20.4 C
Bangalore
Monday, December 9, 2019

ಡಿಕೆಶಿ ಅಕ್ರಮ 800 ಕೋಟಿ ರೂ.?: ವಿಶೇಷ ನ್ಯಾಯಾಲಯಕ್ಕೆ ಇ.ಡಿ ಪರ ವಕೀಲರ ಹೇಳಿಕೆ

Latest News

ಬೈ ಎಲೆಕ್ಷನ್ ರಿಸಲ್ಟ್​| ವಿಜಯನಗರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ ಬಿಜೆಪಿಯ ಆನಂದ್ ಸಿಂಗ್​…

ಬಳ್ಳಾರಿ: ಗಣಿನಾಡಿನ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ...

ಮೊದಲ ಸುತ್ತಿನ ಮತಎಣಿಕೆ: ಹೊಸಕೋಟೆಯಲ್ಲಿ ಪಕ್ಷೇತರ ಶರತ್​ ಬಚ್ಚೇಗೌಡ, ಯಶವಂತಪುರದಲ್ಲಿ ಜೆಡಿಎಸ್​ ಜವರಾಯಿಗೌಡ ಮುನ್ನಡೆ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತಎಣಿಕೆ ಪಕ್ರಿಯೆ ಮುಗಿದಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಪಕ್ಷೇತರ...

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

| ರಾಘವ ಶರ್ಮ ನಿಡ್ಲೆ ನವದೆಹಲಿ

ಕೋಟಿಗಟ್ಟಲೆ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬೇರೆ ಬೇರೆ ಹೆಸರಿನಲ್ಲಿ 20 ವಿವಿಧ ಬ್ಯಾಂಕುಗಳಲ್ಲಿ 317 ಖಾತೆಗಳನ್ನು ಹೊಂದಿರುವ ಜತೆಗೆ, ಬೇನಾಮಿ ಹೆಸರಲ್ಲಿ 800 ಕೋಟಿ ರೂ. ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ.) ಪರ ವಕೀಲರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ವಿಸõತ ತನಿಖೆಯಾಗಬೇಕಿದೆ ಎಂಬ ಜಾರಿ ನಿರ್ದೇಶನಾಲಯದ ವಾದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ, ಶಿವಕುಮಾರ್​ರನ್ನು ಸೆ.17ರವರೆಗೆ ತನಿಖಾ ಸಂಸ್ಥೆಗೆ ವಶದಲ್ಲಿಟ್ಟುಕೊಳ್ಳಲು ಆದೇಶಿಸಿದೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪಣೆ ಸಲ್ಲಿಸಬೇಕೆಂದು ಇ.ಡಿ.ಗೆ ಸೂಚನೆ ನೀಡಿದೆ. ಮಂಗಳವಾರ ಜಾಮೀನು ಅರ್ಜಿ ಮೇಲೆ ವಾದ-ಪ್ರತಿವಾದ ನಡೆಯಲಿದ್ದು, ಡಿಕೆಶಿ ನ್ಯಾಯಾಂಗ ಬಂಧನಕ್ಕೊಳಗಾಗುತ್ತಾರೋ ಅಥವಾ ಬಿಡುಗಡೆಯಾಗುತ್ತಾರೋ ಎಂಬುದು ನಿರ್ಧಾರವಾಗಲಿದೆ.

