ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

1 Min Read
kuruba community program students application for scholarship
ಹನುಮಂತಪ್ಪ ಕೌದಿ

ಕೊಪ್ಪಳ: ಹಾಲುಮತ ಮಹಾಸಭಾದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು. ಹೀಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ತಿಳಿಸಿದರು.

2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದವರು ಅರ್ಜಿ ಸಲ್ಲಿಸಬಹುದು. ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಕೊಪ್ಪಳ ತಾಲೂಕಿನ ಕುರುಬ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿ ಕಲಾ, ವಾಣಿಜ್ಯ ವಿಭಾಗದಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದವರು, ವಿಜ್ಞಾನ ವಿಭಾಗದಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದವರು ಅರ್ಜಿ ಹಾಕಬಹುದು. ಅಂಕಪಟ್ಟಿ, ಜಾತಿ ಅಥವಾ ವರ್ಗಾವಣೆ ಪ್ರಮಾಣ ಪತ್ರ, ಎರಡು ಪಾಸ್​ಪೋರ್ಟ್​ ಅಳತೆ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಕೊಪ್ಪಳದ ತಿಕೋಟಿಕರ್​ ಪೆಟ್ರೋಲ್​ ಬಂಕ್​ ಹತ್ತಿರದ ಲಕ್ಷಿ$್ಮನಾರಾಯಣ ಜೆರಾಕ್ಸ್​ ಸೆಂಟರ್​ (9611083605) ಜೂ.19ರಳಗೆ ಸಲ್ಲಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಾಹಿತಿಗೆ ದ್ಯಾಮನಗೌಡ ಭೀಮನೂರು -9901741295, ಪರಶುರಾಮ ಅಣ್ಣಿಗೇರಿ – 9880498305, ಅನ್ನದಾನಿಸ್ವಾಮಿ ಚಿಕ್ಕಸಿಂದೋಗಿ -7022176178, ಗವಿಸಿದ್ದಪ್ಪ ಗೊರವರ್​ -9035512375 ಇವರನ್ನು ಸಂಪರ್ಕಿಸಬಹುದು ಎಂದರು. ಮಂಜುನಾಥ ಮ್ಯಾಗೇರಿ, ಹನುಮಂತಪ್ಪ ಹನುಮಾಪುರ, ಮುದ್ದಪ್ಪ ಗೊಂದಿಹೊಸಳ್ಳಿ, ಕುಬೇರ ಮಜ್ಜಿಗೆ ಇತರರಿದ್ದರು.

See also  ವ್ಯಕ್ತಿ ಮೇಲೆ ನಾಲ್ಕು ಕರಡಿಗಳಿಂದ ದಾಳಿ
Share This Article