ಗೊಂದಲದ ನಡುವೆ ವೇಗ ಪಡೆದ ಮತದಾನ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳನ್ನು ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ಮಂಗಳವಾರ ಮತದಾನ ನಡೆಯಿತು.
ಬೆಳಗ್ಗೆಯಿಂದ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಕೊಂಚ ವೇಗ ಪಡೆದುಕೊಂಡಿತು.

ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಹಕ್ಕು ಚಲಾಯಿಸಿದರು. ಬೆಳಗ್ಗೆ 11 ಗಂಟೆಯವರೆಗೆ ನಡೆದ ಮತದಾನ ಪೈಕಿ ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ ಶೇ.24ರಷ್ಟು ಮತದಾನವಾಗಿತ್ತು.

ಚಿಕ್ಕೋಡಿ ಪಟ್ಟಣದ ಗಾಂಧಿ ಮಾರ್ಕೇಟ್‌ದಲ್ಲಿರುವ ಸರ್ಕಾರಿ ಮರಾಠಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನೇಕ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಆಸಕ್ತಿಯಿಂದ ಆಗಮಿಸಿ ಮತಚಲಾಯಿಸಿದರು.

Leave a Reply

Your email address will not be published. Required fields are marked *