ಸಚಿವ ಡಿ.ಕೆ. ಶಿವಕುಮಾರ್​ ಕಾಲಿಗೆ ಬಿದ್ದ ಅನ್ನದಾತ

ರಾಮನಗರ: ಬರ ಪರಿಶೀಲನೆಗಾಗಿ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದ ರೈತರೊಬ್ಬರು ಬೆಳೆ ಪರಿಹಾರ ನೀಡುವಂತೆ ಕೇಳಿಕೊಂಡ ಘಟನೆ ನಡೆದಿದೆ.

ಡಿ.ಕೆ. ಶಿವಕುಮಾರ್​, ಸಚಿವರರಾದ ಶಿವಶಂಕರ್​ ರೆಡ್ಡಿ, ಡಿ.ಸಿ. ತಮ್ಮಣ್ಣ ಗುರುವಾರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಣ್ಣನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮದ ರೈತರೊಬ್ಬರು ಸಚಿವರ ಕಾಲಿಗೆ ಬಿದ್ದು ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ರೈತ ತಮ್ಮ ಜಮೀನಿನಲ್ಲಿ ಸಾಲ ಮಾಡಿ ರಾಗಿ ಬೆಳೆದಿದ್ದರು. ಆದರೆ, ಮುಂಗಾರು ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ನಾಶವಾಗಿತ್ತು.

Leave a Reply

Your email address will not be published. Required fields are marked *