ಕೊಪ್ಪಳ: ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡೆತ್ ನೋಟ್ ಬರೆದ ವಿದ್ಯುತ್ ಗುತ್ತಿಗೆದಾರನೋರ್ವ ವಿಷ ಸೇವಿಸಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಾಲೂಕಿನ ಗಿಣಿಗೇರಾ ನಿವಾಸಿ ಜಯರಾಂ ಪತ್ತಾರ (46)ಆತ್ಮಹತ್ಯೆಗೆ ಯುತ್ನಿಸಿದ ಗುತ್ತಿಗೆದಾರ. ರೇಸಾರ್ಟ್ವೊಂದರ ವಿದ್ಯುತ್ ಕಾಮಗಾರಿ ನಿರ್ವಹಿಸಿದ ಜಯರಾಂ, ಇಲಾಖೆಗೆ ಬಿಲ್ ಸಲ್ಲಿಸಿದ್ದಾರೆ. ಇದೇ ಅವಧಿಯಲ್ಲಿ ಜೆಸ್ಕಾಂ ಎಇಇ ಸಂತೋಷ ವಿದ್ಯುತ್ ಸಂಪರ್ಕ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ೈಲ್ ಕಳೆದಿದೆ ಎಂದಿದ್ದಾರೆ. ವಿನಾ ಕಾರಣ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾನೆ. ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.