ಡಿಎಂಎಫ್ ಹಣ ಬೇಕಾಬಿಟ್ಟಿ ಬಳಕೆ !

ಹಟ್ಟಿಚಿನ್ನದಗಣಿ: ಜಿಲ್ಲೆ ವ್ಯಾಪ್ತಿಯಲ್ಲಿ ರಸ್ತೆ, ಕುಡಿವ ನೀರು, ಶಾಲೆ, ಕಾಲೇಜು ಕಟ್ಟಡ ಕಾಮಗಾರಿ ಸೇರಿ ಅಗತ್ಯ ಸೌಲಭ್ಯಗಳಿಗೆ ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಅನುದಾನ ಬಳಸಬೇಕು. ಆದರೆ, ಅಧಿಕಾರಿಗಳು ಮಾತ್ರ ಬೇಕಾಬಿಟ್ಟಿ ಬಳಸುತ್ತಿದ್ದು, ಅನುಮಾನಕ್ಕೆ ಎಡೆಮಾಡಿದೆ. ಅಗತ್ಯ ಕೆಲಸಗಳಿಗಾಗಿ ಹಟ್ಟಿಚಿನ್ನದಗಣಿ ಕಂಪನಿ ಡಿಎಂಎಫ್ ಅನುದಾನ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡುತ್ತದೆ. ಆದರೆ ತಾಪಂ ಹಾಗೂ ಜಿಪಂ ಸೇರಿ ವಿವಿಧ ಸ್ತರದ ಅಧಿಕಾರಿಗಳು, ಅವಶ್ಯ ಇಲ್ಲದಿದ್ರೂ ಶಾಲಾ ಕೊಠಡಿ, ಪಾರ್ಕ್, ಶೌಚಗೃಹ ನಿರ್ಮಿಸುವ ಮೂಲಕ ಡಿಎಂಎಫ್ ಹಣ ಪೋಲು ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

(ಹೆಚ್ಚಿನ ಮಾಹಿತಿಗಾಗಿ ಮಂಗಳವಾರದ (ಫೆ.12-2019) ವಿಜಯವಾಣಿ ಓದಿ)