ಕ್ಯಾನ್ಸರ್​ ಬಗ್ಗೆ ಅರಿವು ಮೂಡಿಸಿ, ಡಿಎಚ್​ಒ ಲಿಂಗರಾಜು ಸಲಹೆ

district koppal dho lingaraju cancer

ಕೊಪ್ಪಳ: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸ್ಲಂಗಳಲ್ಲಿ ಕ್ಯಾನ್ಸರ್​ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ಸಲಹೆ ನೀಡಿದರು.

ನಗರದ ಜಿಪಂ ಜೆಎಚ್​ ಪಟೇಲ್​ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್​ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಯಾನ್ಸರ್​ ಅಸಾಂಕ್ರಾಮಿಕ ರೋಗ. ಪುರುಷರಲ್ಲಿ ಬಾಯಿ, ಶ್ವಾಶಕೋಶ, ಅನ್ನನಾಳ ಕ್ಯಾನ್ಸರ್​ ಹಾಗೂ ಮಹಿಳೆಯರಲ್ಲಿ ಗರ್ಭಕಂಠ, ಸ್ತನ ಹಾಗೂ ಬಾಯಿ ಕ್ಯಾನ್ಸರ್​ ಬರುವ ಸಾಧ್ಯತೆ ಇದೆ. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹುದಿನದ ಕೆಮ್ಮು, ನೋವಿಲ್ಲದ ಗಡ್ಡೆ, ಊತ ಕ್ಯಾನ್ಸರ್​ ಲಕ್ಷಣಗಳಾಗಿರಬಹುದು. ಇವುಗಳು ಕಾಣಿಸಿಕೊಂಡಲ್ಲಿ ರ್ನಿಲಸದೇ ಪರೀೆ ಮಾಡಿಸಿಕೊಳ್ಳಿ. ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ. ಸಿರಿಧಾನ್ಯ ಸೇವಿಸಿ. ಹೊರಗಿನ ತಿಂಡಿ ಹೆಚ್ಚಾಗಿ ತಿನ್ನದಿರಿ. ತರಕಾರಿ, ಹಣ್ಣು ಸೇವನೆಗೆ ಆದ್ಯತೆ ನೀಡಿ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್​ ಮಾತನಾಡಿ, ಇಲಾಖೆಯಿಂದ ಬರುವ ವರ್ಷದಿಂದ 30 ವರ್ಷ ಮೇಲ್ಪಟ್ಟವರಿಗೂ ಕ್ಯಾನ್ಸರ್​ ಉಚಿತ ತಪಾಸಣೆ ಮಾಡಲಾಗುವುದೆಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ್​ ಎಂ.ಎಚ್​., ಡಾ.ವೆಂಟಕೇಶ, ಡಾ.ಪ್ರಕಾಶ ಎಚ್​., ಡಾ.ಸುರೇಖಾ, ಡಾ.ರಾಜು, ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಇತರರಿದ್ದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…