ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಹಿಂದುಳಿದ ವರ್ಗಗಳ ಬಾಲಕರ ಪಿಯು ವಸತಿ ಶಾಲೆಯಲ್ಲಿ ಅಡುಗೆದಾರನಾಗಿ ಕೆಲಸ ಮಾಡುತ್ತಿದ್ದ ಬಸವರಾಜ ಕಿತ್ತೂರು (36) ಆಯ ತಪ್ಪಿ ನೀರಿನ ಟ್ಯಾಂಕ್ನಲ್ಲಿ ಬಿದ್ದು ಬುಧವಾರ ಸಂಜೆ ಮೃತಪಟ್ಟಿದ್ದಾನೆ.
ಕಳೆದ ಆರು ವರ್ಷದಿಂದ ನಿಲಯದಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಬುಧವಾರ ಟ್ಯಾಂಕಿನ ಮೋಟಾರ್ ಚಾಲು ಆದ ಬಗ್ಗೆ ಪರಿಶೀಲನೆಗೆ ತೆರಳಿದ್ದಾನೆ. ಈ ವೇಳೆ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಟನೆ ಕುರಿತು ಮೃತನ ಪತ್ನಿ ಮಲ್ಲವ್ವ ನೀಡಿದ ದೂರಿನ ಅನ್ವಯ ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.