ಶುಕ್ರವಾರದ ವಿಚಾರಣೆ ವೇಳೆ ಡಿಕೆಶಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಇಡಿ ವಕೀಲ ಕೆ.ಎನ್. ನಟರಾಜ್, ಆರೋಪಿ ತನ್ನ ಅಕ್ರಮ ಹಣದ ಮೂಲದ ಬಗ್ಗೆ ಸ್ಪಷ್ಟ ವಿವರಣೆ ನೀಡಿಲ್ಲ. ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ನೀಡುವ ಬದಲು, ಅಪ್ರಸ್ತುತ ವಿವರಣೆಗಳನ್ನು ನೀಡುತ್ತಾ ಕಾಲ ಕಳೆದಿದ್ದಾರೆ. ಪ್ರಶ್ನೆಗಳಿಗೆ ಉತ್ತರ ನೀಡಲು ಸುದೀರ್ಘ ಸಮಯ ತೆಗೆದುಕೊಂಡಿದ್ದಲ್ಲದೆ, ಆಯಾಸ, ನಿದ್ದೆಯ ಕಾರಣಗಳನ್ನು ಕೊಟ್ಟು ವಿರಾಮಗಳನ್ನು ತೆಗೆದುಕೊಂಡು ಕಾಲಹರಣ ಮಾಡಿದ್ದಾರೆ. ಆರೋಪಿಯ ಇಂಥ ಅಸಹಕಾರ ಧೋರಣೆ ಮಧ್ಯೆಯೂ ತನಿಖೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಶಿವಕುಮಾರ್ ಪ್ರಭಾವಿ ರಾಜಕಾರಣಿ.ಸಾಕ್ಷ್ಯಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಪ್ರಕರಣವನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಬೇಕಿರು ವುದರಿಂದ ಅವರು ಹಾಗೂ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆ ಗೊಳಿಸುವುದು ಅನಿವಾರ್ಯ ಎಂದು ಕೋರ್ಟ್​ಗೆ ಸಲ್ಲಿಸಿದ ದಾಖಲೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

317 ಬ್ಯಾಂಕ್ ಖಾತೆ ಇದೆ ಎನ್ನುತ್ತಿದ್ದಾರಲ್ಲ. ಅವೆಲ್ಲ ವನ್ನೂ ಇಡಿ ಅಧಿಕಾರಿಗಳಿಗೆ ಬರೆದು ಕೊಡ್ತೀನಿ. ಚುನಾವಣಾ ಪ್ರಮಾಣ ಪತ್ರದಲ್ಲಿ ನನ್ನ ಎಲ್ಲ ಆಸ್ತಿ ಬಗ್ಗೆ ವಿವರಣೆ ನೀಡಿದ್ದೇನೆ.

| ಡಿ.ಕೆ.ಶಿವಕುಮಾರ್ (ಆದೇಶ ಕಾಯ್ದಿರಿಸಿದ ವೇಳೆ ಪತ್ರಕರ್ತರನ್ನು ನೋಡಿ ಕಟಕಟೆಯಲ್ಲಿ ನಿಂತುಕೊಂಡು ಹೇಳಿದ್ದು)

ಇದು ಕೋರ್ಟ್ ಕಸ್ಟಡಿ, ನಿಮ್ಮದಲ್ಲ!

ನ್ಯಾಯಾಲಯಕ್ಕೆ ಹಾಜರಾದ ಬಳಿಕ ಕಟಕಟೆಯಲ್ಲಿದ್ದ ಡಿಕೆಶಿ, ವಕೀಲ ಅಭಿಷೇಕ್ ಮನುಸಿಂಘಿ ಬಳಿ ತೆರಳಿ ಮಾತುಕತೆ ನಡೆಸುತ್ತಿದ್ದರು. ಆಗ ಇಡಿ ಜಂಟಿ ನಿರ್ದೇಶಕ ಮತ್ತು ತನಿಖಾಧಿಕಾರಿ ಸೌರಭ್ ಮೆಹ್ತಾ, ‘ಡಿಕೆ ಸರ್ ನೀವು ಇಲ್ಲಿ ಬನ್ನಿ, ಅಲ್ಲಿ ನಿಲ್ಲುವುದು ಬೇಡ’ ಎಂದರು. ಇದಕ್ಕುತ್ತರಿಸಿದ ಡಿಕೆಶಿ, ‘ಇದು ಕೋರ್ಟ್ ಕಸ್ಟಡಿ. ನೀವು ಹೇಳಿದಲ್ಲಿ ನಾನು ನಿಲ್ಲಬೇಕಿಲ್ಲ. ನಿಮ್ಮ ಕಸ್ಟಡಿಯಲ್ಲಿದ್ದಾಗ ಆದೇಶ ಕೊಡಿ, ಪಾಲಿಸುತ್ತೇನೆ’ ಎಂದು ಸಿಡಿಮಿಡಿಗೊಂಡರು.

ನ್ಯಾಯಾಲಯ ಹೇಳಿದ್ದೇನು?

 • ಆರೋಪಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
 • ಪ್ರತಿ 24 ಗಂಟೆಗೊಮ್ಮೆ ಅಥವಾ ಅದಕ್ಕೂ ಮುನ್ನ ಆರೋಗ್ಯ ತಪಾಸಣೆಯಾಗಲಿ
 • ಕುಟುಂಬಸ್ಥರು ಅಥವಾ ವಕೀಲರು ದಿನಕ್ಕೆ ಅರ್ಧ ಗಂಟೆ ಆರೋಪಿಯನ್ನು ಭೇಟಿ ಮಾಡಬಹುದು
 • ತನ್ನ ಕುಟುಂಬದ ವೈದ್ಯ ಡಾ. ರಂಗನಾಥ್ ಅವರನ್ನೂ ಡಿಕೆಶಿ ಭೇಟಿ ಮಾಡಬಹುದಾಗಿದೆ

ಇ.ಡಿ. ಆರೋಪಗಳೇನು?

 • ಸಚಿವ, ಶಾಸಕನಾಗಿ ಅಧಿಕಾರದ ದುರ್ಬಳಕೆ ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ.
 • ಸುಮಾರು 200 ಕೋಟಿ ರೂ. ನಗದು ಅವ್ಯವಹಾರ ಮಾಡಿರುವ ಡಿಕೆಶಿ, ಬೇನಾಮಿ ಹೆಸರಲ್ಲಿ ಅಂದಾಜು 800 ಕೋಟಿ ರೂ. ಅಕ್ರಮ ಹಣ ಸಂಪಾದಿಸಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಹೆಸರಲ್ಲೇ ರೂ. 108 ಕೋಟಿ ಆಸ್ತಿಯಿದೆ.
 • ಬ್ಯಾಂಕ್ ಖಾತೆಗಳಲ್ಲಿ 200 ಕೋಟಿ ರೂ. ಗಿಂತಲೂ ಹೆಚ್ಚು ಅಕ್ರಮ ಹಣ ಹೂಡಿರುವುದು ಬೆಳಕಿಗೆ ಬಂದಿದೆ. ಮೂರು ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣವಿರುವುದೂ ಗೊತ್ತಾಗಿದೆ.
 • ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬಸ್ಥರ ಬ್ಯಾಂಕ್ ಖಾತೆ ಮತ್ತು ವ್ಯವಹಾರಗಳ ಬಗ್ಗೆ ಕೂಲಂಕಷ ತನಿಖೆಯಾಗಬೇಕಿದೆ.
 • ಯಾವುದೇ ಕಾರಣಗಳಿಲ್ಲದೆ ಡಿ.ಕೆ. ಶಿವಕುಮಾರ್ ಕುಟುಂಬಸ್ಥರು, ಆಪ್ತರಿಗೆ ಸೇರಿದ ಖಾತೆಗಳಿಂದ ಮತ್ತೊಂದು ಖಾತೆಗೆ ಭಾರೀ ಮೊತ್ತದ ಹಣ ವರ್ಗಾವಣೆಯಾಗಿದೆ. ಇದರಿಂದ ಹಣಕಾಸು ಅವ್ಯವಹಾರದ ಜಾಲ ಪತ್ತೆಯಾಗಿದೆ.
 • ಈ ಹಣಕಾಸು ವರ್ಗಾವಣೆಯ ಅವ್ಯವಹಾರಕ್ಕೆ ಡಿಕೆಶಿಯಿಂದ ಸಮರ್ಥ ಉತ್ತರ ಸಿಕ್ಕಿಲ್ಲ.
 •  ತನಿಖೆ ವೇಳೆ ಡಿಕೆಶಿ ಕುಟುಂಬಸ್ಥರ ಹೆಸರಲ್ಲಿ ಹಲವು ಸ್ಥಿರಾಸ್ಥಿಗಳಿರುವುದು ಗೊತ್ತಾಗಿದೆ. ಇದು ಪಿತ್ರಾರ್ಜಿತವಾಗಿ ಮತ್ತು ಉಡುಗೊರೆ ಯಾಗಿ ಸಿಕ್ಕಿರುವುದು ಎಂದು ಆರೋಪಿ ಹೇಳಿಕೊಂಡಿದ್ದಾರೆ. ಆದರೆ ಈ ಆಸ್ತಿಗಳ ಮೇಲಿನ ಹೂಡಿಕೆ ಬಗ್ಗೆ ಆರೋಪಿ ಸ್ಪಷ್ಟ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಇವುಗಳಲ್ಲಿ ಬಹುತೇಕ ಶಿವಕುಮಾರ್ ಸೇರಿದ ಬೇರೆಯವರ ಹೆಸರಿನಲ್ಲಿರುವ ಬೇನಾಮಿ ಆಸ್ತಿಗಳು ಎಂಬುದು ತನಿಖೆಯಿಂದ ಕಂಡುಕೊಳ್ಳ ಲಾಗಿದೆ

