ನೀರಾವರಿ ಯೋಜನೆಗೆ ಆದ್ಯತೆ

blank

ಕೊಪ್ಪಳ: ಕ್ಷೇತ್ರದ ನೀರಾವರಿ ಯೋಜನೆಗಳು ಹಾಗೂ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದೆಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ಗೊಂಡಬಾಳ ಜಿ. ಪಂ ವ್ಯಾಪ್ತಿಯ ಕುಣಿಕೇರಿ ತಾಂಡ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ 12.30 ಕೋಟಿ ರೂ. ಮೊತ್ತದ ವಿವಿಧ ಕಾರ್ಯಕ್ರಮಗಳಿಗೆ ಗುರುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಬಹದ್ದೂರ್​ ಬಂಡಿ ನವಲ್​ ಕಲ್​ ಹಾಗೂ ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. 188 ಕೋಟಿ ರೂ. ವೆಚ್ಚದ ಬಹದ್ದೂರ್​ ಬಂಡಿ ನವಲ್​ ಕಲ್​ ಯೊಜನೆಯ ಪ್ರಾಯೋಗಿಕ ಪರೀೆ ನಡೆಸಲಾಗುವುದು. 14,000 ಎಕರೆ ನೀರಾವರಿ ಪ್ರದೇಶ ಆಗಲಿದೆ. ಚಿಕ್ಕಬಗನಾಳ, ಕಾಸನಕಂಡಿ ಹಾಗೂ ಲಾಚನಕೇರಿ ಏತ ನೀರಾವರಿ ಯೋಜನೆಗಳಿಗೂ ಅನುದಾನ ಒದಗಿಸಲಾಗುವುದು ಎಂದರು.

150 ಕೋಟಿ ರೂ. ಅನುದಾನದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಬರುವ ಬಜೆಟ್​ನಲ್ಲಿ ಹೆಚ್ಚುವರಿ 150 ಕೋಟಿ ರೂ. ಅನುದಾನ ಒದಗಿಸಲು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದರು. ಕುಣಿಕೇರಿ ಗ್ರಾಮದಲ್ಲಿ ನೂತನ ಪ್ರೌಢ ಶಾಲೆ ಉದ್ಘಾಟಿಸಿದರು.

ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಬಾಲಚಂದ್ರನ್​, ಪ್ರಮುಖರಾದ ತೋಟಪ್ಪ ಕಾಮನೂರು, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ಬಸಣ್ಣ ಬಂಗಾಳಿ, ಬನ್ನೆಪ್ಪ ಗೌಡ, ಜಗದೀಶ್​ ಕರ್ಕಿಹಳ್ಳಿ, ಹನಮೇಶ್​ ಹೊಸಳ್ಳಿ, ಪಂಪಣ್ಣ ಪೂಜಾರ್​, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಅಕ್ಬರ್​ ಪಾಷಾ ಪಲ್ಟನ್​ ಇತರರಿದ್ದರು.

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…