ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಬೃಹತ್ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಾಣ ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಸಂಚಾಲಕರು ಸೋಮವಾರ ಸರ್ಕಾರಕ್ಕೆ ಪತ್ರ ಬರೆದು ಪ್ರತಿಭಟಿಸಿದರು.
ಕೊಪ್ಪಳಕ್ಕೆ ಹೊಂದಿಕೊಂಡು ಬೃಹತ್ ಕಾರ್ಖಾನೆ ನಿರ್ಮಿಸಬಾರದು. ಬಿಎಸ್ಪಿಎಲ್ ಕಾರ್ಖಾನೆಗೆ ಸರ್ಕಾರ ನೀಡಿದ ಅನುಮತಿ ರದ್ದು ಮಾಡಬೇಕು. ಕಾರ್ಖಾನೆ ಓಡಿಸಿ ಕೊಪ್ಪಳ ಉಳಿಸಬೇಕು. ಈಗಿರುವ ಕಾರ್ಖಾನೆಗಳಿಂದ ಪರಿಸರ ಹಾಳಾಗುತ್ತಿದೆ. ದೊಡ್ಡ ಕಾರ್ಖಾನೆ ಸ್ಥಾಪನೆ ಆದಲ್ಲಿ ಮತ್ತಷ್ಟು ಮಾಲಿನ್ಯ ಹೆಚ್ಚುವುದು. ಇದಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿದರು. 100ಕ್ಕೂ ಹೆಚ್ಚು ಜನರು ಪತ್ರ ಬರೆದು ಸಿಎಂಗೆ ಪೋಸ್ಟ್ ಮಾಡಿದರು.
ಸೇನೆ ಪದಾಧಿಕಾರಿಗಳಾದ ವಿಜಯಕುಮಾರ ಕವಲೂರು, ಜಿಎಸ್ ಗೋನಾಳ, ವಿನೋದ ಕುಮಾರ್ ಜಿ., ಶಿವಕುಮಾರ ಏಣಗಿ, ಚಂದ್ರು ಅಣ್ಣಿಗೇರಿ, ಗವಿಸಿದ್ದಪ್ಪ ಮಂಗಳಾಪುರ, ಮಹ್ಮದ್ ಗರ್ಸಗಲ್, ವಿನೋದ ಕುಮಾರ, ಸೋಹೇಲ್, ದೇವೆಂದ್ರಪ್ಪ ತೊಂಡಿಹಾಳ, ಶಾಮ್ ಬೇಣಗಿ, ಹನುಮಗೌಡ ಆಟೋ, ಶಕೀಲ್ ಅಹ್ಮದ್ ಬ್ಯಾಗವಾಟ್ ಇತರರಿದ್ದರು.