More

    ಡಿವೈಡರ್ ಸಿಂಗಾರ ಕಾಮಗಾರಿ ಅವೈಜ್ಞಾನಿಕ

    ಹುಣಸೂರು: ಪಟ್ಟಣದ ಗ್ರಾಮಾಂತರ ಬಸ್ ನಿಲ್ದಾಣ ಮುಂಭಾಗದ ಮುಖ್ಯರಸ್ತೆಯ ಡಿವೈಡರ್ ಸಿಂಗಾರ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನಗರಸಭೆ ಯೋಜನೆ ವಿಫಲವಾಗಿದೆ. ಹೀಗೆ ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಬಸ್‌ನಿಲ್ದಾಣದಿಂದ ಹಳೇ ಬಸ್ ನಿಲ್ದಾಣದ ರೋಟರಿ ವೃತ್ತದವರೆಗಿನ ರಸ್ತೆ ವಿಭಜಕದ (ಸುಮಾರು ಅರ್ಧ ಕಿ.ಮೀ.) ಎರಡೂ ಬದಿಗೆ ಗುತ್ತಿಗೆದಾರರು ಹಳದಿ ಮತ್ತು ಕಪ್ಪು ಬಣ್ಣದ ಪಟ್ಟಿ ಬಳಿದರು. ಬಳಿಕ ಡಿವೈಡರ್ ಮಧ್ಯದಲ್ಲಿ ಗಿಡ ನೆಡುವ ಸಲುವಾಗಿ ಮಣ್ಣನ್ನು ತೆಗೆದು ಬದಿಯಲ್ಲಿ ಹಾಕಿದ್ದರಿಂದ ಬಳಿದ ಬಣ್ಣ ಮಸುಕಾಯಿತು. ಜತೆಗೆ ಹೊಸಮಣ್ಣನ್ನು ತುಂಬಿ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಸಸಿಗಳನ್ನು ನೆಡಲಾಯಿತು.

    ಒಣಗಿದ ಸಸಿಗಳು: ಡಿವೈಡರ್ ಮಧ್ಯೆ ನೆಟ್ಟ ಗಿಡಗಳು ಮಾರನೇ ದಿನದಿಂದಲೇ ಒಣಗಳು ಆರಂಭಿಸಿದವು. ಇದರ ನಡುವೆ ಬಿಡಾಡಿ ದನಗಳು ಮತ್ತಷ್ಟು ಗಿಡಗಳನ್ನು ತಿಂದುಹಾಕಿದವು. ಒಣಗಿರುವ ಸಸಿಗಳಿಗೆ ಇಂದಿಗೂ ನಗರಸಭೆ ನೀರು ಹಾಯಿಸಿ ಚಿಗುರಿಸಲು ಯತ್ನಿಸುವ ಪವಾಡ ನಡೆಸುತ್ತಿರುವುದು ನಾಗರಿಕರಲ್ಲಿ ಆಶ್ಚರ್ಯ ಮೂಡಿಸಿದೆ.

    ಸ್ವಚ್ಛ ಸರ್ವೇಕ್ಷಣೆಗಾಗಿ ಸರ್ಕಸ್: ಇನ್ನೊಂದು ತಿಂಗಳಲ್ಲಿ ಸ್ವಚ್ಛ ಸರ್ವೇಕ್ಷಣಾ ತಂಡ ಹುಣಸೂರಿಗೆ ಭೇಟಿ ನೀಡಲಿದ್ದು, ಈ ವೇಳೆ ನಗರ ಸುಂದರವಾಗಿ ಕಾಣಲಿ ಎಂಬ ಉದ್ದೇಶದಿಂದ ನಗರಸಭೆ ಈ ಸರ್ಕಸ್ ನಡೆಸಿದೆ ಎನ್ನಲಾಗಿದೆ. ಆದರೆ ರಸ್ತೆ ಸಿಂಗರಿಸುವ ಭರದಲ್ಲಿ ಸಮರ್ಪಕವಾಗಿ ನಿರ್ವಹಣೆ ನಡೆಸದೆ ಅಧಿಕಾರಿಗಳು ನಗೆಪಾಟಲೀಗೀಡಾಗಿದ್ದಾರೆ.

     ಸ್ವಚ್ಛ ಸರ್ವೇಕ್ಷಣಾ ತಂಡ ಭೇಟಿ ವೇಳೆ ಹುಣಸೂರು ಹೃದಯಭಾಗದ ಮುಖ್ಯರಸ್ತೆಯನ್ನು ಅಂದಗೊಳಿಸುವ ಉದ್ದೇಶದಿಂದ ಡಿವೈಡರ್ ನಡುವೆ ಗಿಡಗಳನ್ನು ಹಾಕಲಾಗಿತ್ತು. ಆದರೆ ಯೋಜನೆ ಸಫಲವಾಗಲಿಲ್ಲ. ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಇನ್ನೂ ಹಣ ನೀಡಿಲ್ಲ. ಮತ್ತೆ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.
    ಮಂಜುನಾಥ್, ಪ್ರಭಾರ ಪೌರಾಯುಕ್ತ, ನಗರಸಭೆ, ಹುಣಸೂರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts