18.5 C
Bangalore
Monday, December 16, 2019

ಹಣದ ಮೂಲ ಯಾವುದು ತಲುಪಿದ್ದೆಲ್ಲಿ?: ತನಿಖಾ ಪ್ರಕ್ರಿಯೆಯ ಅಂತಿಮ ಘಟ್ಟ, ಡಿ.ಕೆ. ಶಿವಕುಮಾರ್ ಮತ್ತೆ ಇಡಿತಕ್ಕೆ

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದ ತನಿಖಾ ಪ್ರಕ್ರಿಯೆಯ ಪ್ರಮುಖ ಘಟ್ಟದಲ್ಲಿ ನಾವಿದ್ದೇವೆ. ಡಿ.ಕೆ.ಶಿವಕುಮಾರ್​ಗೆ ಸೇರಿದ ಹಲವು ಪರಿಚಿತ-ಅಪರಿಚಿತ ಖಾತೆ, ಆಸ್ತಿಗಳ ಬಗ್ಗೆ ಇನ್ನೂ ಸಮಗ್ರ ಮಾಹಿತಿ, ದಾಖಲೆ ಕಲೆ ಹಾಕಬೇಕಿದೆ. ಇವೆಲ್ಲದರಿಂದಲೂ ಡಿಕೆಶಿ ಮತ್ತವರ ಕುಟುಂಬಸ್ಥರು ಲಾಭ ಗಳಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖಾಧಿಕಾರಿಗಳು ಡಿಕೆಶಿ ಕಸ್ಟಡಿ ವಿಸ್ತರಣೆ ಕೋರಿ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ್ದಾರೆ.

ಕೆಲ ಅಕ್ರಮ ಆಸ್ತಿ, ಹಣದ ಮೂಲಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಈ ಹಣವನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದೂ ಗೊತ್ತಾಗಬೇಕಿದೆ. ಇಂಥದ್ದೊಂದು ದೊಡ್ಡ ಪ್ರಮಾಣದ ಅಕ್ರಮ ಹಣಕಾಸು ಅವ್ಯವಹಾರಕ್ಕೆ ಸಂಬಂಧಿ ಸಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿದರೆ ಅಪರಾಧಿಕ ಕೃತ್ಯ ಹಾಗೂ ಅಕ್ರಮ ಹಣ ಸಂಪಾದನೆಯ ಒಟ್ಟು ಪ್ರಮಾಣ ಕಂಡುಕೊಳ್ಳಬಹುದು. ಆರೋಪಿಯ ಅಕ್ರಮಗಳಿಗೆ ಸಂಬಂಧಿಸಿದ ಹತ್ತಾರು ದಾಖಲೆಗಳನ್ನು ತನಿಖೆ ವೇಳೆ ಸಂಗ್ರಹಿಸಲಾಗಿದೆ. ಮೇಲಾಗಿ, ಆರೋಪಿ ನಮಗೆ ಸಹಕಾರ ನೀಡದಿರುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿ ಹಂತದಲ್ಲೂ ಅಪ್ರಸ್ತುತ ಮಾಹಿತಿ ನೀಡುವುದನ್ನೆ ತಮ್ಮ ತಂತ್ರಗಾರಿಕೆಯನ್ನಾಗಿ ಆರೋಪಿ ಅನುಸರಿಸಿದಂತಿದೆ ಎಂದು ಇಡಿ ತನಿಖಾಧಿಕಾರಿಗಳು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಬೆಂಬಲಿಗರ ಮೇಲೆ ಸಿಟ್ಟಾದ ಡಿಕೆಸು

