ಹಾವೇರಿ: ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಸಂಚಾರಿ ಪುನರ್ವಸತಿ ತಜ್ಞರ ತಂಡದಿಂದ ಜ. 9ರಿಂದ 30ರವರೆಗೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಅರಿವು ಮೂಡಿಸುವ ಶಿಬಿರ ಆಯೋಜಿಸಲಾಗಿದೆ.
ಜ. 9ರಂದು ಹಿರೇಕೆರೂರು ತಾಲೂಕು ಚಿಕ್ಕಮತ್ತೂರು ಮತ್ತು ಗಂಗಾಪೂರ, ಜ. 10 ರಂದು ಸವಣೂರು ತಾಲೂಕು ಕೆ.ಬಿ.ತಿಮ್ಮಾಪೂರ, ಜ. 16ರಂದು ಶಿಗ್ಗಾಂವಿ ತಾಲೂಕು ಹೋತನಹಳ್ಳಿ, ಜ. 17 ರಂದು ಹಾವೇರಿ ತಾಲೂಕು ಗುತ್ತಲ ಪಟ್ಟಣ, ಜ. 18ರಂದು ಹಾನಗಲ್ ತಾಲೂಕು ಹುಲ್ಲತ್ತಿ, ಜ. 28 ರಂದು ಬ್ಯಾಡಗಿ ತಾಲೂಕು ಶಿವಪುರ, ಜ. 29 ರಂದು ರಾಣೆಬೆನ್ನೂರ ತಾಲೂಕು ಹೊನ್ನತ್ತಿ ಹಾಗೂ ಜ. 30ರಂದು ರಟ್ಟಿಹಳ್ಳಿ ತಾಲೂಕು ಹಿರೆಮತ್ತೂರು ಗ್ರಾಮಗಳಲ್ಲಿ ಬೆಳಗ್ಗೆ 10.-30ರಿಂದ ತಪಾಸಣೆ ಶಿಬಿರ ಜರುಗಲಿವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಗೌರವ ಕಾರ್ಯದಶಿರ್ ಡಾ. ನೀಲೇಶ ಎಂ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಅಂಗವಿಕಲರ ಉಚಿತ ತಪಾಸಣೆ ಶಿಬಿರ

You Might Also Like
ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…