Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ದಾಂಪತ್ಯವನ್ನು ಮುರಿಯುತ್ತಿದೆ ಅಕ್ರಮ ಸಂಬಂಧ

Friday, 09.02.2018, 3:01 AM       No Comments

| ಅವಿನಾಶ ಮೂಡಂಬಿಕಾನ

ಬೆಂಗಳೂರು: ವರದಕ್ಷಿಣೆ, ಸಾಮರಸ್ಯ ಕೊರತೆ, ಪ್ರತಿಷ್ಠೆಗಳು ದಾಂಪತ್ಯ ಬಿರುಕಿಗೆ ಕಾರಣವಾಗುತ್ತಿರುವ ಸಂಗತಿ ಗುಟ್ಟೇನಲ್ಲ. ಆದರೆ ಪತಿ ಅಥವಾ ಪತ್ನಿಯ ವಿವಾಹಪೂರ್ವ ಹಾಗೂ ವಿವಾಹ ನಂತರದ ಅಕ್ರಮ ಸಂಬಂಧಗಳಿಂದಾಗಿ ರಾಜಧಾನಿ ಬೆಂಗಳೂರೊಂದರಲ್ಲೇ ಕಳೆದ ವರ್ಷ ಇಂಥ 236 ಪ್ರಕರಣಗಳು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿ ಕೇಂದ್ರದ ಮೆಟ್ಟಿಲೇರಿವೆ.

ಕಿರುಕುಳ, ಹಲ್ಲೆ, ಲೈಂಗಿಕ ದೌರ್ಜನ್ಯ, ಅಡುಗೆ ವಿಚಾರಕ್ಕೆ ನಡೆಯುವ ಜಗಳ, ತನ್ನ ಮಾತು ಕೇಳುವುದಿಲ್ಲ ಎಂಬ ಪತಿ, ಪತ್ನಿಯರ ದೂರು ಬರುತ್ತಿದ್ದ ಕೇಂದ್ರದಲ್ಲಿ ಪತಿ ಮತ್ತು ಪತ್ನಿ ನಡುವೆ ಮೂರನೇ ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧದ ವಿಚಾರ ಬಹಿರಂಗಗೊಂಡು ವಿಚ್ಛೇದನ ಕೋರಿ ದೂರುಗಳ ಮಳೆಯೇ ಸುರಿಯುತ್ತಿದೆ.

ಯಾವ ವರ್ಷ, ಎಷ್ಟು ಕೇಸ್?: ವಿವಾಹದ ನಂತರದ ಅಕ್ರಮ ಸಂಬಂಧದ ವಿಚಾರ ಮುಂದಿಟ್ಟುಕೊಂಡು 2014-15ರಲ್ಲಿ 196 ಪ್ರಕರಣಗಳು ವನಿತಾ ಸಹಾಯವಾಣಿಯಲ್ಲಿ ದಾಖಲಾಗಿದ್ದವು. ಈ ಸಂಖ್ಯೆ 2015-16ರಲ್ಲಿ 164ಕ್ಕೆ ಇಳಿದಿತ್ತಾದರೂ 2016-17ರಲ್ಲಿ ಮತ್ತೆ 180ಕ್ಕೆ ಏರಿಕೆಯಾಗಿದೆ. ವಿಚ್ಛೇದನ ಪಡೆಯಲು ಬಯಸುವ ಹೆಚ್ಚಿನ ದಂಪತಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

