More

  ಕೆರೆ ಕಾಮಗಾರಿ ವೈಜ್ಞಾನಿಕವಾಗಿರಲಿ: ಸಿಇಒ ರಾಹುಲ್​ ರತ್ನಂ ಪಾಂಡೆಯ ಸೂಚನೆ

  ಕೊಪ್ಪಳ: ನರೇಗಾದಡಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿ ವೈಜ್ಞಾನಿವಾಗಿರಲಿ. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

  ತಾಲೂಕಿನ ಬಹದ್ದೂರಬಂಡಿ ಗ್ರಾಪಂ ವ್ಯಾಪ್ತಿಯ ಬಿ.ಹೊಸಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

  2024-25ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಕೆರೆಗೆ ನೀರು ಹರಿದು ಬರುವ ನಾಲಾಗಳನ್ನು ಸುಧಾರಣೆ ಮಾಡಿ.ಟ್ರಂಚ್​ಗಳನ್ನು ಮಾರ್ಕ್​ಔಟ್​ ಮಾಡಿ ಕೂಲಿಕಾರರಿಗೆ ಕಾಮಗಾರಿಯಲ್ಲಿ ಕೆಲಸ ನೀಡಿ. ಮಳೆಯಿಂದ ಹರಿದು ಬರುವ ನೀರು ನೇರವಾಗಿ ಕೆರೆಗೆ ಸೇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಲಿದೆ. ಕೊಳವೆ ಬಾವಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ. ರೈತರಿಗೂ ಅನುಕೂಲವಾಗಲಿದೆ. ಕಾಮಗಾರಿಯಲ್ಲಿ ವೈಜ್ಞಾನಿಕ ಸಾಧ್ಯತೆಗಳನ್ನು ಅವಲೋಕಿಸಿ, ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

  ಕೆರೆ ಬಂಡ್​ನಿಂದ 15 ಮೀಟರ್​ ಅಂತರದಲ್ಲಿ 10 ಅಡಿಗೆ ಒಂದರಂತೆ ಗಿಡಗಳನ್ನು ನೆಡಿ. ಕೆರೆಯ ಮಧ್ಯಭಾಗದಲ್ಲಿ ನೀರಿನ ಗಡ್ಡೆ ನಿರ್ಮಿಸಿ ಪಕ್ಷಿಗಳು ವಾಸಿಸುವಂತಹ ಮರಗಳನ್ನು ನೆಡಿ. ಕೆರೆ ಆರಂಭದ ಸ್ಥಳದಲ್ಲಿ ಬ್ಲಾಕ್​ ಪ್ಲಾಂಟೇಷನ್​ ಕೈಗೊಳ್ಳಿ. ಕೆರೆಯಲ್ಲಿ ಕೂಲಿಕಾರರಿಗೆ ಸರಿಯಾಗಿ ಬಾಕ್ಸ್​ ಮಾದರಿಯಲ್ಲಿ ಅಳತೆ ನೀಡಿ ಹೂಳೆತ್ತಲು ತಿಳಿಸಿ. ಬರುವ ಏಪ್ರೀಲ್​ನಿಂದ ಗ್ರಾಪಂವಾರು ಬೇರೆ ಬೇರೆ ಕೆಲಸ ನೀಡಿ. ನಾಲಾಗಳಲ್ಲಿ ನೀರು ಸರಾಗವಾಗಿ ಹರಿವು ಹೋಗುವಂತೆ ಮಾಡಿ. ಅಗೆದ ಮಣ್ಣು ಕೆರೆಯಲ್ಲಿ ಬಿಡದೆ, ದಡಕ್ಕೆ ಸಾಗಿಸಿ ಎಂದು ನಿರ್ದೇಶಿಸಿದರು.

  ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಪಿಡಿಒ ಜ್ಯೋತಿ ರಡ್ಡೇರ್​, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕರಾದ ಯಮನೂರಪ್ಪ, ಸುರೇಶ ದೇಸಾಯಿ, ತಾಂತ್ರಿಕ ಸಹಾಯಕರಾದ ಶಿವಪ್ರಸಾದ, ಗುರುರಾಜ, ರಮೇಶ್​, ಮುರುಳಿಧರ, ಮಂಜುನಾಥ ಮೇಟಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts