ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಹೊಸದಾಗಿ ಕಾರ್ಖಾನೆಗಳು ಬೇಡ. ಯಾರೂ ಎದುರಾದರೂ ನಾನು ಮಾತ್ರ ಬಿಎಸ್ಪಿಎಲ್ ಕಾರ್ಖಾನೆ ವಿಸ್ತರಣೆ ವಿರುದ್ಧ ಹೋರಾಡುವೆ. ಎಲ್ಲರೂ ಪಾತೀತವಾಗಿ ಹೋರಾಟ ಬೆಂಬಲಿಸಿ. ಸರ್ಕಾರ ತಕ್ಷಣ ಅನುಮತಿ ರದ್ದುಪಡಿಸಬೇಕೆಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಕೆದಾರರ ಸಮಾವೇಶದಲ್ಲಿ ಕೊಪ್ಪಳದಲ್ಲಿ ಬಲ್ಡೋಟಾ ಕಂಪನಿ 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಎರಡನೇ ದೊಡ್ಡ ಉಕ್ಕು ಕಾರ್ಖಾನೆ ನಿರ್ಮಾಣಕ್ಕೆ ಅನುಮೋದಿಸಿದನ್ನು ಖಂಡಿಸಿ ಬುಧವಾರ ಮಾತನಾಡಿದರು.
ನಾವೂ ಯಾರನ್ನೂ ಟೀಕಿಸುವುದಿಲ್ಲ. ಈಗಲೇ ಇರುವ ಕಾರ್ಖಾನೆಗಳಿಂದ ಸಾಕಷ್ಟು ಪರಿಸರ ಹಾಳಾಗಿದೆ. ಹಿಂದೆ ಯಾರು ಅನುಮತಿ ಕೊಟ್ಟರು, ಈಗ ಯಾರು ಕೊಟ್ಟರು ಎಂಬುದು ಬೇಡ. ಒಟ್ಟಿನಲ್ಲಿ ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ನಿರ್ಮಿಸುವುದು ಬೇಡ. ಒಂದೊಮ್ಮೆ ಕಾರ್ಖಾನೆ ಆರಂಭವಾದಲ್ಲಿ ಕೊಪ್ಪಳದಲ್ಲಿ ತೊಟ್ಟಿಲು ತೂಗುವ ಜನರಿಗಿಂತ ಸ್ಮಶಾನಕ್ಕೆ ಹೋಗುವವರ ಸಂಖ್ಯೆ ಅಧಿಕವಾಗಲಿದೆ. ನಮ್ಮೆಲ್ಲರ ಆಯುಷ್ಯ 10&15 ವರ್ಷ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಲೇ ತುಂಗಭದ್ರಾ ಡ್ಯಾಂನಲ್ಲಿ ನೀರಿನ ಕೊರತೆ ಇದೆ. ಸಿಂಧನೂರು, ಮಾನ್ವಿ, ರಾಯಚೂರು ಭಾಗಗಳಲ್ಲಿ ನೀರು ಸಿಗುತ್ತಿಲ್ಲ. 7 ದಿನಕ್ಕೆ ಒಮ್ಮೆ ಕುಡಿವ ನೀರು ಬರುತ್ತಿದೆ. ಹೊಸ ಕಾರ್ಖಾನೆಗಳು ಹೆಚ್ಚಿದಲ್ಲಿ ನೀರಿನ ಕೊರತೆ ಹೆಚ್ಚಲಿದೆ. ಮುಂದೆ ಕುಡಿವ ನೀರಿಗೂ ಪರದಾಡಬೇಕಾಗಲಿದೆ. ಇದು ನಮ್ಮ ಬದುಕಿನ ಪ್ರಶ್ನೆ. ಜನರೆಲ್ಲ ್ಯಾಕ್ಟರಿ ಬೇಕೆಂದರೂ ನಾನು ಮಾತ್ರ ಬೇಡವೆಂದು ಹೋರಾಡುವೆ. ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು.
ನಾನೂ ಈಗಾಗಲೇ ಸಿಎಂ ಸಿದ್ದರಾಮಯ್ಯ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಕರೆ ಮಾತನಾಡಿ ಕಾರ್ಖಾನೆ ಬೇಡವೆಂದು ಮನವಿ ಮಾಡಿರುವೆ. ಜಿಲ್ಲೆಯ ಜನಪ್ರತಿನಿಧಿಗಳು ಪಾತೀತವಾಗಿ ಮಾಡಿ. ಎಂಎಸ್ಪಿಎಲ್ ಕಂಪನಿಯವರು ಮಾ.16ರಂದು ಹೊಸ ಕಾರ್ಖಾನೆ ಭೂಮಿ ಪೂಜೆಗೆ ನನ್ನನ್ನು ಆಹ್ವಾನಿಸಿದ್ದರು. ನಾನು ತಿರಸ್ಕರಿಸಿರುವೆ. ಇದು ನಿರಂತರ ಹೋರಾಟ. ೆ.24ರಂದು ಕೊಪ್ಪಳ ಬಂದ್ ಯಶಸ್ವಿಯಾಗಿ ಮಾಡೋಣ. ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು, ಸಂಟನೆಗಳು ಭಾಗಿಯಾಗಿ. ನಾನು ಸದಾ ನಿಮ್ಮೊಂದಿಗಿರುವೆ ಎಂದು ಬೆಂಬಲಿಸಿದರು.