ಕೊಪ್ಪಳ: ನಗರದ ಗವಿಮಠದ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಪದ್ಮಶ್ರೀ ಪುರಸತ ಹಾಜಬ್ಬ ಜು.1ರಂದು ಉದ್ಘಾಟಿಸಲಿದ್ದಾರೆ.
ಬಡ ಮಕ್ಕಳ ಶಿಕ್ಷಣಕ್ಕಾಗಿ ಗವಿಮಠ ಉಚಿತ ಪ್ರಸಾದ ನಿಲಯ ಹಾಗೂ ಹಾಸ್ಟೆಲ್ ನಡೆಸುತ್ತಿದೆ. ಈ ಮೊದಲು ಎರಡು ಸಾವಿರ ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಿದ ಕಾರಣ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಸಂಕಲ್ಪದಂತೆ 5 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಹಾಸ್ಟೆಲ್ ನಿರ್ಮಿಸಲಾಗಿದೆ. ಸುಸಜ್ಜಿತ ಆಧುನಿಕವಾಗಿ ನಿರ್ಮಿಸಿದ್ದು, ಜು.1ರಂದು ಉದ್ಘಾಟನೆಯಾಗಲಿದೆ. ಪದ್ಮಶ್ರೀ ಪುರಸತ ಹಾಜಬ್ಬ ಹಾಗೂ ರಾಜ್ಯೋತ್ಸವ ಪುರಸತೆ ಕುಣಕೇರಿಯ ಹುಚ್ಚಮ್ಮ ಚೌದ್ರಿ ಹಾಸ್ಟೆಲ್ ಉದ್ಘಾಟಿಸುವರು. ಮುಂಡರಗಿ ಅನ್ನದಾನೀಶ್ವರ ಮಠದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನಿಧ್ಯವಹಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ನಿವಾಸಿ ಹಾಜಬ್ಬ ಬೀಡಿ ಕಟ್ಟುತ್ತಲೇ ಕುಟುಂಬಕ್ಕೆ ನೆರವಾಗುತ್ತಿದ್ದರು. ನಂತರ ಕಿತ್ತಳೆ ಹಣ್ಣು ಹೊತ್ತು ಮಾರುತ್ತಿದ್ದರು. ಓದು&ಬರಹ ಬಾರದಿದ್ದರೂ ತಮ್ಮೂರಿನಲ್ಲಿ ಶಾಲೆ ನಿರ್ಮಿಸಲು ಕಾರಣರಾಗಿದ್ದಾರೆ. ಇನ್ನು ಹುಚ್ಚಮ್ಮ ಚೌದ್ರಿ ಶಾಲಾ ಮಕ್ಕಳಿಗಾಗಿ ತಮ್ಮ ಎರಡು ಎಕರೆ ಜಮೀನು ದಾನ ಮಾಡಿದ್ದಾರೆ. ಇಬ್ಬರು ಶಿಕ್ಷಣ ರಂಗಕ್ಕೆ ಸೇವೆ ಸಲ್ಲಿಸಿದವರಾಗಿದ್ದು, ಅವರಿಂದಲೇ ಹಾಸ್ಟೆಲ್ ಉದ್ಘಾಟನೆ ಆಗಲಿದೆ.