More

  ಮತದಾನ ಜಾಗೃತಿಗಾಗಿ ಕ್ರಿಕೆಟ್​ ಆಟ, ಪತ್ರಕರ್ತರು- ಅಧಿಕಾರಿಗಳ ತಂಡದಿಂದ ಪ್ರದರ್ಶನ

  ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲಾಡಳಿತದಿಂದ ಶನಿವಾರ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಕರ್ತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ತಂಡಗಳ ನಡುವೆ ಕ್ರಿಕೆಟ್​ ಪಂದ್ಯಾವಳಿ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

  ಪಂದ್ಯಾವಳಿಗೂ ಮುನ್ನ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್​ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಮತದಾನ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಮನೆ ಭೇಟಿ, ವಾಕಥಾನ್​, ಬೈಕ್​ ರಾಲಿ, ಎತ್ತಿನ ಬಂಡಿ ಅಭಿಯಾನ, ಮ್ಯಾರಾಥಾನ್​, ಪಂಜಿನ ಮೆರವಣಿಗೆ, ವಿಶೇಷ ಚೇತನರ ಬೈಕ್​ ರ್ಯಾಲಿ, ಆರೋಗ್ಯ ಶಿಬಿರ, ಮಹಿಳೆಯರಿಂದ ಮಾನವ ಸರಪಳಿ, ಕ್ಯಾಂಡಲ್​ ಲೈಟ್​ ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

  ಜಿಲ್ಲಾಡಳಿತ, ಜಿಪಂ ಹಾಗೂ ಕೊಪ್ಪಳ ಮೀಡಿಯಾ ಕ್ಲಬ್​, ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಂಡಗಳ ನಡುವೆ ಕ್ರಿಕೆಟ್​ ನಡೆಯಿತು. ಎರಡು ಮಾಧ್ಯಮ ತಂಡಗಳ ವಿರುದ್ಧ ಜಿಲ್ಲಾಡಳಿತ ತಂಡ ವಿಜಯ ಸಾಧಿಸಿತು. ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸಕ್ರಿಯವಾಗಿ ಭಾಗಿಯಾಗಿ ಗಮನ ಸೆಳೆದರು.

  ಪ್ರಭುರಾಜ ಎಂಬುವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಸಂದೇಶ ಹಾಕಿಸಿದ್ದು, ಸಿಇಒಗೆ ನೀಡಿ ಮದುವೆಗೆ ಆಹ್ವಾನಿಸಿದರು. ಚುನಾವಣಾ ವೀಕ್ಷಕ ಚಂದ್ರಶೇಖರ್​ ತೆಮ್ಮಬಾವೇಕರ್​, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್​ ಮಾಲಿ ಪಾಟೀಲ್​, ಮೈಬೂಬು ಕಿಲ್ಲೆದಾರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್​ ಅತ್ತಾರ್​, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts