Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ತಮಿಳುನಾಡಿನಲ್ಲಿ ಏಳುದಿನ ಶೋಕಾಚರಣೆ: ನಾಳೆ ಮರಿನಾ ಬೀಚ್​ನಲ್ಲಿ ಕರುಣಾ ಅಂತ್ಯಕ್ರಿಯೆ

Tuesday, 07.08.2018, 7:48 PM       No Comments

ಚೆನ್ನೈ: ಡಿಎಂಕೆ ವರಿಷ್ಠ ಕರುಣಾನಿಧಿಯವರ ಸಾವಿನಿಂದ ಅವರ ಬೆಂಬಲಿಗರ ಶೋಕ ಮುಗಿಲುಮುಟ್ಟಿದ್ದು,  ತಮಿಳುನಾಡಿನಾದ್ಯಂತ ಏಳುದಿನ ಶೋಕಾಚರಣೆ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಚೆನ್ನೈನ ಗೋಪಾಲಪುರಂನಲ್ಲಿರುವ ಅವರ ನಿವಾಸಕ್ಕೆ ರವಾನೆ ಮಾಡಲಾಗಿದೆ.

ನಾಳೆ ಬೆಳಗ್ಗೆಯಿಂದಲೇ ರಾಜಾಜಿ ಹಾಲ್​ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸಕಲ ಸಿದ್ಧತೆಗಳೂ ನಡೆಯುತ್ತಿವೆ. ನಂತರ ಸಂಜೆ ಮರಿನಾ ಬೀಚ್​ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಕರುಣಾ ನಿಧಿಯವರ ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿಯವರು ನಾಳೆ ಚೆನ್ನೈಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್​ ಬಿಗಿ ಬಂದೋಬಸ್ತ್​

ಡಿಎಂಕೆ ಮುಖಂಡ ಕರುಣಾನಿಧಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ.
ಕರ್ನಾಟಕ, ತಮಿಳುನಾಡು ಗಡಿ ಭಾಗದಲ್ಲೂ ಪೊಲೀಸ್​ ಹೈ ಅಲರ್ಟ್​ ಘೋಷಣೆಯಾಗಿದೆ. ಅಲ್ಲಿ ಗಲಾಟೆಯಾಗುವ ಸಾಧ್ಯತೆ ಇರುವುದರಿಂದ ಕರ್ನಾಟಕದಿಂದ ಯಾವುದೇ ಕೆಎಸ್​ಆರ್​ಟಿಸಿ, ಖಾಸಗಿ ಬಸ್​ಗಳನ್ನು ತಮಿಳುನಾಡಿಗೆ ಕಳಿಸದಂತೆ ಅಲ್ಲಿನ ಪೊಲೀಸರು ಸೂಚನೆ ನೀಡಿದ್ದಾರೆ. ಹೊಸೂರು ಗಡಿಯಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಈಗಾಗಲೇ ಅಲ್ಲಿಯವರೆಗೆ ತೆರಳಿದ ಬಸ್​ಗಳು ವಾಪಸ್​ ಬರುತ್ತಿವೆ.

ಶಾಲಾ ಕಾಲೇಜಿಗಳಿಗೆ ರಜೆ
ನಾಳೆ ತಮಿಳುನಾಡಿನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೆರಡು ದಿನ ಚಲನಚಿತ್ರ ಪ್ರದರ್ಶನಗಳಿರುವುದಿಲ್ಲ.

ಇದನ್ನೂ ಓದಿ: 

Leave a Reply

Your email address will not be published. Required fields are marked *

Back To Top