 ಪತ್ನಿಗೆ ಹೆಚ್ಚಿನ ವೇತನ, ಪತಿಗೆ ಖಿನ್ನತೆ: ಪತ್ನಿ ವಿಜ್ಞಾನಿಯಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾಳೆ. ಪತಿ ಖಾಸಗಿ ಕಂಪನಿ ಉದ್ಯೋಗಿ. ಪತ್ನಿ ತನಗಿಂತ ದುಪ್ಪಟ್ಟು ವೇತನ ಪಡೆಯುತ್ತಿದ್ದಾಳೆ ಎಂದು ಪತಿ ಖಿನ್ನತೆಗೊಳಗಾಗಿದ್ದ. ದಂಪತಿಗೆ 10 ವರ್ಷದ ಮಗಳಿದ್ದಾಳೆ. ಪತ್ನಿಯ ವೇತನದಿಂದಲೇ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಿದ್ದರು. ಪತಿಗೆ ಕಡಿಮೆ ವೇತನ ಬರುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿಯೇ ಸಂಸಾರ ನಿಭಾಯಿಸುತ್ತಿದ್ದಾಳೆ. ಆರು ತಿಂಗಳಿನಿಂದ ಮನೆಗೆ ಅಡುಗೆ ಮಾಡಲು ವಿವಾಹಿತ ಮಹಿಳೆಯನ್ನು ನೇಮಿಸಿಕೊಳ್ಳಲಾಗಿತ್ತು. ಆಕೆಯೊಂದಿಗೆ ಪತಿಗೆ ಸಲುಗೆ ಬೆಳೆದಿತ್ತು. ಮನೆಯ ಸಿಸಿ ಕ್ಯಾಮರಾದಲ್ಲಿ ಇಬ್ಬರೂ ಸಲುಗೆಯಿಂದ ವರ್ತಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಪತ್ನಿ ಗಮನಕ್ಕೂ ಬಂದಿತ್ತು. ಇದರಿಂದ ಮನನೊಂದ ಪತ್ನಿ ವನಿತಾ ಸಹಾಯವಾಣಿಗೆ ಭೇಟಿ ನೀಡಿದ್ದಳು.ಆಪ್ತ ಸಮಾಲೋಚಕರು ಆಕೆಯ ಪತಿ ಮತ್ತು ಕೆಲಸದಾಕೆಗೆ ಬುದ್ಧಿವಾದ ಹೇಳಿ ದಂಪತಿ ಮತ್ತೆ ಒಂದಾಗುವಂತೆ ಮಾಡಿದ್ದಾರೆ. 10 ವರ್ಷದ ಮಗಳಿಗಾಗಿ ಪತಿಯೊಂದಿಗೆ ಜೀವಿಸಲು ಪತ್ನಿ ಒಪ್ಪಿಕೊಂಡಿದ್ದಾಳೆ.

ವಾಟ್ಸ್​ಆಪ್​ನಲ್ಲಿ ಸತ್ಯ ಬಯಲು

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಶಿಕ್ಷಕಿಯಾದ್ದ 28 ವರ್ಷದ ಮಹಿಳೆಯ ಪತಿ ಸಾಫ್ಟ್​ವೇರ್ ಇಂಜಿನಿಯರ್. ದಂಪತಿಗೆ 1 ಮಗುವಿದೆ. ಪತಿ ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ. ಮನನೊಂದ ಪತ್ನಿ 2016ರಲ್ಲಿ ಫೇಸ್​ಬುಕ್​ನಲ್ಲಿ ಮಧ್ಯಪ್ರದೇಶದ ವಿವಾಹಿತನನ್ನು ಪರಿಚಯ ಮಾಡಿಕೊಂಡು ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈಕೆ ಪತಿಗೆ ಸುಳ್ಳುನೆಪ ಹೇಳಿ ಆಗಾಗ ಗೋವಾಗೆ ತೆರಳುತ್ತಿದ್ದಳು. ಆತ ಮಧ್ಯಪ್ರದೇಶದಿಂದ ವಿಮಾನದ ಮೂಲಕ ಗೋವಾಕ್ಕೆ ಬಂದು ಆಕೆಯನ್ನು ಸಂರ್ಪಸುತ್ತಿದ್ದ. 2017 ಡಿಸೆಂಬರ್​ನಲ್ಲಿ ಪತಿ ಸುಮ್ಮನೆ ಪತ್ನಿಯ ವಾಟ್ಸಪ್ ನೋಡಿದಾಗ ಸತ್ಯ ಬಯಲಿಗೆ ಬಂದಿತ್ತು. ನಂತರ ದಂಪತಿ ವನಿತಾ ಸಹಾಯವಾಣಿಗೆ ಭೇಟಿ ನೀಡಿದಾಗ ಪತ್ನಿ ಮತ್ತು ಆಕೆಯ ಪ್ರಿಯಕರ ತಪ್ಪೊಪ್ಪಿಕೊಂಡು ಮುಂದೆ ಈ ರೀತಿ ಮಾಡುವುದಿಲ್ಲವೆಂದು ಭರವಸೆ ನೀಡಿದರು.

