ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬೃಹತ್ ಉಕ್ಕು ಕಾರ್ಖಾನೆ ತಲೆ ಎತ್ತುತ್ತಿರುವುದನ್ನು ಖಂಡಿಸಿ ಕೊಪ್ಪಳ ಪರಿಸರ ಹಿತ ರಕ್ಷಣಾ ವೇದಿಕೆ ೆ.24ರಂದು ಕೊಪ್ಪಳ ತಾಲೂಕು ಬಂದ್ಗೆ ಕರೆ ನೀಡಿದೆ. ಬುಧವಾರ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೋರಾಟ ಬೆಂಬಲಿಸಿದ್ದು ಹೊಸ ರೂಪ ಪಡೆದುಕೊಂಡಿದೆ.
ವೇದಿಕೆ ಸಂಚಾಲಕರ ನೇತೃತ್ವದಲ್ಲಿ ವಿವಿಧ ಗಣ್ಯರು ಬುಧವಾರ ಶ್ರೀಗಳನ್ನು ಭೇಟಿ ಮಾಡಿ ಕಾರ್ಖಾನೆ ವಿರುದ್ಧ ಧ್ವನಿ ಎತ್ತುವಂತೆ ಮನವಿ ಮಾಡಿದರು. ಸ್ಪಂದಿಸಿದ ಶ್ರೀಗಳು, ಇದು ಎಲ್ಲರ ಹೋರಾಟ. ನನ್ನೊಬ್ಬನಿಗೆ ಸಂಬಂಧಿಸಿದಲ್ಲ. ಎಲ್ಲರೂ ಸೇರಿ ಹೋರಾಟ ಮಾಡೋಣ. ಕೊನೆಗೊಮ್ಮೆ ನೀವೆಲ್ಲ ಹಿಂದೆ ಸರಿದರೂ ನಾನು ಹೋರಾಟ ನಿಲ್ಲಿಸಲ್ಲ. ಪರಿಸರ ಉಳಿಸುವ ವಿಷಯದಲ್ಲಿ ನಾನು ಯಾರೊಂದಿಗೂ ರಾಜೀಯಾಗುವುದಿಲ್ಲ. ಕಾರ್ಖಾನೆ ನಮ್ಮ ಊರಿನಿಂದ ಕಾಲ್ಕಿತ್ತುವವರೆಗೆ ಹೋರಾಟ ನಿರಂತರವಾಗಿರಲಿದೆ. ಎಲ್ಲರ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಸಿ. ಪಾತೀತವಾಗಿ ಹೋರಾಟ ಇರಲಿ. ಸರ್ವಧರ್ಮದ ಶ್ರೀಗಳನ್ನು ಆಹ್ವಾನಿಸಿ. ನಾನು ೆ.24ರ ಬಂದ್ನಲ್ಲಿ ಭಾಗಿಯಾಗುವೆ ಎಂದು ಭರವಸೆ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ನಾವು ಎಷ್ಟು ಗಳಿಸಿದರೂ ಅನುಭವಿಸಲು ಆರೋಗ್ಯ ಬೇಕು. ಕಾರ್ಖಾನೆ ಧೂಳಿನಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ರೋಗ ಬಂದರೆ ಹಣ ತೆಗೆದುಕೊಂಡು ಏನು ಮಾಡುವುದು ? ಆರೋಗ್ಯ ಕೊಳ್ಳಲಾಗದು. ಶ್ರೀಗಳ ಸಲಹೆಯಂತೆ ಪಾತೀತವಾಗಿ ನಮ್ಮೂರು ಉಳಿಸಲು ಹೋರಾಟ ಮಾಡೋಣ ಎಂದು ಹೋರಾಟ ಬೆಂಬಲಿಸಿದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ನಾವೂ ನಿಯೋಗ ಕೊಂಡೊಯ್ದು ಸಿಎಂ ಹಾಗೂ ಡಿಸಿಎಂ ಅವರಿಗೆ ಮನವಿ ಮಾಡಿಕೊಳ್ಳೋಣ. ಪಾತೀತವಾಗಿ ಅವರಿವರನ್ನು ಟೀಕಿಸದೆ ನಮ್ಮ ಹೋರಾಟ ರೂಪಿಸೋಣ. ಕೇವಲ ಬಂದ್ಗೆ ಹೋರಾಟ ಸೀಮಿತವಾಗದಿರಲಿ. ಇದನ್ನು ನಿರಂತರವಾಗಿ ಮುನ್ನಡೆಸೋಣ. ಎಲ್ಲ ಸಂಟನೆಗಳು, ಮುಖಂಡರು, ಮಹಿಳಾ ಸಂಟನೆಗಳು ಸಕ್ರಿಯವಾಗಿ ಹೋರಾಟದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಉಕ್ಕು, ಕಬ್ಬಿಣ ಕಾರ್ಖಾನೆಗಳಿಂದ ಪರಿಸರ ಸಾಕಷ್ಟು ಹಾಳಾಗಲಿದೆ. ಈಗಿರುವ ಕಾರ್ಖಾನೆಗಳಿಂದ ನಿತ್ಯ ಜನರು ನರಕ ಅನುಭವಿಸುತ್ತಿದ್ದಾರೆ. ಮತ್ತೊಂದು ದೊಡ್ಡ ಕಾರ್ಖಾನೆ ಬಂದರೆ ನಮ್ಮ ಬದುಕು ಇನ್ನಷ್ಟು ದುಸ್ಥರವಾಗಲಿದೆ. ಇದಕ್ಕೆ ಅವಕಾಶ ನೀಡುವುದು ಬೇಡ. ಶ್ರೀಗಳ ಶಕ್ತಿ ನಮ್ಮೊಂದಿಗಿದೆ ಎಂದು ಉತ್ಸಾಹ ತುಂಬಿದರು.
ಗವಿಮಠದಿಂದ ಮೆರವಣಿಗೆ : ೆ.24ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆ ಬಂದ್ ಇರಲಿವೆ. ಬೆಳಗ್ಗೆ 9 ಗಂಟೆಗೆ ಗವಿಮಠದ ಆವರಣದಿಂದ ಪ್ರತಿಭಟನೆ ಆರಂಭವಾಗಲಿದ್ದು, ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಲಿದೆ. ಬಳಿಕ ಬಹಿರಂಗ ಸಮಾವೇಶ ಇರಲಿದ್ದು ಸುಮಾರು 50 ಸಾವಿರ ಜನ ಸೇರುವ ನಿರೀೆ ಇದೆ.