 • 317 ಬ್ಯಾಂಕ್ ಖಾತೆಗಳ ಮೂಲಕ ತಮ್ಮ ಅಕ್ರಮ ಹಣವನ್ನು ಆಪ್ತರು, ಕುಟುಂಬಸ್ಥರ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಸ್ಪಷ್ಟವಾಗುತ್ತದೆ. ಇದು ಅಕ್ರಮ ಹಣ ಅಲ್ಲ ಎಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದಲೇ ಈ ಪರಿಯಲ್ಲಿ ಬ್ಯಾಂಕ್ ಖಾತೆಗಳ ನಿರ್ವಹಣೆಯಾಗಿದೆ.

   

 • ತನಿಖೆಯಲ್ಲಿ ಇತರೆ ಆರೋಪಿ ಗಳು ನೀಡಿರುವ ಹೇಳಿಕೆಗಳು ನಮ್ಮ ಆರೋಪಗಳನ್ನು ಪುಷ್ಟೀಕರಿಸುತ್ತಿವೆ.

 • ಕುಟುಂಬಸ್ಥರ ಬೇನಾಮಿ ಆಸ್ತಿ ವಿವರಣೆಯನ್ನು ಮುಚ್ಚಳಿಕೆಯಲ್ಲಿ ನೀಡಿದ್ದೇವೆ. ಈ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು.

 • ಡಿಕೆಶಿಗೆ ಹಣಕಾಸು ಅವ್ಯವಹಾರ ಮಾಡುವ ಹವ್ಯಾಸವೇ ಇದೆ. ಇದು ದೇಶದ ಆರ್ಥಿಕತೆಗೆ ಮಾರಕ.

 • ಹೆಚ್ಚುವರಿ ತನಿಖೆ ವೇಳೆ ಅವ್ಯವಹಾರದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

 • 2002ರ ಹಣಕಾಸು ಅವ್ಯವಹಾರ ತಡೆ ಕಾಯ್ದೆ ಅಡಿಯಲ್ಲಿ ಇಡಿ ತನಿಖೆ ಮಾಡುತ್ತಿದ್ದರೂ, ಡಿಕೆಶಿ ಮತ್ತವರ ಬೆಂಬಲಿಗರು ನಾವು ದುರುದ್ದೇಶದಿಂದ ತನಿಖೆ ಮಾಡುತ್ತಿದ್ದೇವೆ ಎಂಬ ಕ್ಷುಲ್ಲಕ ಆರೋಪ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಲ್ಲ.

 • ಅಧಿಕಾರ ಬಳಸಿ ಡಿಕೆಶಿ ಅಕ್ರಮ ಹಣ ಸಂಪಾದನೆ ಹೇಗೆ ಮಾಡಿದರು ಎಂಬ ಬಗ್ಗೆಯೂ ತನಿಖೆಯಾಗಬೇಕು.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...