ಡ್ರೖೆವರ್ ಜತೆ ಅಕ್ರಮ ಸಂಬಂಧ

28 ವರ್ಷದ ಮಹಿಳೆಯ ಪತಿ ಸಾಫ್ಟ್​ವೇರ್ ಇಂಜಿನಿಯರ್. ಈಕೆಯೂ ವಿದ್ಯಾವಂತೆ. ದಂಪತಿಗೆ 12 ವರ್ಷದ ಮಗನಿದ್ದಾನೆ. ಮಗನನ್ನು ಶಾಲೆಗೆ ಕಳುಹಿಸುವ ಸಂದರ್ಭ ಬಸ್ ಡ್ರೖೆವರ್​ನ ಪರಿಚಯವಾಗಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ವಿವಾಹಿತ ಡ್ರೖೆವರ್ ಮತ್ತು ಮಹಿಳೆ ಮನೆಯಲ್ಲಿದ್ದ ಸಂದರ್ಭ ಪಕ್ಕದ ಮನೆಯವರ ಸಂದೇಶದ ಮೇರೆಗೆ ಪತಿ ಮನೆಗೆ ಬಂದಾಗ, ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ಕಂಡು ದಂಗಾಗಿದ್ದ. ಡ್ರೖೆವರ್ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಪತ್ನಿಗೆ ಒತ್ತಡ ಹೇರಿದ್ದ. ಇಲ್ಲದಿದ್ದರೆ ತನ್ನೊಂದಿಗೆ ಜೀವಿಸಬೇಡ ಎಂದು ಬೆದರಿಸಿದ್ದ. ಪತ್ನಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಡ್ರೖೆವರ್​ನನ್ನು ಬಂಧಿಸಿದ್ದರು. ತನ್ನ ತಪ್ಪಿನಿಂದ ಡ್ರೖೆವರ್ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಕೀಳರಿಮೆಗೊಳಗಾಗಿ ದೂರನ್ನು ಹಿಂಪಡೆದಿದ್ದಳು. ಡ್ರೖೆವರ್ ಜೈಲಿನಿಂದ ಬಿಡುಗಡೆ ಹೊಂದಿದ. ಪತಿ ಪತ್ನಿಯಿಂದ ದೂರವಾದ.

ವೃದ್ಧನೊಂದಿಗೆ ಸ್ನೇಹ

2016ರಲ್ಲಿ 19 ವರ್ಷದ ಯುವತಿ ಬಿಪಿಒನಲ್ಲಿ ಕೆಲಸ ಮಾಡುತ್ತಿದ್ದು, 55 ವರ್ಷದ ವಿವಾಹಿತ ಸಾಮಾಜಿಕ ಕಾರ್ಯಕರ್ತನೋರ್ವ ಈಕೆಯನ್ನು ಪರಿಚಯಿಸಿಕೊಂಡು, ಅಕ್ರಮ ಸಂಬಂಧ ಹೊಂದಿ, ಗಂಡು ಮಗು ಜನಿಸಿತ್ತು. ವನಿತಾ ಸಹಾಯವಾಣಿಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಮಗುವನ್ನು ತಾನೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ. ಆಕೆ 2017 ಫೆಬ್ರವರಿಯಲ್ಲಿ ಫೇಸ್​ಬುಕ್​ನಲ್ಲಿ ವಿವಾಹಿತನನ್ನು ಪರಿಚಯ ಮಾಡಿಕೊಂಡು ತಾನು ವಿಧವೆ ಎಂದು ಹೇಳಿದ್ದಳು. ಆತನೂ ತನ್ನ ಪತ್ನಿ ನಿಧನ ಹೊಂದಿದ್ದಾಗಿ ತಿಳಿಸಿದ್ದ. ಇಬ್ಬರೂ ಲಿವ್​ಇನ್ ರಿಲೇಶನ್​ಶಿಪ್​ನಲ್ಲಿದ್ದರು. ಹೆಣ್ಣು ಮಗು ಜನಿಸಿತ್ತು. ಆ ಸಂದರ್ಭದಲ್ಲಿ ಯುವತಿಗೆ ಈತನಿಗೆ ಪತ್ನಿಯಿರುವ ವಿಚಾರ ತಿಳಿದು, ಈತನ ವಿರುದ್ಧ ದೂರು ನೀಡಿದ್ದಳು.

