Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಐಫೋನ್​ ಕೊಟ್ಟಿದ್ದು ನಾನೆ, ಇದೇ ಅಪರಾಧವಾದರೆ ನನ್ನನ್ನು ಗಲ್ಲಿಗೇರಿಸುತ್ತೀರಾ: ಡಿಕೆಶಿ

Tuesday, 17.07.2018, 5:30 PM       No Comments

ಬೆಂಗಳೂರು: ಹಿಂದೆ ಕೆಲ ಸಂದರ್ಭದಲ್ಲಿ ದಾಖಲೆಗಳನ್ನು ಹಾಗೂ ಮಾಹಿತಿ ಹಂಚಿಕೊಳ್ಳೋಕೆ ಐಪಾಡ್​ಗಳನ್ನು ಕೊಡಲಾಗಿತ್ತು. ಕೆಲವರು ಐಪಾಡ್​ ಬೇಡ ಫೋನ್​ ಬೇಕು ಎಂದು ಕೇಳಿಕೊಂಡಿದ್ದರು. ಹಾಗಾಗಿ ಗುಡ್​ ಗೆಸ್ಚರ್​ಗೆ ಐಫೋನ್​ ಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ? ಎಂದು ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ನಾಳೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ನೇತೃತ್ಬದಲ್ಲಿ ದೆಹಲಿಯಲ್ಲಿ ನಡೆಯಲಿರುವ ಲೋಕಸಭೆ, ರಾಜ್ಯಸಭೆ ಸದಸ್ಯರ ಸಭೆಗೆ ಪೂರಕವಾಗಿ ಸಂಸದರಿಗೆ ಐಫೋನ್​ ಕೊಡಲಾಗಿದೆ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿ ಹೀಗೆ ಮಾತನಾಡಿದರು.

ಅದೇ ದೊಡ್ಡ ಅಪರಾಧ ಎಂದು ನನ್ನನ್ನು ಹ್ಯಾಂಗ್​ ಮಾಡೋ ಹಾಗಿದ್ರೆ, ಹ್ಯಾಂಗ್​ ಮಾಡಿಕೊಳ್ಳಿ. ನಾನು ಯಾರಿಗೂ ಲಂಚ ಕೊಟ್ಟಿಲ್ಲ. ನಮ್ಮ ಮುಂದೆ ಬೇರೆ ದೊಡ್ಡ ದೊಡ್ಡ ವಿಚಾರಗಳಿವೆ. ಮಾಹಿತಿ ವಿನಿಮಯಕ್ಕೆ ಇದು ಒಳ್ಳೆಯ ಅವಕಾಶ ಅಷ್ಟೆ. ಸಂಸದರಿಗೆ ಗೌರವ ನೀಡಿ ಈ ರೀತಿ ಕೊಟ್ಟಿದ್ದೇವೆ ಅಷ್ಟೆ ಎಂದು ಹೇಳಿದ್ದಾರೆ.

ನಾನು ಕೂಡ ದೆಹಲಿಗೆ ಮೀಟಿಂಗ್​ಗೆ ಹೋಗಿದ್ದಾಗ ಹಲವು ಬಾರಿ ವಾಚ್​, ಫೋನ್​, ಬ್ಯಾಗ್​ ಎಲ್ಲಾ ಕೊಟ್ಟಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top