ಯಕ್ಷರಾಗಿದ್ದ ಸ್ಟಾಲಿನ್​ಗೆ ಕಾರ್ಯಾಧ್ಯಕ್ಷ ಪದವಿ ಕೂಡ ನೀಡಲಾಗಿತ್ತು.

 

Leave a Reply

Your email address will not be published. Required fields are marked *

Back To Top