ಡಿಕೆಶಿಗೆ ಕುಂದಗೋಳ ಮೆಣಸಿನಕಾಯಿ ರುಚಿಯ ಗಾಟು ಗೊತ್ತಿಲ್ಲ, 23ರಂದು ಜನರೇ ತೋರಿಸಲಿದ್ದಾರೆ ಎಂದ ಬಸವರಾಜ‌ ಬೊಮ್ಮಾಯಿ‌

ಹುಬ್ಬಳ್ಳಿ: ಕುಂದಗೋಳದ ಮೆಣಸಿನಕಾಯಿ ರುಚಿಯ ಗಾಟು ಡಿ.ಕೆ.ಶಿವಕುಮಾರ್​ಗೆ ಗೊತ್ತಿಲ್ಲ. ಮೇ 23ರಂದು ಕುಂದಗೋಳ‌ ಜನ ಡಿಕೆಶಿಗೆ ಇಲ್ಲಿನ ಮೆಣಸಿನಕಾಯಿ ರುಚಿ‌ ತೋರಿಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ‌ ಬೊಮ್ಮಾಯಿ‌ ಕಿಡಿಕಾರಿದ್ದಾರೆ.

ಕುಂದಗೋಳ ಉಪಚುನಾವಣೆಯ ಪ್ರಚಾರದ ವೇಳೆ ಮಾತನಾಡಿ, ಸಚಿವ ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿ‌ ಹೋಟೆಲ್‌ನಲ್ಲಿ ಕುಳಿತು ಹಣ ಹಂಚುತ್ತಿದ್ದಾರೆ. ಡಿ.ಕೆ.ಶಿವಕುಮಾರ್​ ಅವರು ರಿಯಲ್ ಎಸ್ಟೇಟ್ ಹಣ ತಂದು‌ ಇಲ್ಲಿ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಉತ್ತರ ಕರ್ನಾಟಕದ ಪಾಲಿಗೆ ರಾಜ್ಯದ ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ. ಕೇವಲ ಮೂರು ಜಿಲ್ಲೆಗಳಾದ ಹಾಸನ, ಮಂಡ್ಯ, ತುಮಕೂರಿನಲ್ಲಿ ಸರ್ಕಾರ ಇದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಆಶೀರ್ವಾದ ಇರುವವರೆಗೂ ನಮ್ಮ ಸರ್ಕಾರ ಇರಲಿದೆ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾಳೆ ಏನಾದರೂ ಸರ್ಕಾರ ಬಿದ್ದು ಹೋದರೆ ಸಿದ್ದರಾಮಯ್ಯ ಕಾರಣ ಅಂತಾ ಪರೋಕ್ಷವಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರಿಗೆ ವಿಶ್ವಾಸ ಇಲ್ಲ. ಆಪರೇಷನ್ ಸಿದ್ದರಾಮಯ್ಯ ಶುರುವಾಗಿದೆ. ಅದರ ಭಾಗವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ರೇವಣ್ಣ ಅವರ ಹೆಸರು ಹೇಳಿದ್ದಾರೆ ಎಂದು ಲೇವಡಿ ಮಾಡಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *