ತಮಿಳು ನಟ, ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಗಾಯಕಿ ಸೈಂಧವಿ 11 ವರ್ಷಗಳ ದಾಂಪತ್ಯ ಜೀವನಕ್ಕೆ 2024ರಲ್ಲಿ ಇತಿಶ್ರೀ ಹಾಡಿದ್ದರು. 2021ರ “ಬ್ಯಾಚುಲರ್’ ಚಿತ್ರದಲ್ಲಿ ಪ್ರಕಾಶ್ಗೆ ನಾಯಕಿಯಾಗಿದ್ದ ನಟಿ ದಿವ್ಯಭಾರತಿಯೇ ಅದಕ್ಕೆ ಕಾರಣ ಎನ್ನಲಾಗಿತ್ತು.
ಹಾಗೇ ಇದೇ ಮಾ. 7ರಂದು ರಿಲೀಸ್ ಆಗಲಿರುವ “ಕಿಂಗ್ಸ್ಟನ್’ ಚಿತ್ರದಲ್ಲೂ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ. ಹೀಗಾಗಿ ಪ್ರಕಾಶ್ ಮತ್ತು ಸೈಂಧವಿ ವಿಚ್ಛೇದನ ಪ್ರಕರಣ ಜಾಲತಾಣದಲ್ಲಿ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಈ ಬಗ್ಗೆ ಮೌನ ಮುರಿದಿರುವ ದಿವ್ಯಭಾರತಿ, “ವಿಚ್ಛೇದನದ ಸಮಯದಲ್ಲಿ ನಾನು, ಪ್ರಕಾಶ್ ಒಟ್ಟಿಗೆ ನಟಿಸುತ್ತಿದ್ದ ಕಾರಣ ನನ್ನನ್ನು ತುಂಬ ಕೆಟ್ಟದಾಗಿ ಟ್ರೋಲ್ ಮಾಡಿದರು. ಆ ಬಳಿಕವೂ ಪ್ರಕಾಶ್, ಸೈಂಧವಿ ಒಟ್ಟಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದನ್ನು ನೋಡಿ ನನಗಂತೂ ಖುಷಿಯಾಯಿತು. ಆದರೆ, ಆಗಲೂ, ನಾನೇ ಟ್ರೋಲ್ ಆದೆ. ಅವರ ಡಿವೋರ್ಸ್ಗೆ ನಾನೇ ಕಾರಣ ಅಂತ ಕೆಟ್ಟದಾಗಿ ಮೆಸೇಜ್ಗಳು ಬರುತ್ತಿದ್ದವು. ಅಂತಹ ಕೆಲ ಮೆಸೇಜ್ಗಳನ್ನು ಪ್ರಕಾಶ್ಗೂ ತೋರಿಸಿದ್ದೆ. ಆದರೆ, ಅವರು ಅವುಗಳನ್ನು ಕಡೆಗಣಿಸಿ, ಕೆಲಸದ ಬಗ್ಗೆ ಗಮನ ಹರಿಸುವಂತೆ ಹೇಳಿದರು’ ಎಂದು ಸ್ಪಷ್ಟನೆ ನೀಡಿದ್ದಾರೆ. “ಕಿಂಗ್ಸ್ಟನ್’ ಜತೆ ದಿವ್ಯಭಾರತಿ ಎರಡು ಚಿತ್ರಗಳು ಹಾಗೂ ಒಂದು ವೆಬ್ಸರಣಿಯಲ್ಲಿ ಬಿಜಿಯಾಗಿದ್ದಾರೆ.