ಕಂಪ್ಲಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ತಲಾ 400 ರೂ. ಬಹುಮಾನಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ:
ಒಂದರಿಂದ ನಾಲ್ಕನೇ ತರಗತಿಯ ವೈಯಕ್ತಿಕ ವಿಭಾಗದಲ್ಲಿ ದೇವಸಮುದ್ರ ಸಹಿಪ್ರಾ ಶಾಲೆಯ ವಿಕಿಲ್ ತೆಲುಗು ಕಂಠಪಾಠ ಸ್ಪರ್ಧೆಯಲ್ಲಿ, ಶಾರದಾ ಅನುದಾನಿತ ಶಾಲೆಯ ಎ.ಜಿ.ಧನ್ಯ ಸಂಸ್ಕೃತ ಕಂಠಪಾಠ ಮತ್ತು ಸಂಸ್ಕೃತ ಧಾರ್ಮಿಕ ಪಠಣ, ಎಸ್.ಎನ್.ಪೇಟೆಯ ಎಚ್.ಅಖಿಲ್ ದೇಶಭಕ್ತಿಗೀತೆ, ವಿಜಯನಗರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಡಿ.ಸಾತ್ವಿಕ ಅಭಿನಯ ಗೀತೆ, ಡ್ರೀಮ್‌ವರ್ಲ್ಡ್ ಶಾಲೆಯ ಅನುಷ್ಕಾ ಜಾಜಿ ಭಕ್ತಿಗೀತೆಯಲ್ಲಿ ಆಯ್ಕೆಗೊಂಡಿದ್ದಾರೆ.
ಐದರಿಂದ ಏಳನೇ ತರಗತಿಯ ವೈಯಕ್ತಿಕ ವಿಭಾಗದಲ್ಲಿ ವಿದ್ಯಾಸಾಗರ ಶಾಲೆಯ ಎಂ.ಜಿಯಾ ಕಂಠಪಾಠ ಸ್ಪರ್ಧೆಯಲ್ಲಿ, ಚಿಕ್ಕಜಾಯಿಗನೂರಿನ ಸಹಿಪ್ರಾ ಶಾಲೆಯ ತುಳಸಿ ತೆಲುಗು ಕಂಠಪಾಠ, ವಿಜಯನಗರ ಇಂಗ್ಲಿಷ್ ಮಾಧ್ಯಮ ಶಾಲೆಯ ಕೆ.ಶ್ರಾವಣಿ ಕಥೆ ಹೇಳುವುದು, ಎಮ್ಮಿಗನೂರಿನ ಸಹಿಪ್ರಾ ಶಾಲೆಯ ಶೇಖ್ ಅನುಮ್ ಅಫ್ಶೀನ್ ಚಿತ್ರಕಲೆ, ಕೆ.ಐಶು ಅಭಿನಯ ಗೀತೆ, ವಿಜಯನಗರ ಹಿಪ್ರಾ ಶಾಲೆಯ ವೈ.ಈಶ್ವರಿ ಕವನ/ಪದ್ಯ ವಾಚನದಲ್ಲಿ ಆಯ್ಕೆಗೊಂಡಿದ್ದಾರೆ.
ವೈಯಕ್ತಿಕ ವಿಭಾಗದ ಎಂಟರಿಂದ 10ನೇ ತರಗತಿಯ ಸಾಹಿತಿ ವಿದ್ಯಾಲಯದ ರೇಣುಕೇಶ್ವರಿ ಇಂಗ್ಲಿಷ್ ಭಾಷಣ, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಡಿ.ಪಲ್ಲವಿ ಸಾಯಿ ಸಂಸ್ಕೃತ ಧಾರ್ಮಿಕ ಪಠಣ, ವಿದ್ಯಾಸಾಗರ ಶಾಲೆಯ ಎಸ್.ಎಸ್.ಚೈತನ್ಯ ಜಾನಪದಗೀತೆ, ಪಿ.ಸಾಯಿನಿಧಿ ಭರತನಾಟ್ಯ, ಎಮ್ಮಿಗನೂರಿನ ಸ.ಮಾ.ಹಿ.ಪ್ರಾಶಾಲೆಯ ಗೌರಿ ಚರ್ಚಾಸ್ಪರ್ಧೆ, ಎಸ್.ವಿ.ಎಂ.ಶಾಲೆಯ ಎಸ್.ಗಾಯತ್ರಿ ಆಶುಭಾಷಣ ಸ್ಪರ್ಧೆಯಲ್ಲಿ ಆಯ್ಕೆಗೊಂಡಿದ್ದಾರೆ.