ಕೊಪ್ಪಳ: ನಗರಕ್ಕೆ ಹೊಂದಿಕೊಂಡಿರುವ ಹಿರೇಹಳ್ಳದ ಪಕ್ಕದ ಜಮೀನಿನಲ್ಲಿ ಗುರುವಾರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದದೇಗಲ್ ಗ್ರಾಮದ ತೋಟಪ್ಪ ಎಂಬುವವರ ಜಮೀನಿನಲ್ಲಿ ಶವ ಸಿಕ್ಕಿದೆ. ಗುರುವಾರ ಮೆಕ್ಕೆಜೋಳ ಕಟಾವಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಳ್ಳಕ್ಕೆ ಹೊಂದಿಕೊಂಡ ಜಮೀನಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಸಿಕ್ಕಿದೆ. ರುಂಡವು ಹಗ್ಗದಲ್ಲಿ ನೇತಾಡುತ್ತಿದ್ದು, ಮುಂಡ ಕೆಳಗೆ ಬಿದ್ದಿದ್ದು ಕೊಳೆತ ಸ್ಥಿತಿಯಲ್ಲಿದೆ. ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.