ತಮ್ಮ ನಾಯಕನನ್ನು ನೋಡಲೆಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಭಿಮಾನಿಗಳು ಡಿ.ಕೆ.ಸುರೇಶ್ ಬೆನ್ನ ಹಿಂದೆಯೇ ಹೆಜ್ಜೆ ಹಾಕುತ್ತಿದ್ದರು. ಕೋರ್ಟ್ ಆವರಣದಲ್ಲಿ ಬೆಂಬಲಿಗರು ಸೇರಿ ಅಸಹನೀಯ ವಾತಾವರಣ ನಿರ್ಮಾಣ ಮಾಡಿದ್ದಕ್ಕೆ ಪೊಲೀಸರು ಆಕ್ರೋಶಗೊಂಡರೂ ಅವರನ್ನು ತಡೆಯಲು ಹೋಗಲಿಲ್ಲ. ಕೋರ್ಟ್ ಆದೇಶದ ಬಳಿಕ ಆವರಣದಿಂದ ಹೊರಬಂದ ಡಿ.ಕೆ.ಸುರೇಶ್ ಕೆಲ ಬೆಂಬಲಿಗರ ಮೇಲೆ ಸಿಟ್ಟಾಗಿ ‘ನೀವು ನಮ್ಮ ಬೆಂಬಲಕ್ಕೆ ಬಂದಿದ್ದೀರೋ ಅಥವಾ ಮತ್ತಷ್ಟು ಸಮಸ್ಯೆ ಸೃಷ್ಟಿಸಲು ಬಂದಿದ್ದೀರೋ’ ಎಂದು ಕಿಡಿಕಾರಿದರು.

ವಾದ-ಪ್ರತಿವಾದ

ನ್ಯಾಯಾಧೀಶ: ಮುಂದಿನ 5 ದಿನಗಳಲ್ಲಿ ಆರೋಪಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದು ನಿಮಗೆ ಅನಿಸುತ್ತದೆಯೇ?

ಕೆ.ಎಂ. ನಟರಾಜ್: ಇನ್ನೂ ಹಲವು ದಾಖಲೆಗಳನ್ನು ಡಿಕೆಶಿ ಮುಂದಿಟ್ಟು ನಾವು ಪ್ರಶ್ನಿಸಬೇಕಿದೆ

ನ್ಯಾಯಾಧೀಶ: ಊಹಿತ ಅಪರಾಧದ ಬಗ್ಗೆ ತನಿಖಾ ಸಂಸ್ಥೆ ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬಹುದೇ?

ಕೆ.ಎಂ. ನಟರಾಜ್ : ಸತ್ಯಾಂಶ ಕಂಡುಕೊಳ್ಳುವ ಉದ್ದೇಶದಿಂದ ವ್ಯಾಪ್ತಿ ಮೀರಿ ತನಿಖೆ ಮಾಡಬಹುದು

ನ್ಯಾಯಾಧೀಶ: ಮುಂದಿನ 5 ದಿನಗಳಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಆತ ಉತ್ತರ ನೀಡಲಾರ ಎಂದು ನನಗೆ ಖಚಿತವಾಗಿ ಅನಿಸುತ್ತಿದೆ. ಹೀಗಾಗಿ ಕಸ್ಟಡಿಗೆ ಏಕೆ ತೆಗೆದುಕೊಳ್ಳುತ್ತೀರಿ?

ಕೆ.ಎಂ. ನಟರಾಜ್: ಬೇರೆ ಆರೋಪಿಗಳು ಮಾಡಿರುವ ಹೇಳಿಕೆಯನ್ನು ಪರಿಶೀಲಿಸಿ ಅದನ್ನು ಆರೋಪಿ ಜತೆಗೂ ಕೇಳಬೇಕಿದೆ. ಕೆಲವು ಬ್ಯಾಂಕ್ ದಾಖಲೆಗಳೂ ಇವೆ. ಅದನ್ನು ಆರೋಪಿ ಮುಂದಿಟ್ಟು ಪ್ರಶ್ನಿಸಬೇಕಿದೆ.

ಅಭಿಷೇಕ್ ಮನುಸಿಂಘಿ ಪ್ರತಿವಾದ

 • ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಕಸ್ಟಡಿ ಬದಲು ಆಸ್ಪತ್ರೆಯಲ್ಲಿ ಇರಿಸಬೇಕು
 • ನಿನ್ನೆ ಕೂಡ ಆರ್​ಎಂಎಲ್ ಆಸ್ಪತ್ರೆಯಲ್ಲಿದ್ದರು. ಅವರ ಬಿಪಿ ಪ್ರಮಾಣ ನಿನ್ನೆ 200/140 ಇತ್ತು
 • ಇದನ್ನು ಏಕೆ ಇಡಿ ಅಧಿಕಾರಿಗಳು ಕೋರ್ಟ್ ಮುಂದೆ ಹೇಳಲಿಲ್ಲ?
 • ಒಟ್ಟು 130 ಗಂಟೆಗಳ ಕಾಲ ಆರೋಪಿಯ ವಿಚಾರಣೆ ಮಾಡಲಾಗಿದೆ. ವ್ಯಕ್ತಿಯ ಆರೋಗ್ಯ ಕೆಟ್ಟು ಸತ್ತರೆ ಏನೂ ಮಾಡಲಾಗದು. ಆರೋಗ್ಯ ಮುಖ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು
 • ಇಷ್ಟೊಂದು ದೀರ್ಘ ವಿಚಾರಣೆ ನಡೆದಾಗ ಸುಸ್ತಾಗಿ, ನಿದ್ದೆ ಬರುವುದು ಸಹಜ
 • ಕಸ್ಟಡಿಗೆ ತೆಗೆದುಕೊಳ್ಳುವ ಅರ್ಜಿ ನಿನ್ನೆ ನೀಡದೆ ಇಂದು ನಮ್ಮ ಮುಂದಿಡುತ್ತಿರುವುದು ಸರಿಯಲ್ಲ
 • ಪ್ರಕರಣದ ಇತರ ಆರೋಪಿಗಳಿಗೆ ಕಸ್ಟಡಿಗೆ ತೆಗೆದುಕೊಳ್ಳುವುದರಿಂದ ರಕ್ಷಣೆ ನೀಡಲಾಗಿದೆ. ಆದರೆ ಡಿಕೆಶಿಗೆ ಏಕೆ ರಿಮಾಂಡ್ ಎನ್ನುವುದು ನಮ್ಮ ಪ್ರಶ್ನೆ
 • ನಾನು ತನಿಖೆ ಎದುರಿಸುವುದರಿಂದ ಓಡಿ ಹೋಗುತ್ತಿಲ್ಲ. ಮುಚ್ಚಿಡಲು ನನ್ನಲ್ಲಿ ಏನೂ ಇಲ್ಲ. ಯಾವಾಗ ಬೇಕಾದರೂ ತನಿಖೆಗೆ ಹಾಜರಾಗಲು ಸಿದ್ಧನಿದ್ದೇನೆ

ಡಿಕೆಶಿ ಕಾಲಿಗೆ ಬಿದ್ದ ವಕೀಲರು!

ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಪೂರ್ಣಗೊಂಡ ಬಳಿಕ ಕರ್ನಾಟಕದಿಂದ ಬಂದಿದ್ದ ಶಿವಕುಮಾರ್ ಬೆಂಬಲಿಗ ವಕೀಲ ಪಡೆ, ಡಿಕೆಶಿ ಎದುರು ನಿಂತು ‘ನಾವೂ ಬಂದಿದ್ದೇವೆ’ ಎಂದು ತೋರಿಸಿಕೊಳ್ಳುವ ಯತ್ನ ಮಾಡಿದರು. ಶಿವಕುಮಾರ್ ಕೂಡ ಅವರನ್ನು ನೋಡಿದರು. ಈ ಸಂದರ್ಭದಲ್ಲಿ ಇಬ್ಬರು ವಕೀಲರು ‘ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಅಣ್ಣಾ..’ ಎಂದು ಕಟಕಟೆಯಲ್ಲಿ ನಿಂತಿದ್ದ ಡಿಕೆಶಿ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು. ಕಳೆದ ವಿಚಾರಣೆ ವೇಳೆ ಸಿವಿಲ್ ಡ್ರೆಸ್​ನಲ್ಲಿ ಬಂದಿದ್ದ ಕೆಲ ಬೆಂಬಲಿಗರು ಇಂದು ಕರಿಕೋಟು ಧರಿಸಿಕೊಂಡು ನ್ಯಾಯಾಧೀಶರ ಎದುರು ಭಾಗದಲ್ಲಿ ನಿಂತುಕೊಂಡು, ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘಿ ವಾದ ಮಂಡಿಸುವಾಗ ‘ಹೌದೌದು..’ ಎಂದು ತಲೆಯಾಡಿಸುತ್ತಿದ್ದರು. ವಿಚಾರಣೆ ವೀಕ್ಷಣೆಗೆಂದು ಬಂದಿದ್ದ ಡಿಕೆಶಿ ಬೆಂಬಲಿಗ ಸಮೂಹದಿಂದಾಗಿ ಕೋರ್ಟ್ ಹಾಲ್ ಕಿಕ್ಕಿರಿದು ತುಂಬಿತ್ತು. ಕೆಲ ಕಾರ್ಯಕರ್ತರನ್ನು ಪೊಲೀಸರು ಹೊರದಬ್ಬಿದರು. ಹಿಂಬದಿಯಲ್ಲಿದ್ದ ಕೆಲ ಬೆಂಬಲಿಗರು ಕುಳಿತಿದ್ದ ಕುರ್ಚಿ ಮೇಲೆ ನಿಂತದ್ದನ್ನು ಕಂಡು ಬೆರಗಾದ ನ್ಯಾಯಾಧೀಶ ಅಜಯ್ಕುಮಾರ್ ಕುಹರ್, ‘ನೀವು ಎಲ್ಲಿದ್ದೀರಿ ಎಂಬುದರ ಪರಿಜ್ಞಾನವಿದೆಯೇ’ ಎಂದು ಕಿಡಿಕಾರಿದರು. ಕಾಂಗ್ರೆಸ್​ನ ರಾಜ್ಯಸಭೆ ಸದಸ್ಯ ಹನುಮಂತಯ್ಯ, ಮಹಿಳಾ ನಾಯಕಿ ಮೋಟಮ್ಮ, ಮಾಗಡಿ ಬಾಲಕೃಷ್ಣ, ಸಿ.ಎಂ.ಲಿಂಗಪ್ಪ ಸೇರಿ ಪಕ್ಷದ ಪ್ರಮುಖ ಮುಖಂಡರು ವಿಚಾರಣೆ ವೀಕ್ಷಣೆ ಜತೆಗೆ ಡಿಕೆಶಿಗೆ ಶುಭ ಹಾರೈಸಲು ಬಂದಿದ್ದರು. ಡಿಕೆಶಿ ಕೋರ್ಟ್ ಹಾಲ್​ನಿಂದ ಹೊರಬರುತ್ತಿದ್ದಂತೆಯೇ ‘ಡಿಕೆಶಿಗೆ ಜೈ’ ಎಂದು ಕಾರ್ಯಕರ್ತರು ಬೊಬ್ಬಿಟ್ಟರು. ಆದರೆ ಪಕ್ಕದಲ್ಲಿ ಪೊಲೀಸರನ್ನು ಕಂಡ ಕೂಡಲೇ ಎಲ್ಲರೂ ಸುಮ್ಮನಾದರು!

10 ದಿನದಲ್ಲಿ ವಿಚಾರಣೆ ಎದುರಿಸಿದ ಇತರರು

 • ಸಚಿನ್ ನಾರಾಯಣ್
 • ಆಂಜನೇಯ ಹನುಮಂತಯ್ಯ
 • ಸುನೀಲ್​ಕುಮಾರ್ ಶರ್ಮ
 • ತನುಜ್
 • ಅನಿಲ್ ಜೈನ್
 • ಅಜಯ್ ಖನ್ನಾ
 • ಎನ್.ಎನ್.ಸೋಮೇಶ್
 • ಐಶ್ವರ್ಯಾ ಶಿವಕುಮಾರ್

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...