ಕೊಪ್ಪಳ: ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ ಐದು ಸಾವಿರ ಕೋಟಿ ರೂ.ಗೂ ಹೆಚ್ಚು ಬಾಕಿ ನೀಡಬೇಕು. ಇಷ್ಟು ದಿನ ಸಾಂಕೇತಿಕ ಹೋರಾಟ ಮಾಡಿ, ಮನವಿ ನೀಡಿದರೂ ಸ್ಪಂದಿಸಿಲ್ಲ. ನಮ್ಮ ತಾಳ್ಮೆ ಮೀರಿದ್ದು, ಡಿ.30ರೊಳಗೆ ಬೇಡಿಕೆ ಈಡೇರದಿದ್ದರೆ 31ರಿಂದ ಅರ್ನಿದಿಷ್ಟ ಅವಧಿ ಮುಷ್ಕರ ನಡೆಸುತ್ತೇವೆಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಟನೆಗಳ ಜಂಟಿ ಕ್ರಿಯಾ ಸಮಿತಿ ಗೌರವ ಅಧ್ಯಕ್ಷ ಯು.ಎಸ್.ಸೊಪ್ಪಿಮಠ ತಿಳಿಸಿದರು.
ಸಿಬ್ಬಂದಿ ಬಾಕಿ 325 ಕೋಟಿ ರೂ., ಭವಿಷ್ಯ ನಿಧಿ ಬಾಕಿ 2,900 ಕೋಟಿ ರೂ., 38 ತಿಂಗಳ ವೇತನ ಹೆಚ್ಚಳ ಬಾಕಿ 1,785 ಕೋಟಿ ರೂ. ಸೇರಿ 5,010 ಕೋಟಿ ರೂ. ಬಾಕಿ ಬರಬೇಕಿದೆ. ಜತೆಗೆ ಶಕ್ತಿ ಯೋಜನೆಯಡಿ ಎರಡು ಸಾವಿರ ಕೋಟಿ ರೂ. ಬಾಕಿ ನೀಡಬೇಕು. ಅದರ ಬದಲು ಸರ್ಕಾರ ಕೇವಲ ನೌಕರರ ಸಂಬಳಕ್ಕೆ ಆಗುವಷ್ಟು ಅನುದಾನ ನೀಡುತ್ತಿದೆ. ಇದರಿಂದ ನಿಗಮಗಳು ನಷ್ಟ ಎದುರಿಸುವಂತಾಗಿದೆ. ಅದನ್ನು ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವೇತನ ಒಪ್ಪಂದ ಮಾಡಿಕೊಳ್ಳಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು. ಸೌಲಭ್ಯ ಹೆಚ್ಚಿಸುವುದು ಸೇರಿ ಪ್ರಮುಖ 8 ಬೇಡಿಕೆ ಇಟ್ಟಿದ್ದೇವೆ. ಕೆಎಸ್ಆರ್ಟಿಸಿ ಸ್ಟ್ಾ ಆ್ಯಂಡ್ ವರ್ಕರ್ಸ್ ೆಡರೇಷನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ೆಡರೇಷನ್, ಕೆಎಸ್ಆರ್ಟಿಸಿ ಪಜಾ, ಪಪಂ ನೌಕರರ ಸಂ, ಕರಾರಸಾ ಸಸ್ಥೆ ಪಜಾ, ಪಪಂ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂ ಜಂಟಿಯಾಗಿ ಡಿ.31ರ ಬೆಳಗ್ಗೆ 6 ಗಂಟೆಯಿಂದ ನಮ್ಮ ಕೆಲಸ ನಿಲ್ಲಿಸಿ ಮುಷ್ಕರದಲ್ಲಿ ಭಾಗಿಯಾಗಲಿದ್ದೇವೆ.
ಅಷ್ಟೊರಳಗೆ ಸರ್ಕಾರ ನಮ್ಮೊಡನೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಿದಲ್ಲಿ ಮುಷ್ಕರ ಕೈ ಬಿಡುತ್ತೇವೆ. ಇನ್ನೊಂದು ಸಂಟನೆ ಇದ್ದು, ಅದರಲ್ಲಿ ಕಡಿಮೆ ನೌಕರರು ಗುರುತಿಸಿಕೊಂಡಿದ್ದಾರೆ. ಅವರು ಈವರೆಗೆ ಬೆಂಬಲ ನೀಡಿಲ್ಲವೆಂದು ಮಾಹಿತಿ ನೀಡಿದರು. ಪ್ರಮುಖರಾದ ಹನುಮಂತಪ್ಪ ಅಂಬಿಗೇರ, ಎ.ಬಿ.ದಿಂಡೂರು, ಎಸ್.ಎ.ಗಾರ, ಮಕ್ಬುಲ್ ರಾಯಚೂರು ಇದ್ದರು.