ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ

ಯಾದಗಿರಿ: ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ರಚನೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಒಕ್ಕೂಟದ ಜಿಲ್ಲಾಧ್ಯಕ್ಷರನ್ನಾಗಿ ವಿಜಯ ರಾಠೋಡ್ ಅವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಸಕರ್ಾರದ ಜತೆಯಲ್ಲಿ ಖಾಸಗಿ ಶಾಲೆಗಳು ಕೂಡ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ರಾತ್ರಿ ಶಾಲೆಗಳು ನಡೆಯುತ್ತಿದ್ದವು. ಬರುಬರುತ್ತ ಸರ್ಕಾರಿ ಶಾಲೆಗಳು ಆರಂಭಗೊಂಡವು. ಆಧುನೀಕರಣದ ಸ್ಪರ್ಶದಿಂದಾಗಿ ಇಂದು ಹಳ್ಳಿ ಹಳ್ಳಿಗಳಲ್ಲಿ ಖಾಸಗಿ ಶಾಲೆಗಳು ಆರಂಭಗೊಂಡು ಶೈಕ್ಷಣಿಕ ಕ್ರಾಂತಿಯಲ್ಲಿ ತೊಡಗಿವೆ ಎಂದರು.

ಹಳ್ಳಿಗಾಡಿನ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಕ್ಕಾಗಿ ಇಂದು ಖಾಸಗಿ ಶಾಲೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಆದರೂ ಸಕರ್ಾರ ಶಾಲೆಗಳ ಆಡಳಿತ ಮಂಡಳಿಗಳ ಕೆಲ ಸಮಸ್ಯೆಗಳನ್ನು ಈಡೇರಿಸುವಲ್ಲಿ ಮೀನಾಮೇಶ ಎಣಿಸುತ್ತಿರುವುದು ಸರಿಯಲ್ಲ. ಒಕ್ಕೂಟದ ಸದಸ್ಯರೆಲ್ಲರೂ ನನ್ನ ಮೇಲೆ ಭರವಸೆ ಇಟ್ಟು ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ಯಾವುದೇ ಸಮಸ್ಯೆ ಇದ್ದರೂ ಹೋರಾಟ ಮಾಡಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಒಕ್ಕೂಟದ ಪದಾಧಿಕಾರಿಗಳು: ಕೆ.ವಿ.ಪರಮೇಶ್ವರ (ಉಪಾಧ್ಯಕ್ಷ), ಪಿ.ಆರ್.ಗುಡಿಮನಿ (ಪ್ರಧಾನ ಕಾರ್ಯದರ್ಶಿ), ಶರಣಪ್ಪ ಕಟ್ಟಿಮನಿ, ರಾಘವೇಂದ್ರ ಕೆ.ಬಿ.ಸೈದಾಪೂರ (ಸಹ ಕಾರ್ಯದರ್ಶಿ), ಸಿ.ಎನ್.ಭಂಡಾರಿ (ಸಲಹೆಗಾರರು), ಸಾಯಬಣ್ಣ ಬಸವಂತಪೂರ (ಖಜಾಂಚಿ), ಮಹಬೂಬಸಾಬ ಕತ್ತಣ್ಣೋರ, ಲಂಕೆಪ್ಪ ಕವಲಿ, ರಾಜಶೇಖರ ಮಾವಿನ ಹಳ್ಳಿ, ಸುಭಾಷ ಆಲ್ದಾಳ, ಯಲ್ಲಪ್ಪ, ಮಲ್ಲಪ್ಪ ಮೇಸ್ತ್ರಿ, ದೇವಿಂದ್ರಪ್ಪ ದೇವರ, ಗೋವಿಂದ ರಾಠೋಡ, ಸುಭಾಷಚಂದ್ರ ಬಡಿಗೇರ, ಭೀಮರಾಯ ಬಳಿಚಕ್ರ, ಮಹ್ಮದ ರಫೀಕ್, ಶರಣಗೌಡ ನಾಗರೆಡ್ಡಿ, ಶರಣಪ್ಪ ಆಲ್ದಾಳ, ಮಹಾಲಕ್ಷ್ಮೀ ಪಾಟೀಲ್ ಸೈದಾಪುರ, ಹಸೀನಾ ಬಾನು ಅನಪೂರ ಅವರು ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡರು

Leave a Reply

Your email address will not be published. Required fields are marked *