ಕೊಪ್ಪಳ: ಮಾರ್ಗಸೂಚಿ ಅನ್ವಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀೆ ನಡೆಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರೀಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಾ.21ರಿಂದ ಏಪ್ರಿಳ್ 4ವರೆಗೆ ಪರೀೆ ನಡೆಯಲಿವೆ. ಅಕ್ರಮಗಳಿಗೆ ಅವಕಾಶ ನೀಡದೆ ಸುಸೂತ್ರವಾಗಿ ನಡೆಸಿ. ಪರೀೆಗೆ ನಿಯೋಜನೆಯಾದ ಸಿಬ್ಬಂದಿ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಿ. ವಿದ್ಯಾರ್ಥಿಗಳಿಗೆ ಆಸನ, ಕುಡಿವ ನೀರು, ಶೌಚಗೃಹ ಇನ್ನಿತರ ಸೌಲಭ್ಯ ಕಲ್ಪಿಸಿ. ಅಂಗವಿಕಲ ಮಕ್ಕಳಿಗೆ ಕೆಳಮಹಡಿಯಲ್ಲಿ ಆಸನ ವ್ಯವಸ್ಥೆ ಮಾಡಿ. ಅಂಧ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೇಂದ್ರ ಹಾಗೂ ಪರೀಾ ಸಹಾಯಕರ ಒಪ್ಪಿಗೆ ಪತ್ರ ಪರಿಶೀಲಿಸಿ. ಮೂರು ಅವಕಾಶಗಳಿದ್ದು, ವಿದ್ಯಾರ್ಥಿಗಳು ಭಯಪಡಬೇಕಿಲ್ಲ ಎಂಬ ಬಗ್ಗೆ ಮನವರಿಕೆ ಮಾಡಿ. ಕೇಂದ್ರದೊಳಗೆ ಮೊಬೈಲ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣ ತರುವಂತಿಲ್ಲ. ಮೇಲ್ವಿಚಾರಕರೂ ಮೊಬೈಲ್ ಬಳಸಕೂಡದು ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಪರೀೆ ವೇಳೆ ಸಿಸಿಟಿವಿ ಕ್ಯಾಮೆರಾ ಚಾಲನೆಯಲ್ಲಿರುವಂತೆ ನೋಡಿಕೊಳ್ಳಿ. ತಾಂತ್ರಿಕ ಸಮಸ್ಯೆ ಆದಲ್ಲಿ ತಕ್ಷಣ ಸರಿಪಡಿಸಿ. ಒಂದು ನಿಮಿಷಕ್ಕಿಂತ ಹೆಚ್ಚು ಸಮಯಕ್ಕೆ ಕ್ಯಾಮೆರಾ ಆ್ ಆಗಕೂಡದು. ಯುಪಿಎಸ್ ಬ್ಯಾಟರಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ವೆಬ್ಕಾಸ್ಟಿಂಗ್ ಇದೆ ಎಂದು ನೀವೇ ಭಯ ಹುಟ್ಟಿಸಬೇಡಿ. ಉತ್ತಮವಾಗಿ ಪರೀೆ ಬರೆಯಲು ಪ್ರೋತ್ಸಾಹಿಸಿ. ಕುಡಿವ ನೀರು ಕಲ್ಪಿಸಿ. ಅಡಚಣೆ ಆದರೆ ಕೇಂದ್ರದ ಮುಖ್ಯಸ್ಥರೇ ಹೊಣೆ ಎಂದು ಎಚ್ಚರಿಸಿದರು.
ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, 25,578 ವಿದ್ಯಾರ್ಥಿಗಳು ಪರೀೆಗೆ ನೋಂದಾಯಿಸಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ 23, ಕೊಪ್ಪಳ 21, ಕುಷ್ಟಗಿ15 ಹಾಗೂ ಯಲಬುರ್ಗಾ 14 ಒಟ್ಟು 73 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕ ಹಾಗೂ ಪ್ರಶ್ನೆಪತ್ರಿಕೆ ಅಭಿರಕ್ಷಕರನ್ನು ನೇಮಿಸಲಾಗಿದೆ. ಆಯಾ ತಾಲೂಕು ಬಿಇಒಗಳು ಆಯಾ ವಿಭಾಗಗಳ ಪ್ರಶ್ನೆ ಪತ್ರಿಕೆ ಪಾಲಕರಾಗಿರುತ್ತಾರೆಂದು ಮಾಹಿತಿ ನೀಡಿದರು.
ತಹಸೀಲ್ದಾರ್ಗಳು, ಬಿಇಒಗಳು, ವಿಷಯ ಪರಿವೀಕ್ಷಕರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ನೋಡಲ್ ಅಧಿಕಾರಿಗಳಿದ್ದರು.