ಲಿವ್​ಇನ್ ರಿಲೇಶನ್​ಶಿಪ್

ಪ್ರತಿಷ್ಠಿತ ಜೈನ ಮನೆತನದ 20 ವರ್ಷದ ಬಿಬಿಎಂ ಪದವೀಧರೆ ಇತ್ತೀಚೆಗೆ ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದ 20 ವರ್ಷದ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿದ್ದಳು. ಆದರೆ, ಯುವಕನಿಗೆ ಇನ್ನೂ 21 ವರ್ಷವಾಗದ ಹಿನ್ನೆಲೆಯಲ್ಲಿ ವಿವಾಹ ಸಾಧ್ಯವಾಗದೆ ಆತನೊಂದಿಗೆ ಲಿವ್​ಇನ್ ರಿಲೇಶನ್​ಶಿಪ್ ಜೀವನ ನಡೆಸುತ್ತಿದ್ದಾಳೆ. ಯುವತಿ ಮನೆಯವರು ಸಹಾಯವಾಣಿಗೆ ಬಂದು ದೂರು ನೀಡಿದ ಮೇರೆಗೆ, ಆಪ್ತ ಸಮಾಲೋಚಕರು ಇಬ್ಬರಿಗೂ ಕೌನ್ಸೆಲಿಂಗ್ ಮಾಡಿ, ಮನೆಯವರೊಂದಿಗೆ ಯುವತಿಯನ್ನು ಕಳುಹಿಸಿದರೂ, ಆಕೆ ಪುನಃ ಆತನೊಂದಿಗೆ ಜೀವಿಸುತ್ತಿದ್ದಾಳೆ.

ಇತ್ತೀಚೆಗೆ ವಿವಾಹಿತ ಮಹಿಳೆಯರು ಅಕ್ರಮ ಸಂಬಂಧ ಹೊಂದುತ್ತಿರುವ ಪ್ರಕರಣದಲ್ಲಿ ಏರಿಕೆ ಕಂಡು ಬಂದಿದೆ. ಅಕ್ರಮ ಸಂಬಂಧದಿಂದಲೇ ಹೆಚ್ಚು ವಿಚ್ಛೇದನ ಪ್ರಕರಣ ವರದಿಯಾಗುತ್ತಿದೆ.

| ಸರಸ್ವತಿ ಬಿ.ಎಸ್, ಹಿರಿಯ ಆಪ್ತ ಸಮಾಲೋಚಕಿ

 

ದಂಪತಿ ಅಕ್ರಮ ಸಂಬಂಧ ಹೊಂದಿದರೆ ಮಕ್ಕಳು ಕೀಳರಿಮೆಗೆ ಒಳಗಾಗುತ್ತಾರೆ. ಕ್ಷಣಿಕ ಸುಖದ ಆಸೆಗೆ ಬಿದ್ದು, ಸುಂದರ ಸಂಸಾರ ಹಾಳು ಮಾಡಿಕೊಳ್ಳುವುದು ಸರಿಯಲ್ಲ.

| ಅರ್ಪಣಾ ಪೂರ್ಣೆಶ್, ಹಿರಿಯ ಆಪ್ತ ಸಮಾಲೋಚಕಿ

 

ವಿಚ್ಛೇದನಕ್ಕೆ ಅಕ್ರಮ ಸಂಬಂಧಗಳೂ ಮುಖ್ಯ ಕಾರಣವಾಗುತ್ತಿದೆ. ವನಿತಾ ಸಹಾಯವಾಣಿಗೆ ಭೇಟಿ ನೀಡಿದ ಮಹಿಳೆಯರಿಗೆ ಕೌನ್ಸೆಲಿಂಗ್ ನಡೆಸಿ ಅವರ ಜೀವನವನ್ನು ಉತ್ತಮಪಡಿಸುವುದು ನಮ್ಮ ಉದ್ದೇಶ.

| ರಾಣಿ ಶೆಟ್ಟಿ, ವನಿತಾ ಸಹಾಯವಾಣಿ ಮುಖ್ಯಸ್ಥೆ

 

Leave a Reply

Your email address will not be published. Required fields are marked *

Back To Top