ಕೊಪ್ಪಳ: ಕಾನೂನಿ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಿಚಾರಣೆಗೆ ಹಾಜರಾಗಬೆಕು. ವಿಡಿಯೋ ಹಂಚಿಕೆ ಮಾಡಿದ್ದೂ ಹೇಯ ಕೃತ್ಯ ಅವರಿಗೂ ಶಿೆಯಾಗಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ನಗರದ ಗವಿಮಠಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹಾಳಾಗಿದೆ. ಸಮಾಜಘಾತುಕರಿಗೆ ಮರ್ಯಾದೆ ನೀಡಲಾಗುತ್ತಿದೆ. ಜೈ ಶ್ರೀರಾಮ್ ಎಂದರೆ ಕ್ರಮ ಕೈಗೊಳ್ಳುತ್ತಾರೆ. ಸಮಾಜಕ್ಕೆ ಧಕ್ಕೆಯಾಗುವ ಕೆಲಸವಾದರೆ ಏನೂ ಆಗಿಲ್ಲ ಎನ್ನುತ್ತಾರೆ. ಶಿಕ್ಷಣ ವ್ಯವಸ್ಥೆಯೂ ಕುಸಿದಿದೆ. ಶಿಕ್ಷಕರ ನೇಮಕಾತಿ ಆಗತ್ತಿಲ್ಲ. 14 ಸಾವಿರ ಶಿಕ್ಷಕರ ನೇಮಕಾತಿ ಆಗಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಣ ರಂಗಕ್ಕೆ ನಾವು 5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೆವು. ಈ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಕಿಡಿ ಕಾರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು. ಅಧಿಕಾರಿ ಸ್ಪಷ್ಟವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಈಶ್ವರಪ್ಪ ತಪು$್ಪ ಮಾಡದಿದ್ದರೂ ಆರೋಪ ಹೊರಿಸಿದ್ದರು. ಈಗ 94 ಕೋಟಿ ರೂ. ತೆಲಂಗಾಣ ಚುನಾವಣೆಗೆ ನೀಡಿದ್ದಾರೆ. ಸರ್ಕಾರ ಖಜಾನೆ ದಿವಾಳಿ ಮಾಡಿದೆ. ನೌಕರರು, ಗುತ್ತಿಗೆದಾರರಿಗೆ ದುಡಿದ ದುಡ್ಡು ನೀಡುತ್ತಿಲ್ಲ. ಬಿತ್ತನೆ ಬೀಜ ದರ ಏರಿಸಿ ರೈತರ ಪಾಲಿಗೂ ಸರ್ಕಾರ ಸತ್ತಿದೆ. ಸಹಾಯಧನ ನೀಡಲು ಅವಕಾಶವಿದೆ. ಆದರೆ, ಇವರಿಗೆ ಮನಸ್ಸಿಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗವಿಮಠದಲ್ಲಿ ಸುತ್ತಾಟ
ಹೊಸಪೇಟೆ ಪ್ರವಾಸದಲ್ಲಿದ್ದ ಬೊಮ್ಮಾಯಿ ದಢೀರ್ ಗವಿಮಠಕ್ಕೆ ಭೇಟಿ ನೀಡಿದರು. ಗವಿಶ್ರೀಗಳ ಆಶೀರ್ವಾದ ಪಡೆದುಕೊಂಡರು. ಬಳಿಕ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ವೀಸಿದರು. ಶ್ರೀಗಳಿಂದ ಮಾಹಿತಿ ಪಡೆದರು. ಕೆರೆ, ದಾಸೋಹ ಮಂಟಪ, ಕಚೇರಿ, ಯುಟಿಲಿಟಿ ವಿಭಾಗಗಳನ್ನು ವೀಸಿದರು.
ಗವಿಮಠಕ್ಕೆ ಬರಬೇಕೆಂದು ಬಹಳ ದಿನಗಳಿಂದ ಅನಿಸಿತ್ತು. ಚುನಾವಣೆ ಕಾರಣ ಬರಲಾಗಿರಲಿಲ್ಲ. ಮಠಕ್ಕೆ ದೊಡ್ಡ ಪರಂಪರೆ ಇದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಭಿನ್ನವಾಗಿರುವ ಮಠ ಇದಾಗಿದೆ. ಇಲ್ಲಿ ಬಂದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಶ್ರೀಗಳ ಆಶೀರ್ವಾದ ಪಡೆದಿದ್ದು ಖುಷಿ ಎನಿಸಿದೆ.
ಬಸವರಾಜ ಬೊಮ್ಮಾಯಿ. ಮಾಜಿ ಸಿಎಂ.