ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್: ಕರುಣಾನಿಧಿ ಪ್ರತಿಮೆ ಅನಾವರಣಕ್ಕೆ ಆಹ್ವಾನ

ನವದೆಹಲಿ: ತಮಿಳುನಾಡು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಅವರು ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಡಿಎಂಕೆ ಸದಸ್ಯರಾದ ಕನಿಮೋಳಿ ಎ. ರಾಜಾ, ಟಿ.ಆರ್​.ಬಾಬು ಕೂಡ ಇದ್ದರು.

ಡಿ.16ರಂದು ಚೆನ್ನೈನಲ್ಲಿ ಹಮ್ಮಿಕೊಂಡಿರುವ ಡಿಎಂಕೆ ಮಾಜಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅರವಿಂದ ಕೇಜ್ರಿವಾಲ್​ ಅವರನ್ನು ಸ್ಟಾಲಿನ್​ ಆಹ್ವಾನಿಸಿದರು.

ಅದಕ್ಕೂ ಮೊದಲು ಸ್ಟಾಲಿನ್​ ಅವರು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಮುಖಂಡ ಶರದ್​ ಪವಾರ್​ ಜತೆಗೂ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಿದರು. ಶರದ್​ ಪವಾರ್ ಅವರಿಗೂ ಕರುಣಾನಿಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. (ಏಜೆನ್ಸಿ)