ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ19ನೇ ಗೇಟ್ ಚೈನ್‌ಲಿಂಕ್ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಕಟ್ ಆಗಿದ್ದು, ನದಿಗೆ ಅಪಾರ ನೀರು ಹರಿಯುತ್ತಿದೆ. ನದಿಪಾತ್ರದ ಜನರು ಆತಂಕಪಡುವಂತಾಗಿದೆ.
105.788 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಗೇಟ್ ನಂಬರ್ 19 ರಿಂದ 75 ಸಾವಿರದಿಂದ 1ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಡ್ಯಾಂ ಗೇಟ್ ನ್ನು ಸರಿಪಡಿಸಲು ಮುಂದಾಗಿರೋ ಸಿಬ್ಬಂದಿ. ನದಿ ಪಾತ್ರದ ಜನರು ಎಚ್ಚರಿಕೆ ಯಿಂದ ಇರುವಂತೆ ಸೂಚಿಸಲಾಗಿದೆ.
ಸದ್ಯದ ಸ್ಥಿತಿಯಲ್ಲಿ ಡ್ಯಾಂ ಗೇಟ್ ರಿಪೇರಿ ಕಷ್ಟಸಾಧ್ಯ.
ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡುವ ಅನಿವಾರ್ಯತೆ ಎದುರಾಗಿದೆ. ವಿಷಯ ತಿಳಿದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಜಲಾಶಯಕ್ಕೆಭೇಟಿ ನೀಡಿ ಪರಿಶೀಲಿಸಿದರು. ನೀರಾವರಿ ಅಧಿಕಾರಿಗಳ ಜತೆಗೆ ಸಾಧ್ಯಸಾಧ್ಯತೆ ಬಗ್ಗೆ ಚರ್ಚಿಸಿದರು. ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ.
ಎರಡನೇ ಬಾರಿ ಕಟ್ : 2019ರಲ್ಲೂ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಏಕಾಏಕಿ ಕಟ್ ಆಗಿತ್ತು. ಅಪಾರ ನೀರು ಕಾಲುವೆಗೆ ಹರಿದು ಮುನಿರಾಬಾದ್ ಗ್ರಾಮದ ಒಳಗೆ ನೀರುನುಗ್ಗಿತ್ತು. ಪಂಪಾವನ ಸಂಪೂರ್ಣ ಜಲಾವೃತಗೊಂಡು ಆತಂಕ ಸೃಷ್ಟಿಸಿತ್ತು. ಒಂದು ವಾರ ಸರ್ಕಸ್ ನಡೆಸಿದ ಅಧಿಕಾರಿಗಳು ಅಂತಿಮವಾಗಿ ಗೇಟ್ ಮುಚ್ಚುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಮುಖ್ಯ ಗೇಟ್ ತುಂಡರಿಸಿದ್ದು, ನಿರ್ವಹಣೆ ಮಾಡುವುದು ಹೇಗೆಂಬ ಚಿಂತೆ ಶುರುವಾಗಿದೆ.