ಕಡೂರು: ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಹಿಂದಿನಿಂದಲೂ ದೀಪಾವಳಿ ಆಚರಿಸುವುದು ವಾಡಿಕೆಯಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀ ನಿವಾಸ್ ಹೇಳಿದರು.
ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಬೆಳಕಿನ ಹಬ್ಬ ದೀಪಾವಳಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿರುವ ಈಶ್ವರಿ ವಿದ್ಯಾಲಯವು ಸಾಂಸ್ಕೃತಿಕವಾಗಿ, ಯೋಗ, ಧ್ಯಾನಗಳ ಮೂಲಕ ಸಾವಿರಾರು ಜನರಿಗೆ ಆರೋಗ್ಯದ ಬೆಳಕನ್ನು ನೀಡುತ್ತಿದೆ. ಆಧ್ಯಾತ್ಮಿಕವಾಗಿಮಾನಸಿಕ ಮತ್ತು ದೈಹಿಕ ಸ್ವಾಸ್ಥೃ ಕಾಪಾಡಿಕೊಳ್ಳುವ ಕಲೆ ಕಲಿಸುತ್ತಿದೆ. ಜ್ಞಾನ, ಯೋಗ ಕಲಿಯುವುದರಿಂದ ಸದೃಢ ಆರೋಗ್ಯ ಪಡೆಯಲು ಸಹಕಾರಿಯಾಗುತ್ತದೆ. ಧ್ಯಾನದಿಂದ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಬಹುದು ಎಂದರು.
ಸಂಸ್ಥೆ ಪ್ರಧಾನ ಕೇಂದ್ರ ರಾಜಸ್ಥಾನದ ಮೌಂಟ್‌ಅಬು ಪರ್ವತದಲ್ಲಿ ನಿತ್ಯ ನಡೆಯುವ ಯೋಗ, ಧ್ಯಾನ, ಪ್ರಕೃತಿಯ ಸೌಂದರ್ಯ ಸವಿಯಲು ಇಲ್ಲಿನ ಅಕ್ಕ ಅವರು ನೂರಾರು ಜನರನ್ನು ಕಡಿಮೆ ವೆಚ್ಚದಲ್ಲಿ ಕರೆದುಕೊಂಡು ಹೋಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾನೀಯ. ಸಂಸ್ಥೆಯವರು ನಿವೇಶನಕ್ಕೆ ಬೇಡಿಕೆ ನೀಡಿದ್ದು ಪುರಸಭೆ ಇತಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಈಶ್ವರಿ ವಿದ್ಯಾಲಯದ ಜ್ಞಾನೇಶ್ವರಿ ಅಕ್ಕ ಜ್ಞಾನ, ಯೋಗ ಕಲಿಯುವುದರಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಮಂಗಳಗೌರಿ ಅಕ್ಕ, ಚೌಳಹಿರಿಯೂರಿನ ಮಹೇಶ್ವರಪ್ಪ, ವನಿತಾ ಮಂಜುನಾಥ್, ರೂಪಾ ಮತ್ತಿತರಿದ್ದರು.
ಬೆಳಕಿನ ಹಬ್ಬ ದೀಪಾವಳಿ ವಿಜಯದ ಸಂಕೇತ
Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?
Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…
Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?
Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…
ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…