More

    ಮಕ್ಕಳಲ್ಲಿನ ವೈಜ್ಞಾನಿಕ ಮನೋಭಾವ ಪ್ರೋತ್ಸಾಹಿಸಿ: ಡಯಟ್ ಪ್ರಾಂಶುಪಾಲ ಪುರುಷೋತ್ತಮ ಕಿವಿಮಾತು

    ಮಂಡ್ಯ: ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವವನ್ನು ಪೋಷಣೆ ಮಾಡಿ ಬೆಳೆಸಿ ಉತ್ತೇಜನ ಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಡಯಟ್ ಪ್ರಾಂಶುಪಾಲ ಪುರುಷೋತ್ತಮ ಹೇಳಿದರು.
    ನಗರದ ಡಯಟ್ ಕಚೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯದ ಜೀವನದಲ್ಲಿ ವಿಜ್ಞಾನ ಅಡಕವಾಗಿದೆ. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಇತ್ತೀಚೆಗೆ ನಮ್ಮ ಇಸ್ರೋ ಸಂಸ್ಥೆ ಚಂದ್ರನಲ್ಲಿಗೆ ರಾಕೆಟ್ ಕಳುಹಿಸುವ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವ ಸಂಗತಿಯಾಗಿದೆ ಎಂದು ಹೇಳಿದರು.
    ಪ್ರಾರಂಭಿಕ ಹಂತದಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು. ಬಳಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪೋಷಣೆ ನೀಡುವ ಮೂಲಕ ಸಹಕಾರ ಕೊಡುವುದು ಶಿಕ್ಷಕರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಮಾಡಲು ಇಂತಹ ವಸ್ತು ಪ್ರದರ್ಶನಗಳು ಉತ್ತಮ ವೇದಿಕೆಯಾಗಿ ಗುರುತಿಸುತ್ತವೆ ಎಂದರು.
    ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಬಿ.ವಿ.ನಂದೀಶ್ ಮಾತನಾಡಿ, ಭಾರತದ ವಿಜ್ಞಾನಿಗಳನ್ನು ಜಗತ್ತಿಗೆ ಪರಿಚಯಿಸಿ ಲಾಭ ಪಡೆದಿದ್ದೇವೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಸಾರ್ಥಕತೆ ತಂದುಕೊಡುತ್ತದೆ. ವಿಜ್ಞಾನ ಮನುಷ್ಯನಲ್ಲಿ ಮಂದಹಾಸ ಮೂಡಿಸುತ್ತದೆ. ವಿಜ್ಞಾನ ಇಂದು ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವಿಲ್ಲದೇ ಬದುಕೇ ಇಲ್ಲ ಎಂದರು.
    ಉಪನ್ಯಾಸಕರಾದ ವಿಜಯಶ್ರೀ, ಎಸ್.ಸಿದ್ದರಾಜು, ಡಾ.ರವಿ, ಲಲಿತಾಕುಮಾರಿ, ಪ್ರತಿಭಾ, ಡಿಲಿಸ್ ಮರಿನಾ, ತೀರ್ಪುಗಾರರಾದ ಲೋಕೇಶ್, ಮಹೇಶ್‌ಚಂದ್ರ, ಶಿವನಂಜೇಗೌಡ, ಲಕ್ಕಪ್ಪ, ಹೇಮಂತ್, ರಾಜು, ಮೋಹನ್, ಬಸವರಾಜು, ಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts