ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು: ಡಿ.ಕೆ.ಸುರೇಶ್​

ರಾಮನಗರ: ಬಿಜೆಪಿಯನ್ನು ನಾವೆಲ್ಲರೂ ವಿರೋಧಿಸುತ್ತೇವೆ. ಬಿಜೆಪಿಯನ್ನು ಸೋಲಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್​ ತಿಳಿಸಿದ್ದಾರೆ.

ರಾಮನಗರದ ಉಪಚುನಾವಣೆಯ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದಿದ್ದ ಕಾಂಗ್ರೆಸ್​ ನಾಯಕ ಸುರೇಶ್, ಜಾತಿ,ಧರ್ಮ ಪಕ್ಷ ನೋಡದೆ ಸಮ್ಮಿಶ್ರ ಸರ್ಕಾರ ಕೆಲಸ ಮಾಡುತ್ತಿದೆ. ಹತ್ತು ಹಲವು ಯೋಜನೆ ರಾಮನಗರಕ್ಕೆ ನೀಡಲಾಗಿದೆ. ಎಲ್ಲ ರೈತರಿಗೂ ಉಚಿತ ಟ್ರಾನ್ಸ್​ಫಾರ್ಮರ್ ನೀಡಲಾಗಿದೆ ಎಂದು ಪ್ರಚಾರದ ವೇಳೆ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್​ಗೆ ಮತ ನೀಡಿ ಅವಕಾಶ ಮಾಡಿಕೊಡಿ ಎಂದ ಅವರು, ಕೈ-ದಳ ಮುಖಂಡರು ಹೊಂದಾಣಿಕೆ ಮಾಡಿಕೊಂಡು ಹೋಗಿ. ತಾವೆಲ್ಲರೂ ಸಹಕಾರ ಕೊಡಿ ಎಂದು ಮನವಿ ಮಾಡಿದರು.

ನಮ್ಮೆಲ್ಲರ ಅಭ್ಯರ್ಥಿ, ಪ್ರೀತಿಯ ಸೋದರಿ ಅನಿತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಲು ಪಣತೊಟ್ಟಿದ್ದೇವೆ. ಸಿಎಂ ಕುಮಾರಸ್ವಾಮಿ ರಾಮನಗರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡಿದ್ದಾರೆ. ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್​ ನಾಯಕ ಪಿಜಿಆರ್​ ಸಿಂಧ್ಯಾ ಹೇಳಿದರು.

ತಟ್ಟೇಕೆರೆಯ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಎರಡನೇ ದಿನದ ಬಹಿರಂಗ ಪ್ರಚಾರ ಆರಂಭಿಸಿದ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರಿಗೆ ಡಿ.ಕೆ ಸುರೇಶ್, ಪಿಜಿಆರ್ ಸಿಂಧ್ಯಾ ಸಾಥ್ ಸಾಥ್​ ನೀಡಿದ್ದರು. (ದಿಗ್ವಿಜಯ ನ್ಯೂಸ್)