ಕೊಪ್ಪಳ : ರಾಜ್ಯದ ಆರೋಗ್ಯ ವ್ಯವಸ್ಥೆ ಸರಿಯಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ಸಿಗಬೇಕು. ರಾಜಸ್ಥಾನ ರಾಜ್ಯ ಸರ್ಕಾರ ಮಾಡಿರುವ ಆರೋಗ್ಯ ಹಕ್ಕು ಮಸೂದೆ ರಾಜ್ಯವೂ ಜಾರಿ ಮಾಡಬೇಕೆಂದು ಡ್ರಗ್ಸ್ ಆ್ಯಕ್ಷನ್ ೋರಂ ಕರ್ನಾಟಕ ಸಂಸ್ಥೆ ಸಂಚಾಲಕರು ಒತ್ತಾಯಿಸಿದರು.
ನಮ್ಮ ಸಂಸ್ಥೆ ಸಾರ್ವತ್ರಿಕ ಆರೋಗ್ಯ ಆಂದೋಲನ ನಡೆಸುತ್ತಿದೆ. ಕೊಪ್ಪಳದಲ್ಲಿ ಈ ಕುರಿತು ಜಾಗೃತಿ ಸಭೆ ನಡೆಸಿದ್ದೇವೆ. ಗುಣಮಟ್ಟದ ಸಲೈನ್ ನೀಡದ ಕಾರಣ ಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗಿದೆ. ಗುಣಮಟ್ಟದ ಔಷಧ ಖರೀದಿಗೆಂದೇ ರಾಜ್ಯ ವೈದ್ಯಕಿಯ ಸರಬರಾಜು ನಿಗಮವಿದೆ. ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಲ್ಲಿ ಅನಾಹುತ ಸಂಭವಿಸುತ್ತಿರಲಿಲ್ಲ. ವಿವಿಧ ಕಂಪನಿಗಳು ಉತ್ಪಾದಿಸುವ ಔಷಧವನ್ನು ನಿಗಮ ಖರೀದಿ ಮಾಡುತ್ತದೆ. ಪ್ರತಿ ಬ್ಯಾಚ್ ಔಷಧ ಪರೀೆಗೆ ಒಳಪಡಿಸಬೇಕು. ಒಂದೊಮ್ಮೆ ಕಳಪೆಯಾಗಿದ್ದರೆ ಆರಂಭದಲ್ಲೇ ತಿಳಿಯುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಹೊರಗೆ ತೆಗೆದುಕೊಳ್ಳುವಂತೆ ಸೂಚಿಸಬಾರದು. ಎಲ್ಲ ಔಷಧ ಅಲ್ಲಿಯೇ ಸಿಗುವಂತೆ ಮಾಡಬೇಕೆಂದರು.
ಫೋರಂನ ಪ್ರಮುಖರಾದ ಡಾ. ಗೋಪಾಲ ದಾಬಡೆ, ಮಂಜುಳಾ, ಕೆ.ಎಂ. ಗೋಪಕುಮಾರ, ಶೀಲಾ ಹಾಲಕುರ್ಕಿ ಹಾಗೂ ಬೆಂಬಲಿಗ ಎಸ್. ಆರ್. ಹಿರೇಮಠ ಇದ್ದರು.