ಉಡುಪಿ: ಸ್ವಾತಂತ್ರ ದೊರತು 75 ವರ್ಷದ ಬಳಿಕವೂ ಅವಿಭಜಿತ ದ.ಕ.ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮೂಲಗೇಣಿದಾರರ ಬೇಡಿಕೆ ನ್ಯಾಯಯುತವಾಗಿದ್ದು, ನ್ಯಾಯ ಪಡೆಯುವಲ್ಲಿ ಒಟ್ಟಾಗಿ ಧ್ವನಿ ಎತ್ತಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನಿವೃತ್ತ ರಾಜ್ಯಶಾಸ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಭಾನುವಾರ ಜಿಲ್ಲಾ ಬಳಕೆದಾರರ ವೇದಿಕೆ ಕಚೇರಿ ಬಳಿ ನಡೆದ ಜಿಲ್ಲಾ ಮೂಲಗೇಣಿದಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ಮೂಲಗೇಣಿದಾರರ ಶೋಷಣೆ ನಿವಾರಿಸಲು ರಾಜ್ಯ ಸರ್ಕಾರ 2011ರಲ್ಲಿ ಮೂಲಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿ ಪಡಿಸುವ ಕಾಯಿದೆ ಜಾರಿ ಮಾಡಿದ್ದು, ರಾಷ್ಟ್ರಪತಿಗಳು ಅಂಕಿತವನ್ನು ಹಾಕಿದ್ದರು. ಆದರೆ ಕೆಲವು ಮೂಲಿದಾರರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಮೂಲಗೇಣಿದಾರರ ಪರ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕಾರಣ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ ಎಂದರು.
ಮಂಗಳೂರು ಮೂಲಗೇಣಿ ಒಕ್ಕಲು ವೇದಿಕೆಯ ಅಧ್ಯ ಎಂ.ಕೆ.ಯಶೋಧರ್ ಅಧ್ಯತೆ ವಹಿಸಿದ್ದರು. ಹಿರಿಯ ಪದಾಧಿಕಾರಿ ಕ್ಯಾ. ಹ್ಯುಗಸ್ ಮಂಗಳೂರು, ಕೋಶಾಧಿಕಾರಿ ಶಂಕರ್ ಪ್ರಭು ಉಪಸ್ಥಿತರಿದ್ದರು. ಜಿಲ್ಲಾ ಸಂಟನ ಪ್ರತಿನಿಧಿ ಎಸ್.ಎಸ್.ಶೇಟ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು ಸ್ವಾಗತಿಸಿದರು.
