ಕೊಪ್ಪಳ: ಕ್ಷೇತ್ರದ ಎಲ್ಲಾ ಗ್ರಾಮಗಳ ಕೆರೆಗಳನ್ನು ಅಭಿವೃದ್ಧಿಪಡಿಸಿ ತುಂಬಿಸಲಾಗುವುದು. ಇದರಿಂದ ರೈತರ ಬೋರವೆಲ್ಗಳು ರಿಚಾರ್ಜ್ ಆಗಿ ಉತ್ತಮ ಬೆಳೆ ಬೆಳೆಯಲು ಸಹಕಾರಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಲೇಬಗೇರಿ ಜಿಪಂ ವ್ಯಾಪ್ತಿಯ ಹನುಮನಹಳ್ಳಿ, ಟನಕನಕಲ್, ಕಲಿಕೇರಿ, ಹಟ್ಟಿ ದೇವಲಾಪುರ ಹಾಗೂ ಚಿಲವಾಡಗಿ ಗ್ರಾಮಗಳಲ್ಲಿ 5.47 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಸೋಮವಾರ ಅಡ್ಡಿಗಲ್ಲು ನೆರವೇರಿಸಿ ಮಾತನಾಡಿದರು.
ಕೆರೆ ತುಂಬಿದರೆ ಜಾನುವಾರುಗಳಿಗೂ ಕುಡಿವ ನೀರು ಸಿಗಲಿದೆ. 290 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ &ಯಲಬುರ್ಗ ಕೆರೆ ತುಂಬಿಸುವ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಒಟ್ಟು 13 ಕೆರೆಗಳಲ್ಲಿ ಕೊಪ್ಪಳ ತಾಲೂಕಿನ ಹುಲಿಕೇರಿ, ಗಿಣಗೇರಿ ಸೇರಿ ಇತರ ಐದು ಕೆರೆಗಳಿವೆ. ಅಳವಂಡಿ ಹೋಬಳಿಯಲ್ಲಿ 21.50 ಕೋಟಿ ವೆಚ್ಚದಲ್ಲಿ 15 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇತ್ತೀಚೆಗೆ ಬಹದ್ದೂರಬಂಡಿ ಏತ ನೀರಾವರಿ ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಅದರಡಿ ಸದ್ಯ ಕೆರೆ ತುಂಬಿಸಲಾಗುತ್ತಿದೆ. ಒಟ್ಟು ಒಂದು ಸಾವಿರ ಕೋಟಿ ರೂ. ಯೋಜನೆಯಡಿ 1.18ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದರು.
ಜಿಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ್, ರಾಮಣ್ಣ ಚೌಡ್ಕಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲನವರ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ತೋಟಪ್ಪ ಕಾಮನೂರು, ಶಿವಣ್ಣ ಚರಾರಿ, ಪಂಪಣ್ಣ ಪೂಜಾರ್, ಸೋಮಶೇಖರ್ ಹಿಟ್ನಾಳ, ಯಲ್ಲಪ್ಪ ಹಳೇಮನಿ, ಮುಕ್ಕಣ್ಣ ಚಿಲವಾಡಗಿ, ಉಡಚಪ್ಪ ಬೋವಿ, ಮಲ್ಲು ಪೂಜಾರ್ ಇತರರಿದ್ದರು.