ಕೊಪ್ಪಳ: ಬೇಸಿಗೆಯಲ್ಲಿ ಆರೋಗ್ಯಕರ, ಪೌಷ್ಠಿಕ ಖನಿಜಾಂಶಗಳನ್ನು ಹೊಂದಿದ ತಾಳೆ ಹಣ್ಣುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಆದಾಯದ ದೃಷ್ಠಿಯಿಂದಲೂ ತಾಳೆ ಹಣ್ಣು ಉತ್ತಮ ವ್ಯಾಪಾರವಾಗಿದ್ದು, ತಾಳೆ ಮರಗಳ ನಾಟಿ, ಬೆಳೆಸುವ ಪದ್ಧತಿ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಮಾಹಿತಿ ನೀಡಿದೆ.

ಈ ವರ್ಫಿ ಬೇಸಿಗೆ ಆರಂಭ ಆದಾಗಿನಿಂದ ಜಿಲ್ಲೆಯಲ್ಲಿ ತಾಳೆ ಹಣ್ಣುಗಳ ಮಾರಾಟ ಭರಾಟೆಯಿಂದ ಸಾಗಿದೆ. ರಾಯಚೂರು, ಆಂಧ್ರ ಭಾಗದಲ್ಲಿ ಕಾಣಸಿಗುತ್ತಿದ್ದ ಈ ಹಣ್ಣು ಈಗ ಬೆಂಗಳೂರಿನಲ್ಲೂ ತುಂಬ ಬೇಡಿಕೆ ಪಡೆದಿದೆ. ಇಂಗ್ಲೀಫ್ಿನಲ್ಲಿ ಐಸ್???ಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ವೈಜ್ಞಾನಿಕ ಹೆಸರು ಬೋರಾಸಸ್ಫ್ಲಾಬೆಲ್ಲಿಫೋರ್. ಇದಲ್ಲದೇ ಅನೇಕ ಪ್ರಭೇದಗಳು ಕಂಡು ಬರುತ್ತವೆ. ಇದೊಂದು ದಕ್ಷಿಣ ಆಫ್ರಿಕಾ ದೇಶದ ಬೆಳೆಯಾಗಿದ್ದು, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಹೆಚ್ಚಿನ ರೈತರು ಬೆಳೆಯಲು ಆರಂಭಿಸಿದ್ದಾರೆ.
ಹಳದಿ, ಕಂದು ಮತ್ತು ಕಪ್ಪು ಬಣ್ಣ ಹೊಂದಿರುವ ಈ ಹಣ್ಣಿನಲ್ಲಿ 3 ಬೀಜಗಳು (ತಿರುಳು) ಕಂಡು ಬರುತ್ತವೆ. ಈ ತಿರುಳು ಎಳೆಯ ಕೊಬ್ಬರಿಯಂತೆ ತುಂಬಾ ರುಚಿಯಾಗಿರುತ್ತವೆ. ಇದಲ್ಲದೇ ಪೋಫಿಕಾಂಶಗಳ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ಕಬ್ಬಿಣ, ಪೋಟ್ಯಾಶ್ ಮುಂತಾದ ಖನಿಜಾಂಶಗಳಿರುತ್ತವೆ. ಇದು ಕ್ಷಯರೋಗ, ಚರ್ಮವ್ಯಾಧಿ ಮುಂತಾದವುಗಳಿಗೆ ಉತ್ತಮ ಔಫಿಧಿಯಾಗಿದೆ. ಇದರಿಂದ ತಯಾರಿಸಿದ ಬೆಲ್ಲ ತಮಿಳುನಾಡಿನಲ್ಲಿ ತುಂಬಾ ಬೇಡಿಕೆಯನ್ನು ಹೊಂದಿದೆ. ಈ ಬೆಲ್ಲವನ್ನು ತಾಳೆಗರಿಯಿಂದಲೇ ತಯಾರಿಸಿದ ಪೆಟ್ಟಿಗೆಗಳಲ್ಲಿಟ್ಟು ಮಾರುತ್ತಾರೆ. ಇದರ ಪೂರ್ತಿಗಿಡದ ಎಲ್ಲಾ ಭಾಗಗಳು ಒಂದಿಲ್ಲೊಂದು ಉಪಯೋಗವನ್ನು ಹೊಂದಿದೆ. ಈ ಮರ 3 ಮೀಟರ್ ಸುತ್ತಳತೆ ಹೊಂದಿದ್ದು, ಸುಮಾರು 30 ಮೀಟರ್ ಎತ್ತರದಫಿ್ಟು ಬೆಳೆಯುತ್ತದೆ. ಒಂದು ಸಾರಿ ಪೂರ್ಣ ಬೆಳೆದ ಮೇಲೆ ನೀರಿನ ಅವಶ್ಯಕತೆ ಇರುವುದಿಲ್ಲ. ವಾತಾವರಣದಲ್ಲಿನ ತೇವಾಂಶವನ್ನೇ ಹೀರಿಕೊಂಡು ಬೆಳೆಯುವ ಈ ಬೆಳೆ ಬದುವಿನಲ್ಲಿ ನಾಟಿ ಮಾಡಲು ಮತ್ತು ಮಣ್ಣುಕೊಚ್ಚಿ ಹೋಗದಂತೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.
ನಾಟಿ ಮಾಡಿದ 15 ವರ್ಫಿಗಳ ನಂತರ ಹಣ್ಣುಕೊಡಲು ಆರಂಭಿಸುವ ಈ ಮರ 100 ವರ್ಫಿಗಳವರೆಗೂ ವರ್ಫಿಕ್ಕೆ ಸುಮಾರು 100 ಕಾಯಿಗಳಫಿ್ಟು ಫಲ ನೀಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕಾಯಿ ಬೆಲೆ ರೂ. 20-30 ಗಳು ಇದ್ದು, ರೈತರಿಗೆ ಬೇಸಿಗೆ ಕಾಲದಲ್ಲಿ ಉತ್ತಮ ಆದಾಯ ನೀಡುತ್ತದೆ. ಇದರ ಗರಿಗಳಿಂದ ಬೀಸಣಿಕೆ ಮುಂತಾದ ವಸ್ತುಗಳನ್ನಲ್ಲದೇ ಅಲಂಕಾರಿಕ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ನೀರಾ ಕೂಡ ತೆಗೆದು ಮಾರಾಟ ಮಾಡಬಹುದಾಗಿದೆ.