ಆಂಜನೇಯಗೆ ವಿಪ ಸ್ಥಾನ ನೀಡಿ

1 Min Read
mallikarjun poojar press meet ex minister anjaneya mlc
ಮಲ್ಲಿಕಾರ್ಜುನ ಪೂಜಾರ.

ಕೊಪ್ಪಳ: ದಲಿತ ಸಮುದಾಯದ ಏಳ್ಗೆಗೆ ಶ್ರಮಿಸುತ್ತಿರುವ ಮಾಜಿ ಸಚಿವ ಎಚ್​.ಆಂಜನೇಯ ಅವರಿಗೆ ವಿಧಾನ ಪರಿಷತ್​ ಸದಸ್ಯತ್ವ ಸ್ಥಾನ ನೀಡಿ ಸಚಿವರನ್ನಾಗಿ ಮಾಡಬೇಕೆಂದು ಮಾದಿಗ ಮಹಾಸಭಾ ಮುಖಂಡ ಮಲ್ಲಿಕಾರ್ಜುನ ಪೂಜಾರ ಒತ್ತಾಯಿಸಿದರು.

ಆಂಜನೇಯ ಅವರು ಸಚಿವರಾಗಿದ್ದಾಗ ಮಹತ್ತರ ಕೆಲಸ ಮಾಡಿದ್ದಾರೆ. ನ್ಯಾ. ಸದಾಶಿವ ಆಯೋಗ ವರದಿ ಜಾರಿ, ಎಸ್ಸಿ&ಎಸ್ಟಿ ಕಾಯ್ದೆ ಜಾರಿ ಸೇರಿ ಅನೇಕ ದೃಢ ನಿರ್ಧಾರ ಕೈಗೊಂಡಿದ್ದಾರೆ. ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದರೂ ಚುನಾವಣೆಯಲ್ಲಿ ಸೋತಿದ್ದಾರೆ. ಸದ್ಯ ಸಂಪುಟದಲ್ಲಿ ಕೆ.ಎಚ್​.ಮುನಿಯಪ್ಪ, ಆರ್​.ಬಿ.ತಿಮ್ಮಾಪುರಗೆ ಸ್ಥಾನ ನೀಡಲಾಗಿದೆ. ಆಂಜನೇಯ ಅವರನ್ನು ಸಚಿವರನ್ನಾಗಿ ಮಾಡಿದಲ್ಲಿ ಸಮುದಾಯ ಬೇಡಿಕೆ ಈಡೇರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕಮಾರ್​ ಅವರನ್ನು ಒತ್ತಾಯಿಸಲಾಗುವುದು. ಅವರ ಸೇವೆ, ಹಿರಿತನ ಪರಿಗಣಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತೇವೆ. ನಾನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಆಕಾಂ ಇರುವೆ. ನೀತಿ ಸಂಹಿತೆ ಮುಗಿದ ಬಳಿಕ ನೇಮಕಾತಿ ನಡೆಯಲಿದೆ. ಪಕ್ಷಕ್ಕಾಗಿ ದುಡಿದಿರುವೆ. ಆಯ್ಕೆ ಮಾಡುವಂತೆ ಹಿರಿಯರಲ್ಲಿ ಮನವಿ ಮಾಡಿರುವೆ. ಪರಿಗಣಿಸುವ ವಿಶ್ವಾಸವಿದೆ ಎಂದರು. ಮಾದಿಗ ಮಹಾಸಭಾ ಪ್ರಮುಖರಾದ ನಿಂಗಜ್ಜ ಶಹಾಪುರ, ನಿಂಗಪ್ಪ ಮೈನಳ್ಳಿ, ಯಲ್ಲಪ್ಪ ಹಳೆಮನಿ, ಜುಂಜಪ್ಪ ಮೆಳ್ಳಿಕೇರಿ ಇದ್ದರು.

See also  ಆಯೋಗದ ಮಾರ್ಗಸೂಚಿ ಪಾಲಿಸಿ
Share This Article